ದೇಹದೊಳಗೆ ಸೇರಿದ ವಿಷಕಾರಕ ಅಂಶಗಳಿಂದ ವ್ಯಕ್ತಿ ಅಸ್ವಸ್ಥ, ಕಾರಣ ಕುಕ್ಕರ್ ಅಡುಗೆ | Mumbai Man Hospitalized After Lead Poisoning Due Old Pressure Cooker Usage

ದೇಹದೊಳಗೆ ಸೇರಿದ ವಿಷಕಾರಕ ಅಂಶಗಳಿಂದ ವ್ಯಕ್ತಿ ಅಸ್ವಸ್ಥ, ಕಾರಣ ಕುಕ್ಕರ್ ಅಡುಗೆ | Mumbai Man Hospitalized After Lead Poisoning Due Old Pressure Cooker Usage



ಪ್ರೆಶರ್ ಕುಕ್ಕರ್ ಇಲ್ಲದ ಮನೆ ಸದ್ಯ ಇಲ್ಲ. ಸುಲಭವಾಗಿ ಅಡುಗೆ ತಯಾರಿಗೆ ಎಲ್ಲರೂ ಕುಕ್ಕರ್ ಬಳಸುತ್ತಾರೆ. ಇದೀಗ ಕುಕ್ಕರ್ ಅಡುಗೆ ತಿಂದು ದೇಹದಲ್ಲಿ ಸೇರಿಕೊಂಡ ವಿಷಕಾರಕ ಅಂಶಗಳಿಂದ ವ್ಯಕ್ತಿ ಅಸ್ವಸ್ಥಗೊಂಡ ಘಟನೆ ನಡೆದಿದೆ.  

ಮುಂಬೈ (ಜು.03) ಆಹಾರ, ಲೈಫ್‌ಸ್ಟೇಲ್ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಅನ್ನೋದರಲ್ಲಿ ಎರಡು ಮಾತಿಲ್ಲ. ಇದೀಗ ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. 50 ವರ್ಷದ ವ್ಯಕ್ತಿಯೊಬ್ಬರು ಇತ್ತೀಗೆ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ. ವ್ಯಕ್ತಿಯ ದೇಹದಲ್ಲಿ ಶೇಖರಣೆಯಾದ ವಿಷಕಾರಕ ಅಂಶಗಳಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ಹೊರಗಿನ ಆಹಾರ ತಿನ್ನದ, ಕೆಟ್ಟ ಚಟ ಹಾಗೂ ಇತರ ಕೆಟ್ಟ ಅಭ್ಯಾಸಗಳಿಲ್ಲದ ವ್ಯಕ್ತಿಯ ದೇಹದಲ್ಲಿ ವಿಷ ಸೇರಿಕೊಂಡಿದ್ದು ಹೇಗೆ ಅನ್ನೋದನ್ನು ವೈದ್ಯರ ಡಾ. ವಿಶಾಲ್ ಗಬಾಲೆ ಬಹಿರಂಗಪಡಿಸಿದ್ದಾರೆ. ಪ್ರೆಶರ್ ಕುಕ್ಕರ್ ಆಹಾರ ವ್ಯಕ್ತಿಯ ಆರೋಗ್ಯವನ್ನೇ ಕೆಡಿಸಿದೆ.

ಹಳೇ ಕುಕ್ಕರ್‌ನಿಂದ ಇದೇ ಆರೋಗ್ಯ ಅಪಾಯ

ಕುಕ್ಕರ್ ಹಳೇದಾಗಿದ್ದರೆ ಎಚ್ಚರ ಅಗತ್ಯ. ಹಳೇ ಕುಕ್ಕರ್‌ನಲ್ಲಿನ ರಬ್ಬರ್, ಹಳೇ ಮೆಟಲ್ ಪಾತ್ರೆ ಬಳಕೆಯಿಂದ ಆರೋಗ್ಯ ಅಪಾಯ ಹೆಚ್ಚು ಎಂದು ವೈದ್ಯ ವಿಶಾಲ್ ಗಬಾಲೆ ಹೇಳಿದ್ದಾರೆ. ಹಳೇ ಕುಕ್ಕರ್‌ನಲ್ಲೇ ಆಹಾರ ತಯಾರಿಸುವುದರಿಂದ ಅದರ ರಬ್ಬರ್ ಹಾಗೂ ಮೆಟಲ್‌ನಿಂದ ವಿಷಕಾರ ಅಂಶ ಸೃಷ್ಟಿಯಾಗುತ್ತದೆ. ಇದು ದೇಹದ ಒಳಗೆ ಸೇರಿ ಶೇಖರಣೆಯಾಗುತ್ತದೆ. ಹಳೇ ಕುಕ್ಕರ್‌ನಲ್ಲಿ ಸೃಷ್ಟಿಯಾಗುವ ವಿಷಕಾರಕ ಅಂಶಗಳ ಪ್ರಮಾಣ ಅತೀ ಕಡಿಮೆ. ಆದರೆ ಇದು ದೇಹದಲ್ಲಿ ಸೇರಿಕೊಳ್ಳುತ್ತದೆ. ಸುದೀರ್ಘ ದಿನಗಳ ಬಳಿಕ ಈ ವಿಶಕಾರಕ ಅಂಶಗಳು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಪರಿಣಾಮ ಬೀರುತ್ತದೆ ಎಂದು ಡಾ. ವಿಶಾಲ್ ಗಬಾಲೆ ಹೇಳಿದ್ದಾರೆ.

ಲೀಡ್ ಪಾಯ್ಸನಿಂಗ್ ಅತ್ಯಂತ ಅಪಾಯಕಾರಿ

ದೇಹದಲ್ಲಿ ವಿಷಕಾರಕ ಅಂಶ ಸೇರಿಕೊಳ್ಳುವ ಮೂಲಕ ಗಂಭೀರ ಆರೋಗ್ಯ ಸಮಸ್ಯೆಗಳನ್ನು ತರಲಿದೆ ಎಂದು ವೈದ್ಯ ವಿಶಾಲ್ ಗಬಾಲೆ ಹೇಳಿದ್ದಾರೆ. ಮಕ್ಕಳ ಪ್ರಾಣಕ್ಕೂ ಸಂಚಕಾರ ತರುವ ಸಾಧ್ಯತೆ ಇದೆ ಎಂದಿದ್ದಾರೆ. ಹೀಗೆ ಲೀಡ್ ಪಾಯ್ಸನಿಂಗ್ ಸಮಸ್ಯೆಯ ಲಕ್ಷಣಗಳನ್ನು ವಿಶಾಲ್ ಗಬಾಲೆ ಪಟ್ಟಿ ಮಾಡಿದ್ದಾರೆ. ಹೊಟ್ಟೆ ನೋವು, ತಲೆ ನೋವು, ವಾಂತಿ, ಆನಿಮಿಯಾ, ಅಸ್ವಸ್ಥೆಗೊಳ್ಳುವುದ, ಕಿಡ್ನಿ ಸಮಸ್ಯೆ, ಸ್ಪರ್ಶತೆ ಕಳೆದುಕೊಳ್ಳುವುದು, ದೃಷ್ಟಿ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳು ಈ ಲೀಡ್ ಪಾಯ್ಸನಿಂಗ್ ಅಪಾಯದಲ್ಲಿ ಕಾಣಿಸಿಕೊಳ್ಳಲಿದೆ ಎಂದಿದ್ದಾರೆ.

ಹಳೇ ಕುಕ್ಕರ್‌ನಿಂದ ಅಪಾಯ ಹೆಚ್ಚು

ಹಳೇ ಕುಕ್ಕರ್ ಬಳಕೆಯಿಂದ ಅಪಾಯ ಹೆಚ್ಚು. ಕುಕ್ಕರ್ ಬಳಕೆಗೂ ಅವಧಿ ಇದೆ. ಇಂತಿಷ್ಟು ವರ್ಷಗಳ ಕಾಲ ಮಾತ್ರ ಕುಕ್ಕರ್ ಬಳಕೆ ಮಾಡಬೇಕು. ಕುಕ್ಕರ್ ಬಳಕೆಯಿಂದ ದೂರವಿದ್ದಷ್ಟು ಉತ್ತಮ. ಆದರೆ ಅನಿವಾರ್ಯವಾಗಿ ಕುಕ್ಕರ್ ಬಳಕೆ ಮಾಡುತ್ತಿದ್ದರೂ ಒಂದೇ ಕುಕ್ಕರ್ ಹಲವು ವರ್ಷಗಳ ಕಾಲ ಬಳಕೆ ಮಾಡುವುದು ಉತ್ತಮವಲ್ಲ. ಕಾಲಕಾಲಕ್ಕೆ ಕುಕ್ಕರ್ ರಬ್ಬರ್ ಬದಲಾಯಿಸುತ್ತಾ ಬಳಕೆ ಮಾಡುತ್ತಾ ಸುದೀರ್ಘ ವರ್ಷಗಳ ವರೆಗೆ ಕುಕ್ಕರ್ ಬಳಕೆ ಮಾಡುವುದು ಉತ್ತಮ ನಿರ್ಧಾರವಲ್ಲ ಎಂದು ವಿಶಾಲ್ ಗಬಾಲೆ ಹೇಳಿದ್ದಾರೆ.

 



Source link

Leave a Reply

Your email address will not be published. Required fields are marked *