ಟಿಬೆಟನ್ ಧರ್ಮಗುರು ದಲೈಲಾಮಾ ಅವರ ಉತ್ತರಾಧಿಕಾರಿ ಆಯ್ಕೆ ಅಧಿಕಾರ ಟ್ರಸ್ಟ್‌ಗೆ ನೀಡಿದ ದಲೈಲಾಮಾ | Only The Trust Will Choose Successor Dalai Lama

ಟಿಬೆಟನ್ ಧರ್ಮಗುರು ದಲೈಲಾಮಾ ಅವರ ಉತ್ತರಾಧಿಕಾರಿ ಆಯ್ಕೆ ಅಧಿಕಾರ ಟ್ರಸ್ಟ್‌ಗೆ ನೀಡಿದ ದಲೈಲಾಮಾ | Only The Trust Will Choose Successor Dalai Lama



ಟಿಬೆಟನ್ ಧರ್ಮಗುರು ದಲೈಲಾಮಾ ಅವರ ಉತ್ತರಾಧಿಕಾರಿ ಆಯ್ಕೆ ವಿಷಯದಲ್ಲಿದ್ದ ಊಹಾಪೋಹಕ್ಕೆ ಕೊನೆಗೂ ತೆರೆ ಬಿದ್ದಿದೆ. 2015ರಲ್ಲಿ ರಚಿಸಿದ್ದ ಗಾಡೆನ್‌ ಫೋಡ್ರಾಂಗ್ ಟ್ರಸ್ಟ್‌ಗೆ ಮಾತ್ರ ನನ್ನ ಉತ್ತರಾಧಿಕಾರಿಯನ್ನು ಗುರುತಿಸುವ ಅಧಿಕಾರವಿದೆ ಎಂದು 14ನೇ ದಲೈಲಾಮಾ ಆಗಿರುವ ಟೆಂಜಿನ್ ಗ್ಯಾಟ್ಸೊ ಘೋಷಿಸಿದ್ದಾರೆ.

ಧರ್ಮಶಾಲಾ: ಟಿಬೆಟನ್ ಧರ್ಮಗುರು ದಲೈಲಾಮಾ ಅವರ ಉತ್ತರಾಧಿಕಾರಿ ಆಯ್ಕೆ ವಿಷಯದಲ್ಲಿದ್ದ ಊಹಾಪೋಹಕ್ಕೆ ಕೊನೆಗೂ ತೆರೆ ಬಿದ್ದಿದೆ.

ನಾನೇ 2015ರಲ್ಲಿ ರಚಿಸಿದ್ದ ಗಾಡೆನ್‌ ಫೋಡ್ರಾಂಗ್ ಟ್ರಸ್ಟ್‌ಗೆ ಮಾತ್ರ ನನ್ನ ಉತ್ತರಾಧಿಕಾರಿಯನ್ನು ಗುರುತಿಸುವ ಅಧಿಕಾರವಿದೆ ಎಂದು 14ನೇ ದಲೈಲಾಮಾ ಆಗಿರುವ ಟೆಂಜಿನ್ ಗ್ಯಾಟ್ಸೊ ಘೋಷಿಸಿದ್ದಾರೆ. ಈ ಮೂಲಕ ತಮ್ಮ ಉತ್ತರಾಧಿಕಾರಿ ಆಯ್ಕೆಯಲ್ಲಿ ಚೀನಾ ಸರ್ಕಾರದ ಹಸ್ತಕ್ಷೇಪವನ್ನು ಬಲವಾಗಿ ತಿರಸ್ಕರಿಸಿದ್ದಾರೆ.

ಜು.6ರಂದು 90ನೇ ವರ್ಷಕ್ಕೆ ಕಾಲಿಡುತ್ತಿರುವ ದಲೈಲಾಮಾ ತಮ್ಮ ಉತ್ತರಾಧಿಕಾರಿ ವಿಷಯವಾಗಿ 5.57 ನಿಮಿಷದ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ‘ದಲೈಲಾಮಾ ಸಂಸ್ಥೆ ಮುಂದುವರಿಯುತ್ತದೆ. ನನ್ನ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಅಧಿಕಾರ ಗಾಡೆನ್ ಫೋಡ್ರಾಂಗ್ ಟ್ರಸ್ಟ್‌ಗೆ ಮಾತ್ರ ಇರುತ್ತದೆ. ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಬೇರೆ ಯಾರಿಗೂ ಯಾವುದೇ ಅಧಿಕಾರವಿಲ್ಲ’ ಎಂದು ತಿಳಿಸಿದ್ದಾರೆ. ಅವರು 1959ರಲ್ಲಿ ಚೀನಾ ಪಡೆಗಳು ಟಿಬೆಟ್ ಅನ್ನು ಕೈವಶ ಮಾಡಿಕೊಂಡಾಗ ಜೀವಭಯದಿಂದ ಲಾಸಾ ತೊರೆದು ಭಾರತಕ್ಕೆ ಪಲಾಯನ ಮಾಡಿದ್ದರು. ಆಗಿನಿಂದಲೂ ಚೀನಾ ಅವರನ್ನು ‘ಪ್ರತ್ಯೇಕತಾವಾದಿ’ ಎಂದು ದೂಷಿಸುತ್ತಲೇ ಬಂದಿದೆ.

ನಮ್ಮಿಂದಲೇ ಉತ್ತರಾಧಿಕಾರಿ ಆಯ್ಕೆ- ಚೀನಾ ಕಿರಿಕ್:

ಉತ್ತರಾಧಿಕಾರಿ ಆಯ್ಕೆ ಕುರಿತು ದಲೈಲಾಮಾ ಘೋಷಣೆ ಬೆನ್ನಲ್ಲೆ ಚೀನಾ ಸರ್ಕಾರ ಹೇಳಿಕೆ ನೀಡಿದ್ದು, ‘ದಲೈಲಾಮಾ ಅವರ ಉತ್ತರಾಧಿಕಾರಿಯನ್ನು ಚೀನಾ ಸರ್ಕಾರವೇ ಅನುಮೋದಿಸಬೇಕು ಮತ್ತು ಈ ಪ್ರಕ್ರಿಯೆ ಚೀನಾದೊಳಗೇ ನಡೆಯಬೇಕು’ ಎಂದಿದೆ.



Source link

Leave a Reply

Your email address will not be published. Required fields are marked *