Headlines

Dharmasthala case Girish Mattannavar ನೂರಾರು ಹೆಣಗಳನ್ನ ಹೂತಿಟ್ಟಿರೋದು ನಿಜ ಅನಾಮಿಕ ಭಯದಿಂದ ತಪ್ಪು ಸ್ಥಳ ತೋರಿಸಿದ್ದಾನೆ: ಗಿರೀಶ್ ಮಟ್ಟಣ್ಣನವರ್ ಲೈವ್ | Dharmasthala Case Girish Mattannavar Demand Fair Thorough Sit Investigation Gow

ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಚಿನ್ನಯ್ಯ ಧರ್ಮಸ್ಥಳದಿಂದ ಬುರುಡೆ ಪಡೆದು ಬಂದಿರುವುದು ಬೆಳಕಿಗೆ ಬಂದಿದೆ. ಮಹೇಶ್ ಶೆಟ್ಟಿ ತಿಮರೋಡಿ ಅವರ ನಿವಾಸದಲ್ಲಿ ಚಿನ್ನಯ್ಯ ವಾಸವಿದ್ದ ಹಾಗೂ ಪೊಲೀಸರ ಬಳಿ ಕರೆದುಕೊಂಡು ಹೋಗುವಂತೆ ಕೇಳಿಕೊಳ್ಳುತ್ತಿದ್ದ ಎಂದು ಗಿರೀಶ್ ಮಟ್ಟಣ್ಣನವರ್ ಬಹಿರಂಗಪಡಿಸಿದ್ದಾರೆ.  

ಮಂಗಳೂರು: ಧರ್ಮಸ್ಥಳ ಶವ ಹೂತ ಪ್ರಕರಣ ಸಂಬಂಧ ದಿನಕ್ಕೊಂದು ಬೆಳವಣಿಗೆ ಆಗುತ್ತಿದೆ. ಇತ್ತೀಚಿನ ಬೆಳವಣಿಗೆಯಲ್ಲಿ ಚಿನ್ನಯ್ಯನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವನು ಧರ್ಮಸ್ಥಳದಿಂದ ಬುರುಡೆ ಪಡೆದು ಬಂದಿರುವ ವಿಷಯ ಈಗ ಬೆಳಕಿಗೆ ಬಂದಿದೆ. ಈ ಸಂಬಂಧವಾಗಿ ಎಸ್‌ಐಟಿ ಅಧಿಕಾರಿಗಳು ಸಂಪೂರ್ಣ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಸೌಜನ್ಯ ಪರ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ಅವರು ಒತ್ತಾಯಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಗಿರೀಶ್ ಮಟ್ಟಣ್ಣನವರ್ ಅವರು, ಮಾಸ್ಕ್ ಮ್ಯಾನ್ ಚಿನ್ನಯ್ಯ ಮಹೇಶ್ ಶೆಟ್ಟಿ ತಿಮರೋಡಿ ಅವರ ನಿವಾಸದಲ್ಲಿ ವಾಸವಿದ್ದ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಚಿನ್ನಯ್ಯ ತನಗೆ ಮಹೇಶ್ ಶೆಟ್ಟಿ ತಿಮರೋಡಿ ಮನೆಯೇ ಬೇಕು ಎಂದು ಸ್ಪಷ್ಟವಾಗಿ ಹೇಳಿದ್ದ. ಅದರ ಜೊತೆಗೆ, ಕಳೆದ ಎರಡು ವರ್ಷಗಳಿಂದ “ಪೊಲೀಸರ ಹತ್ತಿರ ನನ್ನನ್ನು ಕರೆದೊಯ್ದು ಹೋಗಿ” ಎಂದು ಚಿನ್ನಯ್ಯ ಹೇಳುತ್ತಾ ಇದ್ದ ಗಿರೀಶ್ ಮಟ್ಟಣ್ಣನವರ್ ವಿವರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರು ಅವನಿಗೆ ಆಶ್ರಯ ಒದಗಿಸಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಗಿರೀಶ್ ಮಟ್ಟಣನವರ್ ಲೈವ್ ಬಂದು ಎಸ್‌ಐಟಿಯಿಂದ ಎಲ್ಲಾ ತನಿಖೆ ಮಾಡಿಲಿ. ಎಸ್‌ಐಟಿ ಕರೆದ್ರೆ ಸಂಭ್ರಮದಿಂದ ನಾವು ಹೋಗ್ತೇವೆ. ತನಿಖೆಗೆ ಕರೆದ್ರೆ ನಮಗೆ ಸಂಭ್ರಮ ಇದೆ. ಪ್ರತಿಯೊಂದು ನಾವು ಹೇಳ್ತೇವೆ, ಎಸ್‌ಐಟಿ ಅವರಾಗೆ ಬಂದ್ರೆ ಸುವರ್ಣಾವಾಶ. ಅನಾಮಿಕ ಭಯದಿಂದ ತಪ್ಪು ಸ್ಥಳಗಳನ್ನ ತೋರಿಸಿದ್ದಾನೆ. ಹೆದರಿ ಸ್ಥಳಗಳನ್ನ ಗುರುತಿಸುವಲ್ಲಿ ಎಡವಿದ್ದಾನೆ. ಇಲ್ಲದಿದ್ದರೆ ನೂರಾರು ಹೆಣಗಳನ್ನ ಹೂತಿಟ್ಟಿರುವುದು ನಿಜ.

ಅಷ್ಟೇ ಅಲ್ಲದೆ, ಚಿನ್ನಯ್ಯನ ಸಂಬಂಧಿಕರು ಮಹೇಶ್ ಶೆಟ್ಟಿ ತಿಮರೋಡಿ ನಿವಾಸಕ್ಕೆ ಬಂದು ಹೋಗಿರುವುದು ಸಹ ಗಮನಾರ್ಹ ಸಂಗತಿ. ಚಿನ್ನಯ್ಯ ಯಾರನ್ನು ಭೇಟಿಯಾಗಬೇಕೆಂದು ಹೇಳುತ್ತಿದ್ದನೋ, ಅವರೊಂದಿಗೆ ಅವನಿಗೆ ಭೇಟಿ ಮಾಡಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿತ್ತು ಎಂಬುದನ್ನೂ ಮಟ್ಟಣ್ಣನವರ್ ಹೇಳಿದ್ದಾರೆ.

ಈ ಬೆಳವಣಿಗೆಗಳು ಪ್ರಕರಣವನ್ನು ಇನ್ನಷ್ಟು ಗಂಭೀರಗೊಳಿಸಿದ್ದು, ಈಗ ಜನರ ಮನಸ್ಸಿನಲ್ಲಿ ಹಲವು ಪ್ರಶ್ನೆಗಳು ಮೂಡಿವೆ. ಚಿನ್ನಯ್ಯಗೆ ನೀಡಲಾದ ಆಶ್ರಯದ ಹಿಂದೆ ನಿಜವಾದ ಕಾರಣವೇನು? ಅವನು ಯಾರನ್ನು ಭೇಟಿಯಾಗುತ್ತಿದ್ದ? ಎಂಬ ಕುತೂಹಲಕ್ಕೆ ಶೀಘ್ರದಲ್ಲೇ ಉತ್ತರ ಸಿಗಬೇಕಾಗಿದೆ. ಪ್ರಕರಣದ ಬಗ್ಗೆ ಸಂಪೂರ್ಣ ಸತ್ಯ ಬೆಳಕಿಗೆ ಬರಲು ಎಸ್‌ಐಟಿ ಸಮಗ್ರ ತನಿಖೆ ನಡೆಸಿ, ಎಲ್ಲ ಅಂಶಗಳನ್ನು ಪರಿಶೀಲಿಸಬೇಕಿದೆ ಎಂಬುದಾಗಿ ಸಾರ್ವಜನಿಕರು ಆಗ್ರಹ ವ್ಯಕ್ತಪಡಿಸುತ್ತಿದ್ದಾರೆ.

Source link

Leave a Reply

Your email address will not be published. Required fields are marked *