Dharmasthala Grave Probe, ಮುಸುಕುದಾರಿ ಸೂಚಿಸಿದ 4ನೇ ಸ್ಥಳದಲ್ಲೂ ಕಳೇಬರ ಇಲ್ಲ | Dharmasthala Mass Burial Sit Probe No Body Found After 4th Grave Excavation

ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣದಲ್ಲಿ ಇದೀಗ ಎಸ್ಐಟಿ ಅಧಿಕಾರಿಗಳ ಸಮ್ಮುಖದಲ್ಲಿ ನಡೆಯುತ್ತಿರುವ ಉತ್ಖನನದಲ್ಲಿ ಇದೀಗ 4ನೇ ಸ್ಥಳದಲ್ಲೂ ಯಾವುದೇ ಕಳೇಬರ ಪತ್ತೆಯಾಗಿಲ್ಲ.

ಧರ್ಮಸ್ಥಳ (ಜು.30) ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣದ ಕುತೂಹಲ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟ ಸುತ್ತ ಮುತ್ತ ಶವಗಳ ಹೂತಿಟ್ಟ ಜಾಗದಲ್ಲಿ ಎಸ್ಐಟಿ ಅಧಿಕಾರಿಗಳು ಉತ್ಖನನ ನಡೆಸುತ್ತಿದೆ. ದೂರುದಾರ ಸೂಚಿಸಿದ 4ನೇ ಸ್ಥಳ ಅಗೆಯಲಾಗಿದೆ. 6 ಅಡಿ ಬಳಿಕವೂ ಯಾವುದೇ ಕಳೇಬರ ಪತ್ತೆಯಾಗಿಲ್ಲ. ಮುಸುಕುದಾರಿ ದೂರುದಾರ ಸೂಚಿಸಿದ ಆರಂಭಿಕ ನಾಲ್ಕೂ ಸ್ಥಳದಲ್ಲಿ ಯಾವುದೇ ಕಳೇಬರ ಪತ್ತೆಯಾಗಿಲ್ಲ. 4ನೇ ಸ್ಥಳದಲ್ಲೂ 6 ಅಡಿ ಆಳದವರಗೆ ಅಗೆಯಲಾಗಿದೆ. ಆದರೆ ಯಾವುದೇ ಅಸ್ಥಿಪಂಜರ ಪತ್ತೆಯಾಗಿಲ್ಲ.

ಒಂದು, ಎರಡು, ಮೂರು, ನಾಲ್ಕು, ಸಿಗಲಿಲ್ಲ ಕಳೇಬರ

ಮುಸುಕುದಾರಿ ದೂರುದಾರ ಮೊದಲ ದಿನದ ಸ್ಥಳ ಮಹಜರು ವೇಳೆ 13 ಸ್ಥಳಗಳನ್ನು ಗುರುತಿಸಿದ್ದರು. ಆದರೆ ಈ ಪೈಕಿ ನಾಲ್ಕು ಸ್ಥಳಗಳಲ್ಲಿ ಉತ್ಖನನ ಕಾರ್ಯಾಚರಣೆ ಮಾಡಲಾಗಿದೆ. ನಾಲ್ಕನೇ ಸ್ಥಳದ ಕಾರ್ಯಾಚರಣೆಯೂ ಅಂತ್ಯವಾಗಿದೆ. ನಾಲ್ಕು ಸ್ಥಳಗಳಲ್ಲಿ 6 ಅಡಿ ಅಗೆದು ಪರಿಶೀಲನೆ ನಡೆಸಲಾಗಿದೆ. ಆದರೆ ಯಾವುದೇ ಅಸ್ಥಿಪಂಜರ ಪತ್ತೆಯಾಗಿಲ್ಲ. 

Source link

Leave a Reply

Your email address will not be published. Required fields are marked *