407 ರನ್‌ಗೆ ಇಂಗ್ಲೆಂಡ್ ಆಲೌಟ್, ಮೊದಲ ಇನ್ನಿಂಗ್ಸ್‌ನಲ್ಲಿ ಭಾರತಕ್ಕೆ 180 ರನ್ ಮುನ್ನಡೆ | Edgbaston Test India Restrict England To 407 In 1st Innings Take 180 Run Lead

407 ರನ್‌ಗೆ ಇಂಗ್ಲೆಂಡ್ ಆಲೌಟ್, ಮೊದಲ ಇನ್ನಿಂಗ್ಸ್‌ನಲ್ಲಿ ಭಾರತಕ್ಕೆ 180 ರನ್ ಮುನ್ನಡೆ | Edgbaston Test India Restrict England To 407 In 1st Innings Take 180 Run Lead



ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೂರನೇ ದಿನದಲ್ಲಿ ಇಂಗ್ಲೆಂಡ್ ದಿಟ್ಟ ಹೋರಾಟ ನಡುವೆಯೂ ಭಾರತ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಇಂಗ್ಲೆಂಡ್ ತಂಡವನ್ನು 407 ರನ್‌ಗೆ ಆಲೌಟ್ ಮಾಡಿದ ಭಾರತ 180 ರನ್ ಮುನ್ನಡೆ ಪಡೆದಿದೆ. 

ಎಡ್ಜ್‌ಬಾಸ್ಟನ್ (ಜು.04) ಭಾರತ ಹಾಗೂ ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯದ ಆರಂಭಿಕ 2 ದಿನ ಭಾರತ ಮೇಲುಗೈ ಸಾಧಿಸಿತ್ತು. ಆದರೆ ಮೂರನೇ ದಿನ ಹ್ಯಾರಿ ಬ್ರೂಕ್ ಹಾಗೂ ಜ್ಯಾಮಿ ಸ್ಮಿತ್ ಜೊತೆಯಾಟ ಟೀಂ ಇಂಡಿಯಾವನ್ನು ಇನ್ನಿಲ್ಲದಂತೆ ಕಾಡಿತ್ತು. ಫಾಲೋ ಆನ್ ಹೇರುವ ಖುಷಿಯಲ್ಲಿದ್ದ ಟೀಂ ಇಂಡಿಯಾಗೆ ಈ ಜೋಡಿಯ ಜೊತೆಯಾಟ ಲೆಕ್ಕಾಚಾರ ಉಲ್ಟಾ ಮಾಡಿತು. ಇಂಗ್ಲೆಂಡ್ ದಿಟ್ಟ ಹೋರಾಟದ ನಡುವೆಯೂ ಭಾರತ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿತ್ತು. ಇಂಗ್ಲೆಂಡ್ ತಂಡವನ್ನು 407 ರನ್‌ಗೆ ಭಾರತ ಕಟ್ಟಿ ಹಾಕಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 180 ರನ್ ಮುನ್ನಡೆ ಪಡೆದುಕೊಂಡಿದೆ.

ಜ್ಯಾಮಿ ಸ್ಮಿತ್ ಹಾಗೂ ಹ್ಯಾರಿ ಬ್ರೂಕ್ ಬರೋಬ್ಬರಿ 300 ರನ್ ಜೊತೆಯಾಟ ಟೀಂ ಇಂಡಿಯಾ ಲೆಕ್ಕಾಚಾರ ಉಲ್ಟಾ ಮಾಡಿತ್ತು. ಇಂಗ್ಲೆಂಡ್ ತಂಡವನ್ನು ಅಲ್ಪಮೊತ್ತಕ್ಕೆ ಆಲೌಟ್ ಮಾಡುವ ಲೆಕ್ಕಾಚಾರ ಕೈಗೂಡಲಿಲ್ಲ. ಹ್ಯಾರಿ ಸ್ಮಿತ್ ಹಾಗೂ ಬ್ರೂಕ್ ಅಬ್ಬರಿಸಿದರೆ, ಇತ್ತ ಮೊಹಮಮದ್ ಸಿರಾಜ್ ಸತತ ದಾಳಿ ಮೂಲಕ ಟೀಂ ಇಂಡಿಯಾ ಭರ್ಜರಿ ಮೇಲುಗೈ ತಂದುಕೊಟ್ಟಿದ್ದಾರೆ. ಸಿರಾಜ್ ಬರೋಬ್ಬರಿ 6 ವಿಕೆಟ್ ಕಬಳಿಸಿದರೆ, ಅಕಾಶ್ ದೀಪ್ 4 ವಿಕೆಟ್ ಕಬಳಿಸಿದರು. ಇಬ್ಬರು ಸೇರಿ 10 ವಿಕೆಟ್ ಕಬಳಿಸಿ ಇಂಗ್ಲೆಂಡ್ ಆಲೌಟ್ ಮಾಡಿದರು.

 



Source link

Leave a Reply

Your email address will not be published. Required fields are marked *