Jagdeep Dhankhar ರಾಜೀನಾಮೆಗೆ ಮೋದಿ ಸರ್ಕಾರ ಒತ್ತಡ ಹಾಕಿದ್ದೇಕೆ? ಇಲ್ಲಿದೆ ಇನ್‌ಸೈಡ್‌ ಸ್ಟೋರಿ | Jagdeep Dhankhar Resignation Modi Govt Pressure Inside Story San

Jagdeep Dhankhar ರಾಜೀನಾಮೆಗೆ ಮೋದಿ ಸರ್ಕಾರ ಒತ್ತಡ ಹಾಕಿದ್ದೇಕೆ? ಇಲ್ಲಿದೆ ಇನ್‌ಸೈಡ್‌ ಸ್ಟೋರಿ | Jagdeep Dhankhar Resignation Modi Govt Pressure Inside Story San



ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್‌ ಅವರ ದಿಢೀರ್ ರಾಜೀನಾಮೆ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಕೇಂದ್ರ ಸರ್ಕಾರದ ಬಗ್ಗೆ ಅಸಮಾಧಾನ, ಜಾಟ್ ಸಮುದಾಯದ ಬಗ್ಗೆ ಅನ್ಯಾಯದ ಆರೋಪ, ನ್ಯಾಯಮೂರ್ತಿ ವರ್ಮಾ ವಿರುದ್ಧದ ಅರ್ಜಿ ಸ್ವೀಕಾರ ಸೇರಿದಂತೆ ಹಲವು ಕಾರಣಗಳಿವೆ ಎನ್ನಲಾಗಿದೆ.

ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್‌ (Jagdeep Dhankhar) ಅವರ ದಿಢೀರ್‌ ರಾಜೀನಾಮೆ (resignation), ರಾಜಕೀಯ ವಲಯದಲ್ಲಿ ಭಾರೀ ಊಹಾಪೋಹಗಳಿಗೆ ಕಾರಣವಾಗಿದೆ. ಅವರು ಇಂಥದ್ದೊಂದು ಕಠಿಣ ನಿರ್ಧಾರವನ್ನ ಏಕಾಏಕಿ ತೆಗೆದುಕೊಂಡಿದ್ದು ಹೇಗೆ? ಇದರ ಹಿಂದೆ ಯಾವ ಒತ್ತಡವಿತ್ತು ಅನ್ನೋದರ ಬಗ್ಗೆ ದೆಹಲಿಯ ರಾಜಕೀಯ ಪಡಸಾಲೆಯಲ್ಲಿ ಚರ್ಚೆ ಆಗುತ್ತಿದೆ. ಹಾಗಿದ್ದಲ್ಲಿ, ಮೋದಿ (Narendra Modi) ಸರ್ಕಾರ ಏಕೆ ಉಪ ರಾಷ್ಟ್ರಪತಿ ಜಗದೀಪ್ ಧನ್ ಕರ್ ರಿಗೆ ರಾಜೀನಾಮೆ ಕೊಡುವಂತೆ ಒತ್ತಡ ಹಾಕಿತು? ಇಲ್ಲಿದೆ inside story

ಕೆಲ ದಿನಗಳಿಂದ ಯಾರೇ ಭೇಟಿ ಯಾಗಲು ಹೋದರು ಕೇಂದ್ರ ಸರ್ಕಾರದ ಬಗ್ಗೆ ಧನ್‌ಕರ್‌ ಅಸಮಾಧಾನ ವ್ಯಕ್ತ ಪಡಿಸುತ್ತಿದ್ದರಂತೆ. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್‌ರನ್ನ ಕರೆಸಿ ಕೊಂಡು ಸರ್ಕಾರ ತನ್ನ ಜಾಟ್ ಸಮುದಾಯದ ಬಗ್ಗೆ ಅನ್ಯಾಯ ಮಾಡಿದೆ ಎಂದೆಲ್ಲ ಧನ್‌ಕರ್‌ ಮಾತನಾಡಿದ್ದರು ಎಂದು ಹೇಳಲಾಗ್ತಿದೆ.

ಅಷ್ಟೇ ಅಲ್ಲ ಪ್ರಧಾನಿ ಮೋದಿ ಅವರ ಭದ್ರತೆಗೆ ಬಳಸುವ ವಾಹನಗಳನ್ನೇ ತನಗೆ ನೀಡಬೇಕು ಎಂದು ಬೇಡಿಕೆ ಗ್ರಹ ಇಲಾಖೆಯ ನಕಾರ ವ್ಯಕ್ತಪಡಿಸಿತ್ತು. ಆದರೆ ಯಾವಾಗ ಲೋಕಸಭೆಯಲ್ಲಿ ನ್ಯಾಯಮೂರ್ತಿ ವರ್ಮಾ ವಿರುದ್ಧದ ಅರ್ಜಿ ಸಲ್ಲಿಕೆ ಆಯಿತೋ ಆಗ ಸರ್ಕಾರವನ್ನು ವಿಶ್ವಾಸಕ್ಕೆ ಕೂಡ ತೆಗೆದು ಕೊಳ್ಳದೆ ವಿಪಕ್ಷ ಗಳ ಅರ್ಜಿ ಸ್ವೀಕಾರ ಮಾಡಿದ್ದು ಸರ್ಕಾರವನ್ನು ಕೆರಳಿಸಿದೆ.

ಜಸ್ಟಿಸ್ ವರ್ಮಾ ವಿರುದ್ಧ ಮಾಡಿದಂತೆ ವಿಎಚ್‌ಪಿ ಸಭೆಯಲ್ಲಿ ಭಾಗವಹಿಸಿದ್ದ ಜಸ್ಟಿಸ್ ಯಾದವ್ ವಿರುದ್ಧ ಮಾಡಿದರೆ ಅನ್ನುವ ಆತಂಕ ಮೋದಿ ಸರ್ಕಾರಕ್ಕೆ ಇತ್ತು. ಹೀಗಾಗಿ ಕೇಂದ್ರ ಸಚಿವ ಪಿಯುಶ್ ಗೊಯಲ್ ನಿವಾಸದಲ್ಲಿ ನಡೆದ ಸಭೆಯಲ್ಲಿ ಉಪರಾಷ್ಟ್ರಪತಿ ಗಳ ವಿರುದ್ಧ ಸಹಿ ಸಂಗ್ರಹ ಮಾಡುವ ಸಂಬಂಧ ಸಂಸದರ ಸಭೆ ನಡೆಯಿತು. ಹೀಗಾಗಿ ಸೋಮವಾರ ಜಗದೀಪ್ ಧನ್ ಕರ್ ರಾಜೀನಾಮೆ ಅನಿವಾರ್ಯ ಆಗಿತ್ತು ಎನ್ನುವ ವರದಿಗಳಿವೆ.

 



Source link

Leave a Reply

Your email address will not be published. Required fields are marked *