ನಾಳೆಯಿಂದ ಎಲ್‌ಪಿಜಿ ಸಿಲಿಂಡರ್‌ ಮತ್ತಷ್ಟು ಅಗ್ಗ, ಗೃಹಬಳಕೆ ಸಿಲಿಂಡರ್‌ನಲ್ಲಿ ಬದಲಾವಣೆ ಇಲ್ಲ | Commercial Lpg Cylinders Get Cheaper By Rs 33 50 From Aug 1 San

ಆಗಸ್ಟ್ 1 ರಿಂದ 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ 33.50 ರೂ.ಗಳಷ್ಟು ಇಳಿಕೆ. ದೆಹಲಿಯಲ್ಲಿ ಹೊಸ ಬೆಲೆ 1631.50 ರೂ. ದೇಶೀಯ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ.

ನವದೆಹಲಿ (ಜು.31): ಒಂದೆಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತದ ಮೇಲೆ ಶೇ. 25ರಷ್ಟು ತೆರಿಗೆ ಹೇರಿದ ಭಾರದಲ್ಲಿರುವ ನಡುವೆ, ರಷ್ಯಾದಿಂದ ಭಾರತದ ತೈಲ ಆಮದು ಕೂಡ ನಿಂತುಹೋಗುವ ಲಕ್ಷಣಗಳು ಕಾಣುತ್ತಿವೆ. ಇದರ ನಡುವೆ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಗಳನ್ನು ಪರಿಷ್ಕರಣೆ ಮಾಡಿದೆ. 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ದರವನ್ನು ನಾಳೆಯಿಂದ ಅಂದರೆ ಆಗಸ್ಟ್‌ 1 ರಿಂದ ಜಾರಿಗೆ ಬರುವಂತೆ 33.50 ರೂ.ಗಳಷ್ಟು ಕಡಿಮೆ ಮಾಡಲಾಗಿದೆ. ದೆಹಲಿಯಲ್ಲಿ, 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಚಿಲ್ಲರೆ ಮಾರಾಟ ಬೆಲೆ ಆಗಸ್ಟ್ 1 ರಿಂದ 1631.50 ರೂ.ಗಳಾಗಿರುತ್ತದೆ. 14.2 ಕೆಜಿ ದೇಶೀಯ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಜುಲೈ 1 ರಂದು ಬೆಲೆ ಪರಿಷ್ಕರಣೆ ಮಾಡಿದ್ದಾಗ, ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು 58.50 ರೂಪಾಯಿಯಷ್ಟು ಇಳಿಕೆ ಮಾಡಲಾಗಿತ್ತು. ಅದರೊಂದಿಗೆ ಕಳೆದ ಏಪ್ರಿಲ್‌ನಿಂದ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯಲ್ಲಿ ಇಲ್ಲಿಯವರೆಗೂ 176 ರೂಪಾಯಿ ಅಗ್ಗವಾದಂತಾಗಿದೆ. ಏಪ್ರಿಲ್‌ 1 ರಂದು ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1836.50 ರೂಪಾಯಿ ಆಗಿದ್ದರೆ, ಆಗಸ್ಟ್‌ 1 ರ ವೇಳೆಗೆ ಇದರ ಬೆಲೆ 1704.50 ರೂಪಾಯಿ ಆಗಿರಲಿದೆ.

Scroll to load tweet…

Source link

Leave a Reply

Your email address will not be published. Required fields are marked *