Headlines

'ನಾಳೆ ಮಂಗ್ಳೂರಿನಲ್ಲಿ ಹೂತಿದ್ದೇನೆ ಎಂದ್ರೆ ಎಸ್‌ಐಟಿ ಅಲ್ಲಿಗೂ ಹೋಗಬೇಕಾ? ಧರ್ಮಸ್ಥಳ ಷಡ್ಯಂತ್ರದ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಹೇಳಿದ್ದೇನು?

'ನಾಳೆ ಮಂಗ್ಳೂರಿನಲ್ಲಿ ಹೂತಿದ್ದೇನೆ ಎಂದ್ರೆ ಎಸ್‌ಐಟಿ ಅಲ್ಲಿಗೂ ಹೋಗಬೇಕಾ? ಧರ್ಮಸ್ಥಳ ಷಡ್ಯಂತ್ರದ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಹೇಳಿದ್ದೇನು?

'ನಾಳೆ ಮಂಗ್ಳೂರಿನಲ್ಲಿ ಹೂತಿದ್ದೇನೆ ಎಂದ್ರೆ ಎಸ್‌ಐಟಿ ಅಲ್ಲಿಗೂ ಹೋಗಬೇಕಾ? ಧರ್ಮಸ್ಥಳ ಷಡ್ಯಂತ್ರದ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಹೇಳಿದ್ದೇನು?

ಧಾರವಾಡ (ಆ.17): ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್‌ಐಟಿ ತನಿಖೆ ಕುರಿತಂತೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಆರೋಪ-ಪ್ರತ್ಯಾರೋಪಗಳ ಬಗ್ಗೆ ಧಾರವಾಡದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿ ಮುಂಚೆಯಿಂದಲೂ ಹಿಂದುತ್ವದ ಪರ ಇದೆ. ಹೀಗಾಗಿ ಬಿಜೆಪಿ ಇಲ್ಲಿ ಅನ್ಯಾಯ ನಡೆಯುತ್ತಿದೆ ಎಂದು ಹೇಳಿದೆ. ಇನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಧರ್ಮಸ್ಥಳದ ವಿಚಾರದಲ್ಲಿ ‘ಭಯಾನಕ ಷಡ್ಯಂತ್ರ ನಡೆಯುತ್ತಿದೆ. ಅದು ನನಗೂ ಗೊತ್ತಿದೆ. ಸಂದರ್ಭ ಬಂದಾಗ ಅದನ್ನು ಹೊರಗೆ ಹಾಕುವೆ’ ಅಂದಿದ್ದಾರೆ. ಇದನ್ನು ನೋಡಿದರೆ ಬಯಲಿಗೆ ಎಳೆಯೋ ಅಗತ್ಯವಿದೆ ಎಂದರು.

ಸುಮಾರು 13 ವರ್ಷಗಳ ಕಾಲ ನಿರಂತರವಾಗಿ ಹೆಸರು ಹಾಳು ಮಾಡಲು ಯತ್ನ ನಡೆದಿದೆ. ಧರ್ಮಸ್ಥಳ ಪುಣ್ಯಕ್ಷೇತ್ರಕ್ಕೆ ಕಪ್ಪುಚುಕ್ಕೆ ಬರುವಂತೆ ಮಾತನಾಡಲಾಗುತ್ತಿದೆ. ಬಾಯಿ ತೆಗೆದರೆ ಅವಾಚ್ಯ ಶಬ್ದ ಮಾತನಾಡೋ ಜನರೆಲ್ಲ ಸೇರಿ ಇದನ್ನು ಮಾಡುತ್ತಿದ್ದಾರೆ. ಹಿಂದೂ ಧರ್ಮಿಯರ ಶ್ರದ್ಧೆಯನ್ನ ನಾಶ ಮಾಡಲು ಯತ್ನಿಸುತ್ತಿದ್ದಾರೆ. ಈ ಪ್ರಯತ್ನ ಮಾಡ್ತಿರೋದನ್ನು ಕಾಂಗ್ರೆಸ್ ಕೂಡ ಒಪ್ಪಿಕೊಂಡಿದೆ. ಕೆಲ ಮಂತ್ರಿಗಳು ಎಡಪಂಥೀಯರ ಒತ್ತಡಕ್ಕೆ ಬಿದ್ದು ಎಸ್‌ಐಟಿ ಕೊಡಬೇಕಾಗಿ ಬಂತು ಎಂದಿದ್ದಾರೆ. ಹಾಗಾದರೆ ಇಲ್ಲಿ ಯಾರ ಒತ್ತಡವಿತ್ತು? ಹಿಂದೆ ಸಿದ್ದರಾಮಯ್ಯ ಯಾರ ಒತ್ತಡಕ್ಕೂ ಒಳಗಾಗುವುದಿಲ್ಲ ಎಂದಿದ್ದರು. ಹೀಗಾಗಿ ಯಾರ ಒತ್ತಡದಿಂದ ಎಸ್‌ಐಟಿ ರಚಿಸಲಾಗಿದೆ ಎಂಬುದನ್ನು ಸಿಎಂ ಅವರೇ ಉತ್ತರಿಸಬೇಕು ಎಂದು ಆಗ್ರಹಿಸಿದರು.

ಧರ್ಮಸ್ಥಳದ ಪ್ರಕರಣದ ಹಿಂದೆ ಷಡ್ಯಂತ್ರವಿದೆ ಅಂತಾ ಡಿಸಿಎಂ ಅವರೇ ಹೇಳಿದ್ದಾರೆ. ಧರ್ಮಸ್ಥಳ ಕ್ಷೇತ್ರದಲ್ಲಿ ಎಷ್ಟೊಂದು ಗುಂಡಿಗಳನ್ನು ಅಲ್ಲಿ ಅಗೆದಿದ್ದಾರೆ. ಎಸ್‌ಐಟಿ ತನಿಖೆಯಲ್ಲಿ ಇದುವರೆಗೆ 18 ಕಡೆಗಳಲ್ಲಿ ಉತ್ಖನನ ನಡೆದಿದ್ದು, ತಂತ್ರಜ್ಞಾನ ಬಳಸಿ ಕೆಲಸ ಮಾಡಿದ್ದಾರೆ. ಇಷ್ಟಾದರೂ ಅವರಿಗೆ ಏನೂ ಸಿಕ್ಕಿಲ್ಲ. ಹೀಗಾಗಿ ಈ ಸುಳ್ಳು ಆರೋಪ ಮಾಡಿದವರನ್ನು ವಿಚಾರಣೆಗೆ ಒಳಪಡಿಸಬೇಕು, ಈ ಷಡ್ಯಂತ್ರದ ಹಿಂದೆ ಯಾರಿದ್ದಾರೋ ಎಲ್ಲದರ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಇನ್ನು ಎಸ್‌ಐಟಿ ರದ್ದು ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸೂಲಿಬೆಲೆ ಅವರು, ಎಸ್ ಐ ಟಿ ಮುಂದುವರೆಸೋದ್ರಲ್ಲಿ ಅರ್ಥವಿಲ್ಲ. ಏಕೆಂದರೆ ಈಗಾಗಲೇ ಅದರ ಉದ್ದೇಶ ಮುಗಿದಿದೆ. ಶವವನ್ನು ಹೂಳಿದ್ದಾಗಿ ಹೇಳಿದ ವ್ಯಕ್ತಿ ಬೇರೆ ಸ್ಥಳ ಹೇಳಬಹುದು. ಶವವನ್ನು ಮಂಗಳೂರಿನಲ್ಲಿ ಹೂತಿದ್ದೇನೆ ಎಂದು ಹೇಳಿದರೆ, ನದಿಯ ಮಧ್ಯಭಾಗವೆಂದರೆ ಎಸ್ ಐ ಟಿ ಅಲ್ಲಿಗೆ ಹೋಗಬೇಕಾ? ಹೇಳಿದಂತೆಲ್ಲ ಎಸ್‌ಐಟಿ ಪ್ರತಿಬಾರಿ ಅಗೆಯುತ್ತದೆಯೇ? ಇದಕ್ಕೆ ತೆರಿಗೆದಾರರ ಹಣವನ್ನು ವ್ಯರ್ಥ ಮಾಡಬೇಕೇ? ಈ ಪ್ರಶ್ನೆಗೆ ಉತ್ತರ ಬೇಕಾಗಿದೆ ಎಂದರು.

Source link

Leave a Reply

Your email address will not be published. Required fields are marked *