ಬ್ರಹ್ಮಗಂಟು ಧಾರಾವಾಹಿಯಲ್ಲಿ ಇದೀಗ ತಂಗಿ ದೀಪಾಳ ಸಂಸಾರವನ್ನು ಕಾಪಾಡಲು ಹೋಗಿ ಚಿರು ಮದುವೆಯಾಗಲು ಹಸೆಮಣೆಯಲ್ಲಿ ಕುಳಿತಿದ್ದ ಸಂಜನಾಗೆ ತಾಳಿ ಕಟ್ಟಿದ್ದಾನೆ. ಆದರೆ, ಮದುವೆಯಾಗಿ ನರಸಿಂಹನ ಮನೆಗೆ ಬಂದಿರುವ ಸಂಜನಾ, ನರಸಿಂಹನಿಗೆ ಬುದ್ದಿ ಕಲಿಸುವ ಜೊತೆಗೆ ಮನೆಯನ್ನು ನಾಶ ಮಾಡಲು ಪಣತೊಟ್ಟಿದ್ದಾಳೆ. ಒಂದು ಕೌಟುಂಬಿಕ ಧಾರಾವಾಹಿಯಲ್ಲಿ ಇದೆಲ್ಲವೂ ಸರಿಯಾಗಿದೆ, ಆದರೆ ಭಾರತೀಯ ಸಂಪ್ರದಾಯದಂತೆ ಚಿರು ಮತ್ತು ಸಂಜನಾ ಇದೀಗ ವರಸೆಯಂತೆ ಅಣ್ಣ-ತಂಗಿ ಸಂಬಂಧ ಆಗಬೇಕು. ನಿರ್ದೇಶಕರು ಮಾತ್ರ ಚಿರು ಜೊತೆಗೆ ಸಂಜನಾಗೆ ರೊಮ್ಯಾನ್ಸ್ ಮಾಡುವ ಪಾತ್ರಗಳನ್ನು ಕೊಟ್ಟು ಸಂಬಂಧಗಳಿಗೆ ಬೆಲೆ ಇಲ್ಲದಂತೆ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿದೆ.

ನರಸಿಂಹ ಮತ್ತು ಸಂಜನಾ ನಡುವೆ ಪ್ರೀತಿ, ಹೊಂದಾಣಿಕೆಯನ್ನು ಏರ್ಪಡುವಂತೆ ಮಾಡಲು ಚಿರು-ದೀಪಾ ಮತ್ತು ಮಕ್ಕಳು ಸೇರಿಕೊಂಡು ಫೋಟೋ ಶೂಟ್ ಮಾಡುವ ಉಪಾಯ ಮಾಡಿದ್ದಾರೆ. ಈ ವೇಳೆ ಸಂಜನಾಗೆ ಫೋಟೋ ಶೂಟ್ ಮಾಡಿಸಿಕೊಳ್ಳಲು ಬಂದಾಗ ನರಸಿಂಹ ಇನ್ನೂ ರೆಡಿಯಾಗುತ್ತಿರುತ್ತಾನೆ. ಆಗ ಫ್ಯಾಷನ್ ಡಿಸೈನರ್ ಆಗಿರುವ ಚಿರುಗೆ ಒಂದಷ್ಟು ಫೋಟೋ ಪೋಸ್‌ಗಳಿಗೆ ಸಂಜನಾ ಸಲಹೆ ಕೇಳುತ್ತಾಳೆ. ಆಗ ನರಸಿಂಹ ಮತ್ತು ದೀಪಾಳಿಗೆ ನೋವು ಕೊಡಬೇಕೆಂದು ಚಿರು ಕೈಯನ್ನು ಹಿಡಿದುಕೊಂಡು ತನ್ನ ಸೊಂಟದ ಮೇಲಿಟ್ಟುಕೊಂಡು ರೊಮ್ಯಾನ್ಸ್ ಮಾಡುವ ರೀತಿಯಲ್ಲಿ ಪೋಸ್ ಕೊಡಲು ಮುಂದಾಗುತ್ತಾಳೆ. ಜೊತೆಗೆ, ಕಿಸ್ ಪೋಸ್‌ಗಳನ್ನು ಹೇಗೆ ಕೊಡಬೇಕೆಂದು ಕೇಳುತ್ತಿರುವಾಗ ನರಸಿಂಹ ಮಧ್ಯ ಪ್ರವೇಶಿಸಿ ಸಂಜನಾ ಜೊತೆಗೆ ಫೋಟೋ ಪೋಸ್ ಕೊಡುತ್ತಾನೆ.
View this post on Instagram
A post shared by Zee Kannada (@zeekannada)

ಭಾರತೀಯ ಕುಟುಂಬಗಳ ಸಂಬಂಧಗಳಲ್ಲಿ ಒಮ್ಮೆ ವರಸೆಯಲ್ಲಿ ಅಣ್ಣ-ತಂಗಿ ಎಂದು ತಿಳಿದಲ್ಲಿ ಅವರ ನಡುವೆ ಯಾವುದೇ ಮೋಹಕ್ಕೆ ಅವಕಾಶವೇ ಇರುವುದಿಲ್ಲ. ಇನ್ನು ಯಾರೇ ಆಗಲೀ ಇದನ್ನು ತುಂಬಾ ಕಟ್ಟುನಿಟ್ಟಿನಿಂದ ಪಾಲನೆ ಮಾಡುತ್ತಾರೆ. ಆದರೆ, ಧಾರಾವಾಹಿಯಲ್ಲಿ ಚಿರು ಅತ್ತಿಗೆ ಸಂದರ್ಯಾ, ದೀಪಾಳಿಗೆ ಚಿರುನಿಂದ ಡಿವೋರ್ಸ್ ಕೊಡಿಸಿ ಪೊಲೀಸ್ ಅಧಿಕಾರಿಯ ಮಗಳು ಸಂಜನಾ ಜೊತೆಗೆ ಮದುವೆ ಮಾಡಲು ಮುಂದಾಗುತ್ತಾಳೆ. ಈ ವೇಳೆ ನರಸಿಂಹ ಬಂದು ಸಂಜನಾಗೆ ತಾಳಿ ಕಟ್ಟುತ್ತಾನೆ. ದೀಪಾಳ ಅಣ್ಣ ನರಸಿಂಹ ಮತ್ತು ಸಂಜನಾಗೆ ಮದುವೆಯಾದ ನಂತರ ದೀಪಾ ಗಂಡ ಚಿರುಗೆ ಸಂಜನಾ ಸಹೋದರಿ ಸಮಾನ ಆಗುತ್ತಾಳೆ. ಚಿರು ಮತ್ತು ಸಂಜನಾ ನಡುವೆ ವರಸೆ ಪ್ರಕಾರ ಅಣ್ಣ-ತಂಗಿ ಸಂಬಂಧ ಆಗುತ್ತದೆ.

ಒಂದೇ ಕುಟುಂಬದಲ್ಲಿ ಅಣ್ಣ-ತಂಗಿ ಸಂಬಂಧ ಇದ್ದರೂ ಅವರಿಬ್ಬರ ನಡುವೆ ಸಂಪ್ರದಾಯಗಳನ್ನು ಮೀರಿ ಸಂಜನಾ-ನರಸಿಂಹಗೆ ಏರ್ಪಡಿಸಿದ್ದ ಫೋಟೋ ಶೂಟ್ ವೇಳೆ ಚಿರು-ಸಂಜನಾ ರೊಮ್ಯಾನ್ಸ್ ಮಾಡಿಸಲು ಹೊರಟಿದ್ದು ಎಷ್ಟು ಸರಿ ಎಂದು ಸಂಪ್ರದಾಯಸ್ಥರು ಮೂಗು ಮುರಿಯುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಸಂಬಂಧಗಳಿಗೆ ಬೆಲೆಯನ್ನೇ ಕೊಡುತ್ತಿಲ್ಲ. ಒಬ್ಬರ ಮೇಲೆ ದ್ವೇಷ ಸಾಧಿಸುವುದಕ್ಕಾಗಿ ಅನಾದಿ ಕಾಲದಿಂದ ಬಂದ ಸಂಬಂಧಗಳನ್ನು ಹಾಳು ಮಾಡಬಾರದು ಎಂದು ಹಿರಿತಲೆಗಳು ಜಗುಲಿಕಟ್ಟೆ ಮೇಲೆ ಕುಳಿತು ಮಾತನಾಡುವುದು ಕೂಡ ಕೇಳಿಬಂದಿದೆ.

ನರಸಿಂಹ-ಸಂಜನಾ ಮದುವೆಯಾದ ನಂತರ ಅವರೊಬ್ಬರೂ ಖುಷಿಯಾಗಿದ್ದಾರೆ ಎಂದು ನಂಬಿಕೊಂಡು ಸೀರೆ ಕೊಟ್ಟು ಶುಭಾಶಯ ಕೋರಲು ಬಂದಿದ್ದ ದೀಪಾಗೆ ಅವರ ಸಂಸಾರ ಚೆನ್ನಾಗಿಲ್ಲವೆಂದು ತಿಳಿದು ಬೇಸರಗೊಂಡಿದ್ದಾಳೆ. ಇದನ್ನು ಇಷ್ಟಕ್ಕೆ ಬಿಡದೇ ಅವರಲ್ಲಿ ಹೊಂದಾಣಿಕೆ ತರುವ ದೃಷ್ಟಿಯಿಂದ ಹಲವು ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ. ನರಸಿಂಹನ ಮನೆಯಲ್ಲಿ ಮದುವೆಯಾದ ಜೋಡಿಗೆ ಶುಭವಾಗಲೆಂದು ಪೂಜೆಯನ್ನೂ ಏರ್ಪಾಡು ಮಾಡಲಾಗಿದೆ. ಈ ಪೂಜೆಗೆ ಅನುಕೂಲ ಆಗುವಂತೆ ಮನೆ ಕೆಲಸ ಮಾಡಲು ಸ್ವತಃ ದೀಪಾಳ ಅಕ್ಕ ರೂಪ ಕೂಡ ಕೆಲಸದಾಕೆಯಾಗಿ ಮನೆ ಸೇರಿಕೊಂಡಿದ್ದಾಳೆ.

Source link
ಹೆಸರಿಗೆ ಬ್ರಹ್ಮಗಂಟು ಆದ್ರೆ, ಅಣ್ಣ-ತಂಗಿ ಸಂಬಂಧಕ್ಕೆ ಬೆಲೆನೇ ಇಲ್ವೇ! ಚಿರು-ಸಂಜನಾ ರೊಮ್ಯಾನ್ಸ್‌ಗೆ ಆಕ್ರೋಶ