Headlines

ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಜಾಗತಿಕ ಸಮಾನತೆ ಸೂಚ್ಯಂಕದಲ್ಲಿ 25.5 ಅಂಕಗಳನ್ನು ಪಡೆಯುವ ಮೂಲಕ ಭಾರತ ವಿಶ್ವದಲ್ಲಿ 167 ದೇಶಗಳ ಪೈಕಿ 4ನೇ ಸ್ಥಾನ ಪಡೆದುಕೊಂಡಿವೆ. | India Ranks 4th In Global Equality Index With Score Of 25 5

ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಜಾಗತಿಕ ಸಮಾನತೆ ಸೂಚ್ಯಂಕದಲ್ಲಿ 25.5 ಅಂಕಗಳನ್ನು ಪಡೆಯುವ ಮೂಲಕ ಭಾರತ ವಿಶ್ವದಲ್ಲಿ 167 ದೇಶಗಳ ಪೈಕಿ 4ನೇ ಸ್ಥಾನ ಪಡೆದುಕೊಂಡಿವೆ. | India Ranks 4th In Global Equality Index With Score Of 25 5



ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಜಾಗತಿಕ ಸಮಾನತೆ ಸೂಚ್ಯಂಕದಲ್ಲಿ 25.5 ಅಂಕಗಳನ್ನು ಪಡೆಯುವ ಮೂಲಕ ಭಾರತ ವಿಶ್ವದಲ್ಲಿ 167 ದೇಶಗಳ ಪೈಕಿ 4ನೇ ಸ್ಥಾನ ಪಡೆದುಕೊಂಡಿವೆ.

ನವದೆಹಲಿ: ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಜಾಗತಿಕ ಸಮಾನತೆ ಸೂಚ್ಯಂಕದಲ್ಲಿ 25.5 ಅಂಕಗಳನ್ನು ಪಡೆಯುವ ಮೂಲಕ ಭಾರತ ವಿಶ್ವದಲ್ಲಿ 167 ದೇಶಗಳ ಪೈಕಿ 4ನೇ ಸ್ಥಾನ ಪಡೆದುಕೊಂಡಿವೆ. ಈ ಮೂಲಕ ವಿಶ್ವದ ಶ್ರೀಮಂತ ಮತ್ತು ಮುಂಚೂಣಿ ದೇಶಗಳಾದ ಅಮೆರಿಕ, ಬ್ರಿಟನ್‌ ಮತ್ತು ಚೀನಾ ದೇಶಗಳನ್ನು ಭಾರತ ಹಿಂದಿಕ್ಕಿದೆ. ಸ್ಲೊವಾಕಿಯಾ, ಸ್ಲೊವೇನಿಯಾ ಮತ್ತು ಬೆಲಾರಸ್‌ ದೇಶಗಳು ಮೊದಲ ಮೂರು ಸ್ಥಾನದಲ್ಲಿವೆ.

ದೇಶವೊಂದರಲ್ಲಿ ಕುಟುಂಬಗಳು ಮತ್ತು ವ್ಯಕ್ತಿಗಳ ಆದಾಯ, ಸಂಪತ್ತು ಮತ್ತು ಬಳಕೆಯನ್ನು ಅಳೆಯುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ಈ ಸೂಚ್ಯಂಕ ಬಿಡುಗಡೆ ಮಾಡುತ್ತದೆ. ಯಾವ ದೇಶ 0 ಅಂಕ ಪಡೆಯುತ್ತದೆಯೋ ಅದು ಹೆಚ್ಚು ಸಮಾನ ದೇಶ ಎಂದರ್ಥ. 100 ಅಂಕ ಪಡೆಯುವ ದೇಶಗಳು ಅತ್ಯಂತ ಹೆಚ್ಚು ಅಸಮಾನತೆ ಹೊಂದಿವೆ ಎಂದರ್ಥ. ಭಾರತ 25.5 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಕಳೆದೊಂದು ದಶಕದಲ್ಲಿ ಕಡುಬಡತನ ಇಳಿಕೆಗೆ ಕೈಗೊಂಡ ಕ್ರಮಗಳು ಇದಕ್ಕೆ ಕಾರಣ ಎಂದು ಸರ್ಕಾರ ಹೇಳಿವೆ.

35 ಕೋಟಿ ಜನರು ಗುಣಮಟ್ಟದ ಜೀವನದಿಂದ ವಂಚಿತರಾಗಿ ಬದುಕುತ್ತಿದ್ದಾರೆ.

ಆರ್ಥಿಕಾಭಿವೃದ್ಧಿಯಲ್ಲಿ ಭಾರತ ನಾಗಾಲೋಟ ಸಾಧಿಸಿದ್ದರೂ, ಕಡುಬಡತನದ ಪ್ರಮಾಣ ಇಳಿದಿದ್ದರೂ ಈಗಲೂ ದೇಶದ ಪ್ರತಿ ನಾಲ್ವರಲ್ಲಿ ಒಬ್ಬರು ಅಂದರೆ 35 ಕೋಟಿ ಜನರು ಗುಣಮಟ್ಟದ ಜೀವನದಿಂದ ವಂಚಿತರಾಗಿ ಬದುಕುತ್ತಿದ್ದಾರೆ.

ಪೌಷ್ಠಿಕ ಆಹಾರ, ಸುರಕ್ಷಿತ ಮನೆ, ಆರೋಗ್ಯ ಸೇವೆ ಮತ್ತು ಶಿಕ್ಷಣದಿಂದ ಇಷ್ಟುಜನರು ವಂಚಿತರಾಗಿದ್ದಾರೆ ಎಂದು ವಿಶ್ವಬ್ಯಾಂಕ್‌ ವರದಿ ಹೇಳಿದೆ.ಭಾರತದಲ್ಲಿ ಬಡತನ ಇಳಿದರೂ, ಗುಣಮಟ್ಟದ ಜೀವನದಲ್ಲಿ ಸುಧಾರಣೆಯಾಗಿಲ್ಲ. 2011ರಿಂದ ಭಾರತದಲ್ಲಿ ಬಡತನದ ಪರಿಸ್ಥಿತಿ ಸುಧಾರಿಸಿದ್ದು, ತಲಾವಾರು ಜಿಡಿಪಿ ಸೇರಿದಂತೆ ಬಹು ಆಯಾಮದಲ್ಲಿ ಬಡತನದಲ್ಲಿ ಇಳಿಕೆಯಾಗಿದೆ. ಶೇ.5ರಷ್ಟು ಮಂದಿ ಮಾತ್ರ ತೀವ್ರ ಬಡತನದಲ್ಲಿ ವಾಸಿಸುತ್ತಿದ್ದಾರೆ. 2013ರಲ್ಲಿ ಶೇ.29ರಷ್ಟು ಇದ್ದ ಕಡುಬಡತನ 2022ರಲ್ಲಿ ಶೇ.11.3ಕ್ಕೆ ಇಳಿದಿದೆ. ಈ ಅವಧಿಯಲ್ಲಿ 20 ಕೋಟಿ ಮಂದಿ ಬಡತನದಿಂದ ಮುಕ್ತರಾಗಿದ್ದಾರೆ ಎಂದಿದೆ.

ಇದರ ಹೊರತಾಗಿಯೂ ಬಡವ ಮತ್ತು ಶ್ರೀಮಂತರ ನಡುವೆ ವ್ಯತ್ಯಾಸಗಳಿವೆ ಎಂದಿರುವ ವಿಶ್ವ ಬ್ಯಾಂಕ್, ಗಿನಿ ಸೂಚ್ಯಂಕದ ಪ್ರಕಾರ, ಭಾರತದಲ್ಲಿ ಈ ಪ್ರಮಾಣ 2011ರಲ್ಲಿ ಶೇ.28.8ರಷ್ಟಿತ್ತು. ಆದರೆ 2022ರಲ್ಲಿ ಸ್ವಲ್ವ ಸುಧಾರಿಸಿದ್ದು ಶೇ.25.5ಕ್ಕೆ ಇಳಿದಿದೆ. ಶೇ.1ರಷ್ಟು ಶ್ರೀಮಂತರು ದೇಶದ ಸಂಪತ್ತಿನ ಶೇ40ರಷ್ಟು ಸಂಪತ್ತನ್ನು ನಿರ್ವಹಿಸುತ್ತಿದ್ದಾರೆ. ಕೆಳಗಿನ 50ರಷ್ಟು ಮಂದಿ ಶೇ.6.4ರಷ್ಟನ್ನು ಮಾತ್ರವೇ ಹೊಂದಿದ್ದಾರೆ’ ಎಂದಿದೆ.

ವಿಶ್ವಬ್ಯಾಂಕ್ ಸಲಹೆಗಳೇನು?

 ಗುಣಮಟ್ಟದ ಜೀವನಕ್ಕಿಂತ ಕೆಳಗಡೆ ವಾಸಿಸುವರನ್ನು ಕಡುಬಡತನದ ವರ್ಗಕ್ಕೆ ಸೇರಿಸಲು ಆಗದೇ ಇದ್ದರೂ ಕೂಡ ಅವರು ಪೌಷ್ಠಿಕ ಆಹಾರ, ಸುರಕ್ಷಿತ ವಸತಿ, ಆರೋಗ್ಯ ರಕ್ಷಣೆ ಮತ್ತು ಶಿಕ್ಷಣದಂತಹ ಮೂಲಭೂತ ಸೌಕರ್ಯಗಳಿಂದ ವಂಚಿತರಾಗುತ್ತಿದ್ದಾರೆ.ಗುಣಮಟ್ಟದ ಜೀವನ ನಡೆಸುತ್ತಿರುವ ಪ್ರಮಾಣದಲ್ಲಿ ಆಗುತ್ತಿರುವ ಈ ವ್ಯತ್ಯಾಸ ತಡೆಗೆ ವಿಶ್ವ ಬ್ಯಾಂಕ್ ಅನೇಕ ಸಲಹೆ ನೀಡಿದೆ. ಜಾಗತಿಕವಾಗಿ 250 ರು. ಹಣವನ್ನು ಗುಣಮಟ್ಟದ ಜೀವನದ ಮಟ್ಟ ಪ್ರಮಾಣ ಎಂದು ಗುರುತಿಸಲಾಗುತ್ತದೆ. ಆದರೆ ಭಾರತದಲ್ಲಿ ಆ ಪ್ರಮಾಣ ಶೇ.5ರಷ್ಟು ಮಾತ್ರವಿದೆ. ಆದರೆ ಭಾರತದಂತಹ ಮುಂದುವರೆಯುತ್ತಿರುವ ದೇಶದಲ್ಲಿ ಆ ಪ್ರಮಾಣ 350 ರು.ಗೆ ತಲುಪಬೇಕು ಎಂದು ವಿಶ್ವಬ್ಯಾಂಕ್ ಅಭಿಪ್ರಾಯ ಪಟ್ಟಿದೆ.

ಕಾರಣವೇನು?ಈ ಸಮಸ್ಯೆಗೆ ಕಾರಣಗಳನ್ನೂ ಕೂಡ ವಿಶ್ವ ಬ್ಯಾಂಕ್ ನೀಡಿದ್ದು, ನಗರದಲ್ಲಿ ಬಾಡಿಗೆ, ಸ್ಥಿರವಲ್ಲದ ಉದ್ಯೋಗ ಜನರ ಜೀವನ ಮಟ್ಟ ಕುಸಿಯಲು ಕಾರಣವಾಗಿದ್ದರೆ, ಗ್ರಾಮೀಣದಲ್ಲಿ ಭೂಮಿ ವಿಭಜನೆ, ಆದಾಯ ಅಸ್ಥಿರವೂ ಕಾರಣ. ಇದರ ಪರಿಣಾಮ ಒಂದು ವೇಳೆ ಆರೋಗ್ಯ ತುರ್ತು ಪರಿಸ್ಥಿತಿಗಳು ಉಂಟಾದಲ್ಲಿ ಬಿಕ್ಕಟ್ಟಿಗೆ ತಳ್ಳುತ್ತದೆ ಎಂದಿದೆ.



Source link

Leave a Reply

Your email address will not be published. Required fields are marked *