ಸಿಂದೂರದ ಬಗ್ಗೆ ಖರ್ಗೆಗೆ ಸುದೀರ್ಘ ಅವಕಾಶ ಕೊಟ್ಟ ಧನ್‌ಕರ್‌ಗೆ ಬ್ರೇಕ್‌ ಹಾಕಿತಾ ಸರ್ಕಾರ? | Govt Pressure Behind Dhankhar Resignation Kharge Speech Reason San

ಸಿಂದೂರದ ಬಗ್ಗೆ ಖರ್ಗೆಗೆ ಸುದೀರ್ಘ ಅವಕಾಶ ಕೊಟ್ಟ ಧನ್‌ಕರ್‌ಗೆ ಬ್ರೇಕ್‌ ಹಾಕಿತಾ ಸರ್ಕಾರ? | Govt Pressure Behind Dhankhar Resignation Kharge Speech Reason San



ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್‌ ಅವರ ಹಠಾತ್‌ ರಾಜೀನಾಮೆ ದೆಹಲಿ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವೇ ಈ ಬೆಳವಣಿಗೆ ನಡೆದಿದ್ದು, ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. 

ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್‌ ದೀಢೀರನೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದು ದೆಹಲಿ ರಾಜಕೀಯದ ಗಲ್ಲಿಗಳಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾದ ದಿನವೇ ಈ ಹಠಾತ್‌ ಬೆಳವಳಿಗೆ ರಾಜಕೀಯ ವಲಯದಲ್ಲಿ ಊಹಾಪೋಹಗಳ ಸುನಾಮಿ ಸೃಷ್ಟಿಸಿದೆ.

ಇಲ್ಲಿಯವರೆಗೂ ಧನ್‌ಕರ್‌ ಅವರನ್ನ ವಿರೋಧಿಸುತ್ತಲೇ ಇದ್ದ ವಿಪಕ್ಷಗಳ ನಾಯಕರು ಕೂಡ ಇದರ ಹಿಂದೆ ಇರುವ ಕಾರಣ ಏನು ಅನ್ನೋದರ ಬಗ್ಗೆಯೇ ತಲೆಕೆಡಿಸಿಕೊಳ್ಳುತ್ತಿದ್ದಾರೆ. ಹಾಗಂತ ಧನ್‌ಕರ್‌ ಅವರ ರಾಜೀನಾಮೆ ದಿಢೀರನೇ ಆಗಿದ್ದಲ್ಲ. ತೆರೆಯ ಹಿಂದೆ ಸಾಕಷ್ಟು ವಿಚಾರಗಳ ಕೆಲಸ ಮಾಡಿವೆ ಅನ್ನೋದಂತೂ ಸ್ಪಷ್ಟ.

ಸೋಮವಾರ ಮಧ್ಯಾಹ್ನ 4.30ಕ್ಕೆ ನಡೆದ ರಾಜ್ಯಸಭೆಯ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಸಭಾ ನಾಯಕ ಜೆ ಪಿ ನಡ್ದಾ ಮತ್ತು ಸಂಸದೀಯ ವ್ಯವಹಾರ ಗಳ ಸಚಿವ ಕಿರಣ್ ರಿಜಿಜು ಗೈರು ಆಗಿ ಸರ್ಕಾರ ತನ್ನ ಬೇಸರವನ್ನು ಸೂಚಿಸಿದ್ದೇ ಧನ್‌ಕರ್‌ ಅವರ ರಾಜೀನಾಮೆಗೆ ಕಾರಣ ಅಂತಾ ಮೇಲ್ನೋಟದಲ್ಲಿ ಚರ್ಚೆ ಆಗುತ್ತಿದೆ.

ಆದರೆ, ಈ ಹಠಾತ್‌ ನಿರ್ಧಾರಕ್ಕೆ ಅದೊಂದೇ ಕಾರಣ ಆಗಿರಲಿಕ್ಕಿಲ್ಲ.

ನ್ಯಾಯಮೂರ್ತಿ ಗಳ ವಿರುದ್ಧ ತನಿಖೆ ಕೋರಿ ಸಲ್ಲಿಸಿದ್ದ ವಿಪಕ್ಷ ಗಳ ಅರ್ಜಿಯನ್ನು ಸ್ವೀಕರಿಸಿದ್ದು ಶಾಸಕಾಂಗ ನ್ಯಾಯಾಂಗ ನಡುವೆ ತಿಕ್ಕಾಟಕ್ಕೆ ಕಾರಣ ಆಗಬಹುದು ಎಂದು ಸರ್ಕಾರ ಉಪರಾಷ್ಟ್ರ ಪತಿ ಗಳ ರಾಜೀನಾಮೆಗೆ ಒತ್ತಡ ಹೇರಿತಾ? ಎನ್ನುವ ಪ್ರಶ್ನೆಯೂ ಎದ್ದಿದೆ.

ಖರ್ಗೆಗೆ ಸುದೀರ್ಘ ಅವಕಾಶ ತಂದಿತಾ ಆಪತ್ತು?: ಆಪರೇಷನ್ ಸಿಂಧೂರ ವಿಷಯದಲ್ಲಿ ಖರ್ಗೆ ಅವರಿಗೆ ಸರ್ಕಾರದ ಜೊತೆ ಚರ್ಚಿಸದೇ ಸುದೀರ್ಘ ಮಾತಿಗೆ ಅವಕಾಶ ಕೊಟ್ಟಿದ್ದು ಸಂಸದೀಯ ಇಲಾಖೆ ಮತ್ತು ಉಪರಾಷ್ಟ್ರಪತಿ ನಡುವೆ ಕಿಡಿ ಹಚ್ಚಿತಾ? ಎಂದೂ ಚರ್ಚೆ ಮಾಡಲಾಗುತ್ತಿದೆ.

ಇನ್ನು ಬಿಜೆಪಿ ಸಂಸದರು ಕೂಡ ನ್ಯಾಯಮೂರ್ತಿಗಳ ತನಿಖಾ ಕಾಯ್ದೆ ಪ್ರಕಾರ ಜಡ್ಜ್‌ ವಿರುದ್ಧ ತನಿಖೆಗೆ ಅರ್ಜಿಗೆ ಸಹಿ ಹಾಕಿದ್ದರೂ ಕೂಡ ವಿಪಕ್ಷಗಳ ಅರ್ಜಿ ಸಲ್ಲಿಸಿದ್ದು ಸರ್ಕಾರದ ಬೇಸರಕ್ಕೆ ಕಾರಣ ಆಗಿದೆ.ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳದೆ ವಿಪಕ್ಷ ಸಂಸದರು ಕೊಟ್ಟ ಅರ್ಜಿ ಸ್ವೀಕರಿಸಿ ಸೇಕ್ರೆಟರಿ ಜನರಲ್‌ಗೆ ನಿರ್ದೇಶನ ಕೊಟ್ಟಿದ್ದು ಸರ್ಕಾರದ ಅಸಮಾಧಾನಕ್ಕೆ ಕಾರಣವಾಗಿದೆ ಎಂದೂ ಸಂಸತ್‌ ವಲಯದಲ್ಲಿ ಚರ್ಚೆ ಆಗುತ್ತಿದೆ. ಇದನ್ಉ ತೆರೆಯ ಹಿಂದೆಯೂ ಧನ್‌ಕರ್‌ ಅವರೇ ಹೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಎಲ್ಲವನ್ನು ಗಮನಿಸಿ ಸಂವಿಧಾನದ ಆರ್ಟಿಕಲ್ 67 ರ ಪ್ರಕಾರ ವೈದ್ಯಕೀಯ ಕಾರಣಕ್ಕೆ ರಾಜೀನಾಮೆನ್ನ ಧನ್‌ಕರ್‌ ಕೊಟ್ಟಿದ್ದಾರೆ. ತಡ ರಾತ್ರಿ 9.35 ಕ್ಕೆ ರಾಷ್ಟ್ರ ಪತಿ ದ್ರೌಪದಿ ಮುರ್ಮು ಅವರಿಗೆ ತಮ್ಮ ರಾಜೀನಾಮೆಯನ್ನ ಸಲ್ಲಿಕೆ ಮಾಡಿದ್ದಾರೆ.

ಇತಿಹಾಸ ಹೇಳೋದೇನು?: ಉಪರಾಷ್ಟ್ರಪತಿ ಅವಧಿ 2 ವರ್ಷ ಒಂದು ತಿಂಗಳು ಇರೋವಾಗಲೇ ರಾಜೀನಾಮೆ ಕೊಟ್ಟಿದ್ದು ಮುಂದೆ ಯಾರು ಎಂಬ ಪ್ರಶ್ನೆಗೆ ಮುನ್ನುಡಿ ಬರೆದಿದೆ. ಆಗಸ್ಟ್‌ 2027ರವರೆಗೆ ಜಗದೀಪ್‌ ಧನ್‌ಕರ್‌ ಅವರ ಅವಧಿ ಇತ್ತು. ಆರ್‌. ವೆಂಕಟರಾಮನ್‌ ಹಾಗೂ ವಿವಿ ಗಿರಿ ಕೂಡ ಹೀಗೆ ಅವಧಿಗೆ ಮುನ್ನ ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಆದರೆ, ಅದೂ ಕೂಡ ತಮ್ಮ ಅವಧಿಯ ಅಂತ್ಯದಲ್ಲಿ. ರಾಷ್ಟ್ರಪತಿ ಚುನಾವಣೆಗೆ ನಿಲ್ಲುವ ನಿಟ್ಟಿನಲ್ಲಿ ರಾಜೀನಾಮೆ ಕೊಟ್ಟಿದ್ದರು.

ಮುಂದೇನು?: ಸಂವಿಧಾನದ ಪ್ರಕಾರ ಉಪ ರಾಷ್ಟ್ರ ಪತಿ ಚುನಾವಣೆಯನ್ನು ಇಷ್ಟೇ ದಿನಗಳಲ್ಲಿ ಅರ್ಥಾತ್ 6 ತಿಂಗಳಲ್ಲೇ ನಡೆಸಬೇಕು ಅಂತೇನು ನಿಯಮ ಇಲ್ಲ. ಆದರೆ, ಅಭ್ಯರ್ಥಿಗಳು ಯಾರು ಅನ್ನೋದು ಚರ್ಚೆ ಶುರುವಾಗಿದೆ. ಮೊದಲಿಗೆ ನಿತೀಶ್‌ ಕುಮಾರ್‌. ಬಿಹಾರದಲ್ಲಿ ಚಿರಾಗ್ ಪಾಸ್ವಾನ್ ಪ್ರತ್ಯೇಕ ವಾಗಿ ಸ್ಪರ್ಧಿಸಿ ಎನ್‌ಡಿಎ ವೋಟು ಒಡೆಯುವ ಆತಂಕ ಇರುವಾಗ ನಿತೀಶ್ ರನ್ನು ಉಪರಾಷ್ಟ್ರಪತಿ ಮಾಡಿ ಬಿಜೆಪಿ ಯ ಹಿಂದುಳಿದ ವರ್ಗದ ನಾಯಕರನ್ನು ಮುಖ್ಯಮಂತ್ರಿ ಅಭ್ಯರ್ಥಿ ಮಾಡುವುದು. ಆದರೆ ನಿತೀಶ್ ಇದಕ್ಕೆ ಒಪ್ಪುತ್ತಾರಾ ಎನ್ನುವುದೇ ದೊಡ್ಡ ಪ್ರಶ್ನೆ. 

ಇನ್ನೊಂದು ಆಯ್ಕೆ ಶಶಿ ತರೂರ್‌. ಕೇರಳದಲ್ಲಿ ಮುಂದಿನ ವರ್ಷ ಚುನಾವಣೆ ಇದ್ದು, ಇತ್ತೀಚಿನ ಆಪರೇಷನ್ ಸಿಂಧೂರ್ ನಂತರ ಬಿಜೆಪಿ ಕೆಲಸಗಳನ್ನು ಶ್ಲಾಘಿಸುವ ಜೊತೆಗೆ, ಕಾಂಗ್ರೆಸ್ ಅನ್ನು ಟೀಕಿಸುತ್ತಿದ್ದಾರೆ. ಆ ಮೂಲಕ ಬಿಜೆಪಿಗೆ ಸೇರುವ ಸುಳಿವು ನೀಡಿದ್ದು, ಉಪರಾಷ್ಟ್ರಪತಿ ಮಾಡಿದರೆ ಕೇರಳ ಚುನಾವಣೆಗೆ ನೆರವಾಗಬಹುದೆಂಬ ಲೆಕ್ಕಚಾರವಿದೆ.

 



Source link

Leave a Reply

Your email address will not be published. Required fields are marked *