ರೇರ್ನಲ್ಲಿ ರೇರ್ ಅನ್ನುವಂತ ಫೋಟೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ. ಅದು ಇಂದಿಗೆ ಮೂವತ್ತು ವರ್ಷಗಳಿಗೂ ಮೀರಿದ ಹಳೆಯ ಫೋಟೋ. ಈ ಫೋಟೋವನ್ನು ನೋಡಿದರೆ ಅಂದಿನ ಕಾಲದ..
ಮಹತ್ವದ, ರೇರ್ನಲ್ಲಿ ರೇರ್ ಅನ್ನುವಂತ ಫೋಟೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ. ಅದು ಇಂದಿಗೆ ಮೂವತ್ತು ವರ್ಷಗಳ ಹಳೆಯ ಫೋಟೋ. ಈ ಫೋಟೋವನ್ನು ನೋಡಿದರೆ ಅಂದಿನ ಕಾಲದ ಸ್ಥಿತಿ-ಗತಿ ಕಣ್ಣಿಗೆ ಕಟ್ಟಿದಂತೆ ಮೂಡಿ ಬರುತ್ತಿದೆ. ಚಾಪೆಯೋ, ಜಮಖಾನವೋ ಅದರ ಮೇಲೆ ಕುಳಿತು ಒಟ್ಟಿಗೇ ಎಲ್ಲರೂ ಚರ್ಚೆ, ಕೆಲಸ ಮಾಡುತ್ತಿದ್ದರು ಎಂಬುದು ತಿಳಿಯುತ್ತಿದೆ. ಈಗಿನಂತೆ ಅಂದು ಚೇರ್, ಪ್ಲಾಸ್ಟಿಕ್ ವಾಟರ್ ಬಾಟೆಲ್ ಸಂಪ್ರದಾಯ ಇರಲಿಲ್ಲ. ಸಿಂಪಲ್ ಡ್ರೆಸ್, ಸಿಂಪಲ್ ಮನಸ್ಸು ಫೋಟೋದಲ್ಲಿ ಕೂಡ ಎದ್ದು ಕಾಣಿಸುತ್ತಿದೆ.
ಹಾಗಿದ್ರೆ ಈ ಫೋಟೋ ಯಾವುದು? ಯಾವ ಫಂಕ್ಷನ್? ಯಾರೆಲ್ಲಾ ಇದ್ದಾರೆ ಎಂಬುದನ್ನು ತಿಳಿಯಲು ಮುಂದೆ ನೋಡಿ.. ಹೌದು, ಇದು ತಿರುಪತಿ ಅಭಿವೃದ್ದಿ ಯೋಜನೆಗೆ ಕಾರ್ಯತಂತ್ರ ರೂಪಿಸಲು ಒಗ್ಗೂಡಿದ ಸಭೆ ಎನ್ನಲಾಗಿದೆ. 1994ರಲ್ಲಿ ಟಿಟಿಡಿ ಬೋರ್ಡ್ನಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಫೋಟೋ ಈಗ ವೈರಲ್ ಆಗುತ್ತಿದೆ. . ಶ್ರೀ ನಂದಮೂರಿ ತಾರಕ್, ಭಾನುಮತಿ, ರಜನಿಕಾಂತ್, ತಿರುಪತಿ ಎಂಎಲ್ಎ ಮೋಹನ್, ಕುಪ್ಪ ಎಂಎಲ್ಎ-ಈಗಿನ ಆಂಧ್ರ ಪ್ರದೇಶ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಅವರುಗಳು ಇದರಲ್ಲಿ ಭಾಗಿಯಾಗಿದ್ದು ಕಂಡುಬರುತ್ತದೆ.
ಆದರೆ, ಈ ವಿಡಿಯೋದ ಕಾಮೆಂಟ್ಸ್ ಸೆಕ್ಷನ್ ನೋಡಿದರೆ ಇನ್ನೂ ಕೆಲವು ಮಾಹಿತಿ ಅಲ್ಲಿ ಕಾಣಸಿಗುತ್ತದೆ. ‘ಈ ಸಭೆ ನಡೆದಿದ್ದು, 10 ಆಗಸ್ಟ್ 1995, ಇದು 1994 ರಲ್ಲಿ ನಡೆದ ಸಭೆ ಅಲ್ಲ’ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ‘ತಿರುಪತಿ ಅಭಿವೃದ್ಧಿ ಹಿಂದೆ
ನಟಿಆರ್ ಕೊಡುಗೆ ಬಹಳಷ್ಟಿದೆ’ ಎಂದಿದ್ದಾರೆ. ಮಗದೊಬ್ಬರು, ಈ ಫೋಟೋದಲ್ಲಿ ಲಕ್ಷ್ಮೀ ಪಾರ್ವತಿ ಕೂಡ ಇದ್ದಾರೆ’ ಎಂದು ಬರೆದಿದ್ದಾರೆ. ಹೌದು, ಅಲ್ಲಿ ಬಹಳಷ್ಟು ವಿಐಪಿಗಳು, ಲೆಜೆಂಡ್ ಕಲಾವಿದರು ಇದ್ದಾರೆ. ಎಲ್ಲಾ ಲೆಜೆಂಡ್ಗಳ ಜೊತೆ ನಮ್ಮ ಕನ್ನಡದ ವರನಟ ಡಾ ರಾಜ್ಕುಮಾರ್ ಇದ್ದಾರೆ.
ಸೂಪರ್ ಸ್ಟಾರ್ ರಜನಿಕಾಂತ್, ನಂದಮೂರಿ ತಾರಕ್ ಎಲ್ಲರೂ ಲೆಜೆಂಡ್ಗಳೇ.. ಅವರೆಲ್ಲ ಒಟ್ಟಿಗೇ ಕುಳಿತು ತಿರುಪತಿ ಅಭಿವೃದ್ಧಿಗೆ ಸಭೆ ನಡೆಸಿ ಅವರಿಂದಾದ ಕೊಡುಗೆ ಕೊಟ್ಟಿದ್ದೂ ನಿಜಕ್ಕೂ ಮೆಚ್ಚಬೇಕಾದ ಸಂಗತಿ. ಇಂದು ಡಾ ರಾಜ್ಕುಮಾರ್ ಅವರು ನಮ್ಮೊಂದಿಗಿಲ್ಲ. ಆದರೆ, ಅವರು ಬದುಕಿದ್ದಾಗ ಮಾಡಿದ್ದ ಅನೇಕ ಸಮಾಜಮುಖಿ ಕೆಲಸ-ಕಾರ್ಯಗಳು ಇದೀಗ ಸೋಷಿಯಲ್ ಮೀಡಿಯಾ ಮೂಲಕ ಬೆಳಕಿಗೆ ಬಂದು, ಜಗತ್ತಿಗೆ ಗೊತ್ತಾಗುತ್ತಿದೆ. ಒಂದೇ ಮಾತಿನಲ್ಲಿ ಹೇಳಬೇಕು ಎಂದರೆ, ದಕ್ಷಿಣ ಭಾರತದ ಲೆಜೆಂಡ್ ಕಲಾವಿದರು 1994 ಅಥವಾ 1995 ರಲ್ಲಿ ತಿರುಪತಿ ಅಭಿವೃದ್ಧಿಗೆ ಶ್ರಮಿಸಿದ್ದರು. ಅದೀಗ ಈ ಫೋಟೋ ಮೂಲಕ ಗೊತ್ತಿಲ್ಲದ ಜನತೆಯ ಗಮನಕ್ಕೆ ಬಂದಿದೆ.