Headlines

Breastfeeding tips for new mothers ಮಕ್ಕಳಿಗೆ ಹಾಲುಣಿಸುವ ಬಗ್ಗೆ ತಾಯಂದಿರಲ್ಲಿರುವ ಪ್ರಶ್ನೆಗಳಿಗೆ ತಜ್ಞರ ಉತ್ತರ, ಅವಳಿ ಮಕ್ಕಳ ತಾಯಿ ಚಿಂತೆ ಬಿಡಿ | Breastfeeding Guide New Mothers Expert Tips For Twins Milk Supply Storage Gow

Breastfeeding tips for new mothers ಮಕ್ಕಳಿಗೆ ಹಾಲುಣಿಸುವ ಬಗ್ಗೆ ತಾಯಂದಿರಲ್ಲಿರುವ ಪ್ರಶ್ನೆಗಳಿಗೆ ತಜ್ಞರ ಉತ್ತರ, ಅವಳಿ ಮಕ್ಕಳ ತಾಯಿ ಚಿಂತೆ ಬಿಡಿ | Breastfeeding Guide New Mothers Expert Tips For Twins Milk Supply Storage Gow



Breastfeeding tips for new mothers ಮಕ್ಕಳಿಗೆ ಹಾಲುಣಿಸುವ ಬಗ್ಗೆ ತಾಯಂದಿರಲ್ಲಿರುವ ಪ್ರಶ್ನೆಗಳಿಗೆ ತಜ್ಞರ ಉತ್ತರ, ಅವಳಿ ಮಕ್ಕಳ ತಾಯಿ ಚಿಂತೆ ಬಿಡಿ | Breastfeeding Guide New Mothers Expert Tips For Twins Milk Supply Storage Gow

ಅವಳಿ ಮಕ್ಕಳಿಗೆ ಹಾಲುಣಿಸುವ ಬಗ್ಗೆ ತಾಯಂದಿರಲ್ಲಿರುವ ಸಾಮಾನ್ಯ ಪ್ರಶ್ನೆಗಳಾದ ಹಾಲಿನ ಪೂರೈಕೆ, ಮಗುವಿಗೆ ಹಾಲು ಸಾಕಾಗುತ್ತದೆಯೇ ಎಂಬುದರ ಬಗ್ಗೆ ಮಾಹಿತಿ ನೀಡಲಾಗಿದೆ. ಹಾಲಿನ ಪೂರೈಕೆಯನ್ನು ಹೆಚ್ಚಿಸುವ ಸಲಹೆಗಳನ್ನು ಮತ್ತು ಎದೆಹಾಲನ್ನು ಸಂಗ್ರಹಿಸುವ ವಿಧಾನಗಳನ್ನು ವಿವರಿಸಲಾಗಿದೆ.

ಮೊದಲ ಬಾರಿಗೆ ತಾಯಿಯಾದ ಮಹಿಳೆಯರಿಗೆ ಹಾಲುಣಿಸುವ ವಿಷಯದಲ್ಲಿ ಹಲವಾರು ಪ್ರಶ್ನೆಗಳು, ಗೊಂದಲಗಳು ಹಾಗೂ ಆತಂಕಗಳು ಸಹಜವಾಗಿಯೇ ಎದುರಾಗುತ್ತವೆ. ವಿಶೇಷವಾಗಿ  ಅವಳಿ  ಮಕ್ಕಳ ಜನನವಾಗಿದೆಯೇ, ಹಾಲು ಸಾಕಾಗುತ್ತದೆಯೇ, ಎಷ್ಟು ಸಮಯಕ್ಕೊಮ್ಮೆ ಹಾಲುಣಿಸಬೇಕು, ಹಾಲಿನ ಪೂರೈಕೆ ಕಡಿಮೆಯಾದರೆ ಮಗುವಿಗೆ ತೊಂದರೆಯಾಗುತ್ತದೆಯೇ, ತಾಯಿಯ ಆಹಾರ ಪದ್ಧತಿ ಹೇಗಿರಬೇಕು ಎಂಬ ಪ್ರಶ್ನೆಗಳು ತಾಯಂದಿರ ಮನಸ್ಸಿನಲ್ಲಿ ಮೂಡುತ್ತವೆ. ಉದ್ಯೋಗದಲ್ಲಿರುವ ಮಹಿಳೆಯರಿಗೆ ಹಾಲುಣಿಸುವ ವಿಚಾರದಲ್ಲಿ ಹೆಚ್ಚುವರಿ ಒತ್ತಡ ಎದುರಾಗುವುದು ಸಹಜ. ಇಂತಹ ಎಲ್ಲ ಪ್ರಶ್ನೆಗಳಿಗೆ ತಜ್ಞ ವೈದ್ಯರಿಂದ ಸಲಹೆಗಳನ್ನು ಪಡೆಯುವುದು ಅತ್ಯಂತ ಮುಖ್ಯ. ತಾಯಂದಿರಲ್ಲಿ ಸಾಮಾನ್ಯವಾಗಿ ಉದ್ಭವಿಸುವ ಹಾಲುಣಿಸುವ ಪ್ರಶ್ನೆಗಳು ಮತ್ತು ತಜ್ಞರ ಸಲಹೆಗಳು. ಮೈನಾ ಶೇಟ್, ಲ್ಯಾಕ್ಟೋಶನ್ ಎಡ್ಯುಕೇಟರ್, ಕೆಎಂಸಿ ಆಸ್ಪತ್ರೆ, ಮಂಗಳೂರು ಇಲ್ಲಿನ ತಜ್ಞರ ವೈದ್ಯರಿಂದ ಮಾಹಿತಿ ಇಲ್ಲಿದೆ.

ಪ್ರಶ್ನೆ : ಅವಳಿ ಮಕ್ಕಳಿಗೆ ಹಾಲುಣಿಸುವುದು ಹಾಲಿನ ಪೂರೈಕೆಯ ಮೇಲೆ ಪರಿಣಾಮ ಬೀರುತ್ತದೆಯೇ?

ಉತ್ತರ : ಅವಳಿ ಮಕ್ಕಳಿಗೆ ಏಕಕಾಲದಲ್ಲಿ ಹಾಲುಣಿಸುವುದು ತಾಯಿಗೆ ಸ್ವಲ್ಪ ಕಷ್ಟಕರವಾಗಬಹುದು. ಆದರೆ ತಾಯಿಯ ದೇಹವು ಮಕ್ಕಳ ಅವಶ್ಯಕತೆಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತದೆ. ಬೇಡಿಕೆಗೆ ತಕ್ಕಂತೆ ಹಾಲಿನ ಉತ್ಪಾದನೆಯೂ ಹೆಚ್ಚುತ್ತದೆ. ಮುಖ್ಯವಾಗಿ, ಮಗು ಸರಿಯಾಗಿ ಹಾಲು ಹೀರುವಂತೆ ನೋಡಿಕೊಳ್ಳುವುದು ಮತ್ತು ಅವಶ್ಯಕತೆಯಾದಷ್ಟೂ ಬಾರಿ ಹಾಲುಣಿಸುವುದು ಅವಶ್ಯಕ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಮಕ್ಕಳು ಸರಿಯಾಗಿ ಹಾಲನ್ನು ಹೀರುವಂತೆ ಮಾಡುವುದು ಮತ್ತು ಅವಶ್ಯಕತೆಗೆ ತಕ್ಕಂತೆ ಪದೇ ಪದೇ ಹಾಲು ಕುಡಿಸುವುದು ಅಗತ್ಯ.

ಪ್ರಶ್ನೆ : ಮಗುವಿಗೆ ಹಾಲು ಸಾಕಾಗುತ್ತಿದೆಯೇ? ಮಗು ಹಾಲು ಸಾಕಷ್ಟು ಕುಡಿಯುತ್ತಿದೆಯೇ ಎಂಬುದನ್ನು ಹೇಗೆ ತಿಳಿದುಕೊಳ್ಳುವುದು?

ಉತ್ತರ : ತಾಯಂದಿರಲ್ಲಿ ಸಾಮಾನ್ಯವಾದ ಆತಂಕವೆಂದರೆ, “ನಮ್ಮ ಮಗುವಿಗೆ ಹಾಲು ಸಾಕಾಗುತ್ತಿದೆಯೇ?” ಎಂಬುದು. ಮಗುವಿನ ತೂಕ ನಿರಂತರವಾಗಿ ಹೆಚ್ಚಾಗುತ್ತಿದೆಯೇ, ಮಗು ಚುರುಕುತನದಿಂದ ವರ್ತಿಸುತ್ತಿದೆಯೇ, ದಿನಕ್ಕೆ ಕನಿಷ್ಠ 6 ಡೈಪರ್‌ಗಳು (ಮೂತ್ರ ಮತ್ತು ಮಲ) ಒದೆಯುತ್ತಿದೆಯೇ ಎಂಬುದನ್ನು ಗಮನಿಸಿದರೆ, ಹಾಲು ಸರಿಯಾಗಿ ಸಿಗುತ್ತಿದೆ ಎಂದು ಖಚಿತಪಡಿಸಿಕೊಳ್ಳಬಹುದು. ಆರಂಭಿಕ ತಿಂಗಳುಗಳಲ್ಲಿ ಮಗು ಮತ್ತೆ ಮತ್ತೆ ಹಾಲು ಕೇಳುವುದು ಸಹಜ, ಇದು ತಾಯಿಗೆ ಆತಂಕ ಪಡಬೇಕಾದ ಸಂಗತಿ ಅಲ್ಲ. ಸಾಮಾನ್ಯವಾಗಿ ಪ್ರತಿ 2-3 ಗಂಟೆಗೊಮ್ಮೆ ಹಾಲುಣಿಸುವುದು ಸೂಕ್ತ.

ಪ್ರಶ್ನೆ : ಮಲಗಿದ್ದ ಮಗುವನ್ನು ಎಬ್ಬಿಸಿ ಹಾಲು ಕುಡಿಸುವುದರಿಂದ ಅಡ್ಡ ಪರಿಣಾಮಗಳಿವೆಯೇ?

ಉತ್ತರ : ಮಗು ಮೂರು ಗಂಟೆಗಳಿಗಿಂತ ಹೆಚ್ಚು ಸಮಯ ನಿರಂತರವಾಗಿ ಮಲಗಿದರೆ, ಮಧ್ಯದಲ್ಲಿ ಎಬ್ಬಿಸಿ ಹಾಲುಣಿಸುವುದು ಉತ್ತಮ. ಹಾಲುಣಿಸುವಾಗ ಮಗು ಸರಿಯಾಗಿ ಹೀರುತ್ತಿದೆಯೇ ಎಂಬುದನ್ನು ತಾಯಿಯೇ ಗಮನಿಸಬೇಕು. ಆದರೆ 6 ತಿಂಗಳುಗಳವರೆಗೆ ಮಗುವಿಗೆ ನೀರು ಕೊಡುವುದನ್ನು ತಪ್ಪಿಸಬೇಕು. ವೈದ್ಯರ ಸಲಹೆಯ ಮೇರೆಗೆ ಮಾತ್ರ ಫಾರ್ಮುಲಾ ಹಾಲು ಬಳಸುವುದು ಸೂಕ್ತ. ವಿಶ್ವ ಆರೋಗ್ಯ ಸಂಸ್ಥೆ (WHO) ಶಿಫಾರಸು ಪ್ರಕಾರ, ಮಗುವಿಗೆ 6 ತಿಂಗಳುಗಳವರೆಗೆ ಕೇವಲ ತಾಯಿಹಾಲು ಮತ್ತು ನಂತರ 2 ವರ್ಷ ವಯಸ್ಸಿನವರೆಗೂ ಸತತ ತಾಯಿಹಾಲಿನ ಜೊತೆಗೆ ಗಟ್ಟಿಯಾದ ಆಹಾರ ನೀಡುವುದು ಉತ್ತಮ.

ಪ್ರಶ್ನೆ : ಪಂಪ್ ಮಾಡಿದ ಎದೆಹಾಲನ್ನು ಎಷ್ಟು ಕಾಲ ಶೇಖರಿಸಬಹುದು?

  • ಉತ್ತರ : ಶಾಖ ಮತ್ತು ಹುಮಿಡ್ ವಾತಾವರಣದಲ್ಲಿ ಎದೆ ಹಾಲು ಸಾಮಾನ್ಯ ತಾಪಮಾನ (ರೂಮ್ ಟೆಂಪರೇಚ‌ರ್)ನಲ್ಲಿ ಬಲು ಬೇಗ ಕೆಡುತ್ತದೆ.
  • ಸಾಮಾನ್ಯ ತಾಪಮಾನದಲ್ಲಿ (ಸುಮಾರು 26°C): 2–4 ಗಂಟೆಗಳು
  • ಫ್ರಿಜ್‌ನಲ್ಲಿ (3–4°C): 3–4 ದಿನಗಳು
  • ಫ್ರೀಜರ್‌ನಲ್ಲಿ: 3–6 ತಿಂಗಳುಗಳು (ದಿನಾಂಕವನ್ನು ನಮೂದಿಸಿ ಶೇಖರಿಸಬೇಕು)
  • ಶಾಖ ಮತ್ತು ತೇವಾಂಶ ಹೆಚ್ಚು ಇರುವ ವಾತಾವರಣದಲ್ಲಿ ಎದೆಹಾಲು ಬೇಗ ಕೆಡುವ ಸಾಧ್ಯತೆ ಇರುವುದರಿಂದ ಸೂಕ್ತ ಸಂಗ್ರಹ ವಿಧಾನ ಅನುಸರಿಸಬೇಕು.

ಪ್ರಶ್ನೆ : ಹಾಲಿನ ಪೂರೈಕೆಯನ್ನು ನೈಸರ್ಗಿಕವಾಗಿ ಹೆಚ್ಚಿಸುವುದು ಹೇಗೆ?

  • ಉತ್ತರ : ನಿಯಮಿತವಾಗಿ ಮಗುವಿನ ಅವಶ್ಯಕತೆಯ ಪ್ರಕಾರ ಹಾಲುಣಿಸಬೇಕು.
  • ಮಗು ಸರಿಯಾಗಿ ಹಾಲು ಹೀರುವಂತೆ ನೋಡಿಕೊಳ್ಳಬೇಕು.
  • ಆಗಾಗ ಎದೆ ಬದಲಾಯಿಸುತ್ತಾ ಹಾಲುಣಿಸಬೇಕು.
  • ಮಗುವನ್ನು ತಾಯಿಯ ಎದೆಗೆ ಹತ್ತಿರವಾಗಿ ಹಿಡಿದು ಮಲಗಿಸುವುದು ಸಹಾಯಕ.
  • ಸಮರ್ಪಕ ಪ್ರಮಾಣದಲ್ಲಿ ನೀರು ಸೇವಿಸಬೇಕು.
  • ಪೌಷ್ಟಿಕಾಂಶಭರಿತ ಆಹಾರ ಸೇವನೆ ಮಾಡಬೇಕು.
  • ಹಾಲುಣಿಸಿದ ನಂತರ ಎದೆಗೆ ಹಗುರವಾದ ಮಸಾಜ್ ಮಾಡಿದರೆ ಹಾಲಿನ ಉತ್ಪಾದನೆ ಹೆಚ್ಚಾಗಲು ನೆರವಾಗುತ್ತದೆ.

ಹಾಲುಣಿಸುವುದು ತಾಯಂದಿರಿಗೂ, ಮಗುವಿಗೂ ಜೀವನಪರ್ಯಂತ ಆರೋಗ್ಯದ ಹೂಡಿಕೆ. ಮಗುವಿನ ಬೆಳವಣಿಗೆಗೆ ತಾಯಿಹಾಲು ಅಮೂಲ್ಯವಾದ ಆಹಾರವಾಗಿದ್ದು, ಇದರಲ್ಲಿ ಎಲ್ಲ ಪೋಷಕಾಂಶಗಳೂ ಲಭ್ಯ. ಆದ್ದರಿಂದ ತಾಯಂದಿರು ಹಾಲಿನ ಪೂರೈಕೆಯ ಬಗ್ಗೆ ಆತಂಕ ಪಡದೆ, ವೈದ್ಯರ ಮಾರ್ಗದರ್ಶನದಲ್ಲಿ ವಿಶ್ವಾಸದಿಂದ ಹಾಲುಣಿಸಿದರೆ, ಮಗು ಆರೋಗ್ಯವಾಗಿ ಬೆಳೆಯಲು ನೆರವಾಗುತ್ತದೆ.



Source link

Leave a Reply

Your email address will not be published. Required fields are marked *