ನೇರಳೆ ಬೀಜಗಳ ಪುಡಿಯನ್ನು ಕೇವಲ 15 ದಿನಗಳವರೆಗೆ ಸೇವಿಸುವುದರಿಂದ ದೀರ್ಘಕಾಲದ ಮಧುಮೇಹ ಮತ್ತು ಕಿಡ್ನಿ ಸ್ಟೋನ್‌ನಿಂದ ಪರಿಹಾರ ಪಡೆಯಬಹುದು.
Jamun (Plum) Seed Powder: ಇದು ನೇರಳೆಹಣ್ಣಿನ ಸೀಸನ್. ರಸ್ತೆಬದಿ, ಯಾವುದೇ ಶಾಪ್, ಮಾರುಕಟ್ಟೆಗಳಿಗೆ ಹೋದರೂ ಅಲ್ಲಿ ನೇರಳೆಹಣ್ಣಿನ ರಾಶಿಯನ್ನು ನೀವು ನೋಡಬಹುದು. ಸ್ವಲ್ಪ ಹುಳಿ, ಸ್ವಲ್ಪ ಸಿಹಿ ರುಚಿಯಿರುವ ಈ ಹಣ್ಣುಗಳು ಆರೋಗ್ಯದ ವಿಷಯಕ್ಕೆ ಬಂದಾಗ ಅದ್ಭುತವಾದ ಪ್ರಯೋಜನಗಳನ್ನು ಹೊಂದಿವೆ. ನೀವೇನೋ ಸಂತೋಷದಿಂದ ಹಣ್ಣನ್ನು ಮಾತ್ರ ತಿಂದು ಅದರ ಬೀಜಗಳನ್ನು ಎಸೆಯುತ್ತೀರಿ. ಆದರೆ ನೇರಳಹಣ್ಣಿನ ಬೀಜವು ನಿಮ್ಮ ಆರೋಗ್ಯಕ್ಕೆ ರಾಮಬಾಣ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?. ಹೌದು,
ಇನ್‌ಸ್ಟಾಗ್ರಾಮ್‌ನಲ್ಲಿ healthyyjevan ಎಂಬ ಪೇಜ್‌ನಿಂದ ವಿಡಿಯೋವೊಂದು ವೈರಲ್ ಆಗಿದ್ದು, ಇದರಲ್ಲಿ ನೇರಳೆಹಣ್ಣಿನ ಬೀಜಗಳಿಂದ ಏನೆಲ್ಲಾ ಪ್ರಯೋಜನಗಳಿಗೆ ಎಂಬುದನ್ನು ವಿವರವಾಗಿ ತಿಳಿಸಲಾಗಿದೆ. ವಿಡಿಯೋದಲ್ಲಿ ನೇರಳೆಹಣ್ಣಿನ ಬೀಜವು ಹಣ್ಣಿಗಿಂತ ಹೆಚ್ಚು ಮೌಲ್ಯಯುತ ಎಂದು ಹೇಳಲಾಗಿದೆ. ಏಕೆಂದರೆ ಈ ಬೀಜಗಳು ಮಧುಮೇಹ ಮತ್ತು ಮೂತ್ರಪಿಂಡದ ಕಲ್ಲು (Kidney stone) ನಂತಹ ರೋಗಗಳನ್ನು ಕೇವಲ 15 ದಿನಗಳಲ್ಲಿ ಬೇರುಸಹಿತ ತೆಗೆದುಹಾಕಬಹುದು ಎಂದು ಹೇಳಲಾಗಿದೆ. ಹಾಗಾದರೆ ಈ ಇನ್‌ಸ್ಟಾ ವೈರಲ್ ಪರಿಹಾರದ ಸತ್ಯವೇನು ಎಂದು ನೋಡೋಣ ಬನ್ನಿ…
ಬಾಲ್ಯದಿಂದಲೂ ನೇರಳೆಹಣ್ಣು ರಕ್ತವನ್ನು ಶುದ್ಧೀಕರಿಸುತ್ತದೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮಧುಮೇಹಿಗಳಿಗೆ ವರದಾನವಾಗಿದೆ ಎಂಬ ಮಾತನ್ನು ನಾವು ಕೇಳಿದ್ದೇವೆ. ಆದರೆ ಈಗ ಆರೋಗ್ಯ ತಜ್ಞರ ಗಮನ ಇಲ್ಲಿಯವರೆಗೆ ಕಸದ ಬುಟ್ಟಿಗೆ ಎಸೆಯಲ್ಪಟ್ಟಿದ್ದ ಹಣ್ಣಿನ ಬೀಜದತ್ತ ಹೋಗಿದೆ. healthyyjevan ಎಂಬ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಅಪ್‌ಲೋಡ್ ಮಾಡಲಾದ ವಿಡಿಯೋದಲ್ಲಿ ತೋರಿಸಿರುವ ಹಾಗೆ ಕೆಲವು ನೇರಳೆಹಣ್ಣಿನ ಬೀಜಗಳನ್ನು ತೆಗೆದುಕೊಂಡು ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸಲಾಗಿದೆ. ಸಂಪೂರ್ಣವಾಗಿ ಒಣಗಿದ ನಂತರ, ಅವುಗಳನ್ನು ಮಿಕ್ಸರ್‌ನಲ್ಲಿ ಪುಡಿಮಾಡಲಾಗುತ್ತದೆ. ನಂತರ ಒಂದು ಚಮಚ ಪುಡಿ ತೆಗೆದುಕೊಂಡು ಅದನ್ನು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಲು ಅಥವಾ ನೀರಿನೊಂದಿಗೆ ಕುಡಿಯಬಹುದು ಎಂದು ಹೇಳಲಾಗಿದೆ. ಇದನ್ನು ಕುಡಿಯುವುದರಿಂದ ಕೇವಲ 15 ದಿನಗಳಲ್ಲಿ ಬಹುದಿನಗಳಿಂದ ಇರುವ ಹಳೆಯ ಕಲ್ಲುಗಳು ಬೇರಿನಿಂದ ನಿರ್ಮೂಲನೆಯಾಗುತ್ತವೆ ಎನ್ನಲಾಗಿದೆ.
ನಿಜಕ್ಕೂ ನೇರಳೆ ಬೀಜಗಳು ಪ್ರಯೋಜನಕಾರಿಯೇ?
ಈಗ ದೊಡ್ಡ ಪ್ರಶ್ನೆಯೆಂದರೆ ಇನ್‌ಸ್ಟಾಗ್ರಾಮ್‌ನಲ್ಲಿ ಹೇಳಿರುವಂತೆ ಈ ನೇರಳೆ ಬೀಜಗಳು ನಿಜಕ್ಕೂ ಪ್ರಯೋಜನಕಾರಿಯೇ?. ಏಕೆಂದರೆ ಆರೋಗ್ಯ ತಜ್ಞರ ಪ್ರಕಾರ, ನೇರಳೆ ಬೀಜಗಳನ್ನು ಆಯುರ್ವೇದದಲ್ಲಿ ಶತಮಾನಗಳಿಂದ ಬಳಸಲಾಗುತ್ತಿದೆ. ಅನೇಕ ಸಂಶೋಧನಾ ಪ್ರಬಂಧಗಳು ನೇರಳೆ ಬೀಜಗಳು ಮಧುಮೇಹ ವಿರೋಧಿ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿವೆ ಎಂದು ಒಪ್ಪಿಕೊಂಡಿವೆ. ಆದ್ದರಿಂದ, ಈ ಹೇಳಿಕೆಯನ್ನು ಸಂಪೂರ್ಣವಾಗಿ ಸುಳ್ಳು ಎಂದು ಕರೆಯುವುದು ತಪ್ಪು. ಆದರೆ ನೇರಳೆ ಬೀಜಗಳು ನೈಸರ್ಗಿಕ ಪೋಷಕ ಚಿಕಿತ್ಸೆಯಾಗಿದೆ, ಇನ್ಸುಲಿನ್‌ಗೆ ಪರ್ಯಾಯವಲ್ಲ ಎಂಬುದನ್ನು ಸಹ ಅರ್ಥಮಾಡಿಕೊಳ್ಳಬೇಕು.
ನೇರಳೆ ಬೀಜಗಳ ಪ್ರಯೋಜನಗಳೇನು?
1.ರಕ್ತದಲ್ಲಿನ ಸಕ್ಕರೆ ನಿಯಂತ್ರಿಸಲು
ನೇರಳೆ ಬೀಜಗಳಲ್ಲಿರುವ ಜಾಂಬೋಲಿನ್ ಮತ್ತು ಜಾಂಬೋಸಿನ್ ಎಂಬ ನೈಸರ್ಗಿಕ ಅಂಶಗಳು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇವು ದೇಹದಲ್ಲಿ ಇನ್ಸುಲಿನ್ ಪರಿಣಾಮವನ್ನು ಸುಧಾರಿಸುತ್ತವೆ.
2. ಮೂತ್ರಪಿಂಡದ ಕಲ್ಲುಗಳಿಗೆ ಚಿಕಿತ್ಸೆ
ನೇರಳೆ ಬೀಜಗಳ ಈ ಪುಡಿ ಮೂತ್ರವನ್ನು ಶುದ್ಧೀಕರಿಸುತ್ತದೆ ಮತ್ತು ಅದರ ಮೂಲಕ ಮೂತ್ರಪಿಂಡದ ಕಲ್ಲುಗಳನ್ನು ನಿಧಾನವಾಗಿ ಕರಗಿಸುತ್ತದೆ. 15-20 ದಿನಗಳವರೆಗೆ ನಿರಂತರವಾಗಿ ಬಳಸುವುದರಿಂದ ಕಿಡ್ನಿ ಸ್ಟೋನ್‌ನಿಂದ ಪರಿಹಾರ ಪಡೆಯಬಹುದು.
3.ರೋಗ ನಿರೋಧಕ ಶಕ್ತಿ ಹೆಚ್ಚಿಸಲು
ನೇರಳೆ ಬೀಜಗಳ ಪುಡಿಯು ಗ್ಯಾಸ್, ಅಸಿಡಿಟಿ ಮತ್ತು ಹೊಟ್ಟೆಯ ಕಿರಿಕಿರಿಯನ್ನು ನಿವಾರಿಸುತ್ತದೆ, ರಕ್ತದೊತ್ತಡವನ್ನು ಸಮತೋಲನಗೊಳಿಸುತ್ತದೆ, ಚರ್ಮದ ಅಲರ್ಜಿ ನಿವಾರಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ತಜ್ಞರ ಪ್ರಕಾರ, ಈ ಪರಿಹಾರವು ನೈಸರ್ಗಿಕವಾಗಿದ್ದರೂ, ಪ್ರತಿಯೊಬ್ಬರ ದೇಹವು ವಿಭಿನ್ನವಾಗಿರುತ್ತದೆ. ಯಾರಿಗಾದರೂ ಅಧಿಕ ರಕ್ತದೊತ್ತಡ, ಗರ್ಭಧಾರಣೆ, ಥೈರಾಯ್ಡ್ ಅಥವಾ ಯಾವುದೇ ಗಂಭೀರ ಕಾಯಿಲೆ ಇದ್ದರೆ, ಮೊದಲು ವೈದ್ಯರನ್ನು ಸಂಪರ್ಕಿಸಿ. ಏಕೆಂದರೆ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ. ತಲೆತಿರುಗುವಿಕೆ, ಆಯಾಸ ಮತ್ತು ದೌರ್ಬಲ್ಯಕ್ಕೆ ಕಾರಣವಾಗಬಹುದು.