ಹೆಣ್ಮಕ್ಕಳಿಗೆ ಹಾರ್ಟು ಪ್ರಾಬ್ಲೆಂ ಬರದಿರೋದಕ್ಕೆ ಇದು ಕಾರಣ ಅಂತಿದ್ದಾರೆ ಭೂಮಿಕಾ ಅಮ್ಮ | Bhumikas Mother Mandakini Says This Is The Reason Why Girls Dont Get Heart Problems

ಹೆಣ್ಮಕ್ಕಳಿಗೆ ಹಾರ್ಟು ಪ್ರಾಬ್ಲೆಂ ಬರದಿರೋದಕ್ಕೆ ಇದು ಕಾರಣ ಅಂತಿದ್ದಾರೆ ಭೂಮಿಕಾ ಅಮ್ಮ | Bhumikas Mother Mandakini Says This Is The Reason Why Girls Dont Get Heart Problems



 ಅಮೃತಧಾರೆ ಸೀರಿಯಲ್‌ನ ಭೂಮಿಕಾ ತಾಯಿ ಮಂದಾಕಿನಿ ಆಂಟಿ ಅಲ್ಲಲ್ಲ ಮಂದಾಕಿನಿ ಅಕ್ಕ ಹೆಣ್ಮಕ್ಕಳಿಗೆ ಹಾರ್ಟ್ ಪ್ರಾಬ್ಲೆಂ ಯಾಕೆ ಬರಲ್ಲ ಅಂತ ಮಜವಾಗಿ ಹೇಳಿದ್ದಾರೆ ನೋಡಿ, ನೀವಿದನ್ನು ಒಪ್ತೀರಾ? 

ಅಮೃತಧಾರೆ ಸೀರಿಯಲ್‌ ಸದ್ಯ ಟಿಆರ್‌ಪಿ ರೇಸ್‌ನಲ್ಲಿ ಟಾಪ್‌ ಐದರಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಈ ಸೀರಿಯಲ್ ಆ ಲೆವೆಲ್ಲಿಂದ ಕೆಳಗೆ ಇಳಿದಿದ್ದೇ ಕಡಿಮೆ ಬಿಡಿ. ಯಾಕಂದ್ರೆ ಈ ಸೀರಿಯಲ್ ಕಥೆ ಶುರುವಿನಿಂದಲೇ ಸಖತ್ ಫಾಸ್ಟ್ ಆಗಿ ಮುಂದುವರೀತಾ ಇತ್ತು. ಉಳಿದ ಸೀರಿಯಲ್‌ಗೆ ಹೋಲಿಸಿದರೆ ಇದರಲ್ಲಿ ಎಳೆದಾಟ ಕಡಿಮೆ. ಕತೆ ಫಾಸ್ಟಾಗಿ ಮುಂದಕ್ಕೆ ಹೋಗ್ತಾ ಇರುತ್ತೆ. ಬೇರೆ ಸೀರಿಯಲ್‌ಗಳಲ್ಲಾದರೆ ಅಳು ಗೋಳಾಟ ನೋವು ಇವುಗಳದ್ದೇ ನರಳಾಟ. ಎಷ್ಟೋ ಜನ ವೀಕ್ಷಕರು ಈ ಕಾರಣಕ್ಕೆ ಸೀರಿಯಲ್ ನೋಡೋದನ್ನೇ ಗುಡ್‌ ಬಾಯ್ ಹೇಳಿದ್ದಾರೆ. ಮನೇಲಿರೋ ಗೋಳಾಟ ಸಾಲದು ಅಂತ ನಾವು ಸೀರಿಯಲ್‌ನಲ್ಲೂ ಬರೀ ಗೋಳಿನ ಕಥೆ ಕೇಳ್ಬೇಕಾ ಅನ್ನೋದು ಅವರ ವರ್ಶನ್. 

ಅವರ ಆ ಫೀಲಿಂಗ್ಸ್‌ನ ಚೆನ್ನಾಗಿ ಅರ್ಥ ಮಾಡಿಕೊಂಡಿರೋ ‘ಅಮೃತಧಾರೆ’ ಟೀಮ್ ಸೀರಿಯಲ್ಲಿನ ಗೋಳಾಟಕ್ಕೆಲ್ಲ ಬ್ಏಕ್‌ ಹಾಕಿ ಲವಲವಿಕೆಯ ಎಪಿಸೋಡ್‌ಗಳನ್ನೇ ಕೊಡಬೇಕು ಅಂತ ಪ್ಲಾನ್ ಮಾಡಿ ಮುಂದಕ್ಕೆ ಹೋಗ್ತಾ ಇದೆ.

ಕಥೆ ಪೂರ್ತಿಗೊಳಿಸದೆ ಪ್ರಸಾರ ನಿಲ್ಲಿಸಿದ Neenadhe Naa Serial; ಆ ಪ್ರಶ್ನೆಗಳಿಗೆ ಉತ್ತರ ಎಲ್ಲಿದೆ?

ಸದ್ಯಕ್ಕೆ ಈ ಸೀರಿಯಲ್‌ನಲ್ಲಿ ಒಂದು ದೊಡ್ಡ ಪ್ರವಾಹವೇ ಬಂದು ಹೋಗಿದೆ. ಸುನಾಮಿಯಂಥಾ ಆ ಘಟನೆಯಲ್ಲಿ ಕೊಚ್ಕೊಂಡು ಹೋಗಿರೋದು ಜೈದೇವ್ ಹೆಂಡ್ತಿ ಮಲ್ಲಿಯ ಸಂಸಾರ. ತಾನು ಮದುವೆ ಆಗಿರೋ ಹೆಂಡ್ತಿ ಎದುರಿದ್ರೂ ಎಲ್ಲರ ಸಮ್ಮುಖದಲ್ಲಿ ಜೈದೇವ್ ದಿಯಾಳನ್ನು ಮದುವೆ ಆಗುತ್ತಾನೆ. ಈ ಮದುವೆ ಹೇಗೆ ತಾನೇ ಮಾನ್ಯ ಅಗುತ್ತೆ ಅನ್ನೋದು ವೀಕ್ಷಕರ ಪ್ರಶ್ನೆ. ಆದರೂ ಎಲ್ಲರ ಸಮ್ಮುಖದಲ್ಲಿ ಮದುವೆ ಆಗಿದೆ. ಎಷ್ಟು ಬೇಕಾದ್ರೂ ಆಸ್ತಿನ ನಿನ್ನ ಹೆಸರಿಗೆ ಬರೆದುಕೋ ಅಂತ ಗೌತಮ್‌ ಜೈದೇವ್‌ಗೆ ಹೇಳಿದ್ದಾನೆ. ಬಹುಶಃ ಜೈದೇವ್ ಇಡೀ ಆಸ್ತಿನೆಲ್ಲ ನುಂಗಾಕೋ ಪ್ಲಾನ್‌ನಲ್ಲಿದ್ದಾನೆ ಅನಿಸುತ್ತೆ. ಬಿಲಿಯನೇರ್ ಗೌತಮ್‌ ದಿವಾನ್ ಫ್ಯಾಮಿಲಿ ಶೀಘ್ರವೇ ಬೀದಿಗೆ ಬರೋದನ್ನ ವೀಕ್ಷಕರು ಕಣ್ತುಂಬಿಸಿಕೊಳ್ಳಬಹುದು.

ಇನ್ನೊಂದು ಕಡೆ ಮಂದಾಕಿನಿಯ ಮಾತು ಕಚಗುಳಿ ಇಡೋ ಥರ ಮೂಡಿಬಂದಿದೆ. ಮಂದಾಕಿನಿ ಯಾರು ಅಂತ ಗೊತ್ತಲ್ಲ, ಅದೇ ಗೌತಮ್‌ ಗೆಳೆಯ ಆನಂದ್‌ ಹೇಳೋ ಮಂದಾಕಿನಿ ಆಂಟಿ.. ಅಲ್ಲಲ್ಲ ಮಂದಾಕಿನಿ ಅಕ್ಕ. ಭೂಮಿಕಾ ಅಮ್ಮನಾಗಿರೋ ಈ ಮಂದಾಕಿನಿ ಸದ್ಯ ಹೆಣ್ಮಕ್ಕಳ ವಿಚಾರದಲ್ಲಿ ಗಂಡನ ಜೊತೆಗೆ ಕೋಳಿ ಜಗಳ ಆಡ್ತಿದ್ದಾಳೆ. ಇದು ವೀಕ್ಷಕರಿಗೆ ಸಖತ್ ಇಷ್ಟ ಆಗಿದೆ. ಅವಳು ಶುರುವಲ್ಲಿ ಭೂಮಿಕಾ ತಂದೆ ಸದಾಶಿವ್‌ಗೆ ಭೂಮಿಕಾಗೆ ಕಾಲ್ ಮಾಡೋಕೆ ಹೇಳ್ತಾರೆ, ಅವರು ಕಾಲ್ ಮಾಡಿದ್ರೆ ಕಾಲ್ ರೀಚ್‌ ಆಗ್ತಿಲ್ಲ. ಸುಮ್ಮನಿರಲಾಗದೆ ಭೂಮಿಕಾ ಗಂಡ ಗೌತಮ್‌ಗೆ ಕಾಲ್ ಮಾಡೋದಕ್ಕೆ ಹೇಳ್ತಾರೆ. ಸದಾಶಿವ್‌, ‘ಯಾಕೆ ಈ ಹೆಣ್ಮಕ್ಕಳು ಸದಾ ವಟ ವಟ ಮಾತಾಡ್ತಾನೇ ಇರ್ತಾರೆ’ ಅಂತ ಕೇಳಿದ್ದಕ್ಕೆ ಹೆಣ್ಮಕ್ಕಳ ಮಾತಿನ ಮಹತ್ವವನ್ನು ಮತ್ತೊಂದು ಲೆವೆಲ್‌ಗೆ ತಗೊಂಡು ಹೋಗಿದ್ದಾರೆ. ‘ಹೆಣ್ಮಕ್ಕಳ ಮಾತು ಅಂದರೆ ಸುಮ್ಮನೇನಾ? ಅವ್ರಿಗೆ ಹಾರ್ಟ್‌ ಪ್ರಾಬ್ಲೆಂ ಯಾಕೆ ಕಡಿಮೆ ಹೇಳಿ, ಮನಬಿಚ್ಚಿ ಮಾತಾಡೋ ಕಾರಣ’ ಅಂದಿದ್ದಾರೆ.

ಸುವರ್ಣ ಪಾಡ್‌ಕಾಸ್ಟ್‌ನಲ್ಲಿ ‘ಡಿವೋರ್ಸ್’ ಸತ್ಯ ಹೇಳಿದ ಚಂದನ್ ಶೆಟ್ಟಿ; ಮದುವೆ ಮುರಿದಬಿದ್ದಿದ್ದಲ್ಲ… ಮತ್ತೆ…!?

‘ಹೆಣ್ಮಕ್ಕಳು ಮಾತಾಡೋದ್ರಿಂದ ಏನ್ ಮನೆ ಬಿದ್ದೋಗುತ್ತಾ? ಹೆಣ್ಮಕ್ಕಳು ಗಲಗಲ ಅಂತ ಮಾತಾಡ್ತಿದ್ರೆ ಮನೆ ಕಳೆ ಕಳೆಯಾಗಿರುತ್ತೆ, ಅದಕ್ಕೆ ಹಾರ್ಟ್ ಪ್ರಾಬ್ಲೆಂ ಬರಲ್ಲ’ ಅಂತಿರೋದು ನೋಡಿ, ಸದಾಶಿವ್, ‘ನಿಮಗೆ ಹಾರ್ಟ್‌ ಪ್ರಾಬ್ಲೆಂ ಬರಲ್ಲ, ನಮಗೆ ಬರಿಸ್ತೀರಿ’ ಅನ್ನುತ್ತಾರೆ. ಈ ಸಿನ್‌ಗೆ ಉತ್ತಮ ಪ್ರತಿಕ್ರಿಯೆ ಬಂದಿದೆ.

ಇನ್ನೊಂದು ಎರರ್‌ ಅನ್ನು ವೀಕ್ಷಕರು ಪತ್ತೆ ಮಾಡಿದ್ದಾರೆ. ಈ ಸದಾಶಿವ್ ಪಾತ್ರಧಾರಿ ಸಿಹಿಕಹಿ ಚಂದ್ರು ಮಾತಾಡುವಾಗ ಫೋನ್ ಉಲ್ಟಾ ಹಿಡ್ಕೊಂಡಿದ್ದಾರೆ.

 ಅದು ಸೀರಿಯಲ್‌ ನೋಡೋರಿಗೆ ಗೊತ್ತಾಗಿದೆ, ಮಾಡೋರಿಗೆ ಗೊತ್ತಾಗಿಲ್ಲ. ‘ಫೋನ್ ಉಲ್ಟಾ ಹಿಡ್ಕೊಂಡ್ರೆ ಕಾಲ್ ಹೆಂಗ್ ಹೋಗುತ್ತೆ’, ‘ಇದು ಹೊಸ ವರ್ಶನ್ ಫೋನಾ? ಇದರಲ್ಲಿ ಉಲ್ಟಾ ಫೋನ್ ಹಿಡಿದು ಮಾತಾಡಬಹುದಾ?’ ಅಂತೆಲ್ಲ ಕಿಚಾಯಿಸ್ತಿದ್ದಾರೆ. ಅಂದಹಾಗೆ ಗಲಗಲ ಮಾತಿನ ಮಂದಾಕಿನಿ ಮೊಮ್ಮಗು ಬರೋ ವಯಸ್ಸಾದ್ರೂ ಮಗು ಥರಾನೇ ಆಡ್ತಾಳೆ ಅಂತ ಸದಾಶಿವ್ ರೇಗಿಸಿದ್ರೆ, ‘ನೀವಿನ್ನೂ ಸ್ಟ್ರಿಕ್ಟ್‌ ಮೇಷ್ಟ್ರು ಥರನೇ ಸ್ಕೇಲ್‌ ಹಿಡ್ಕೊಂಡು ಇರ್ತೀರ’ ಅಂತ ಮಂದಾಕಿನಿ ಡೈಲಾಗ್‌ ಹೊಡೆದು ಬಾಯಿ ಮುಚ್ಚಿಸಿದ್ದಾರೆ. ಒಟ್ಟಿನಲ್ಲಿ ಈ ಮಜವಾದ ಮಾತನ್ನ ವೀಕ್ಷಕರೂ ಎನ್‌ಜಾಯ್ ಮಾಡಿದ್ದಾರೆ.

 

 

 



Source link

Leave a Reply

Your email address will not be published. Required fields are marked *