
‘ರಾಜ್ಯದ ಸಿಎಂ ಧರ್ಮಸ್ಥಳ ಕುರಿತ ಆರೋಪಗಳ ತನಿಖೆಗೆ SIT ರಚನೆ ಮಾಡಿದ್ದಾರೆ. ಈ ತಂಡದಲ್ಲಿರುವ ಎಲ್ಲರೂ ದಕ್ಷ ಅಧಿಕಾರಿಗಳಾಗಿದ್ದಾರೆ. ಅವರೆಲ್ಲರಿಗೂ ತನಿಖೆ ಮಾಡಲು ಫ್ರೀಹ್ಯಾಂಡ್ ನೀಡಲಾಗುತ್ತೆ ಎಂಬ ನಂಬಿಕೆ ನನಗಿದೆ.’ ಎಂದು ರಮ್ಯಾ ಅವರು ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ..
ಬಹುತೇಕ ಎಲ್ಲರಿಗೂ ಗೊತ್ತಿರುವಂತೆ, ಸದ್ಯ ಸಾಕಷ್ಟು ಸದ್ದು ಮಾಡುತ್ತಿರುವ ಧರ್ಮಸ್ಥಳ ಪ್ರಕರಣದ ತನಿಖೆಗೆ SIT ನೇಮಕ ಮಾಡಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆದೇಶ ಹೊರಡಿಸಿದೆ. ಇದನ್ನು ಸ್ವಾಗತಿಸಿ ಕನ್ನಡದ ನಟಿ ರಮ್ಯಾ (Ramya) ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ಖುಷಿಯಾಗಿರುವ ನಟಿ ರಮ್ಯಾ ಅವರು ಪೋಸ್ಟ್ ಹಂಚಿಕೊಂಡಿದ್ದು ಅದಕ್ಕೆ ಸಾಕಷ್ಟು ಕಾಮೆಂಟ್‌ಗಳು ಹರಿದು ಬರುತ್ತಿವೆ.
ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಬರೆದುಕೊಂಡಿರುವ ನಟಿ ರಮ್ಯಾ ಅವರು ‘ರಾಜ್ಯದ ಸಿಎಂ ಧರ್ಮಸ್ಥಳ ಕುರಿತ ಆರೋಪಗಳ ತನಿಖೆಗೆ SIT ರಚನೆ ಮಾಡಿದ್ದಾರೆ. ಈ ತಂಡದಲ್ಲಿರುವ ಎಲ್ಲರೂ ದಕ್ಷ ಅಧಿಕಾರಿಗಳಾಗಿದ್ದಾರೆ. ಅವರೆಲ್ಲರಿಗೂ ತನಿಖೆ ಮಾಡಲು ಫ್ರೀಹ್ಯಾಂಡ್ ನೀಡಲಾಗುತ್ತೆ ಎಂಬ ನಂಬಿಕೆ ನನಗಿದೆ.’ ಎಂದು ರಮ್ಯಾ ಅವರು ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿ ತಮ್ಮ ಖುಷಿ ಹಂಚಿಕೊಂಡಿದ್ದಾರೆ. ಇದೀಗ ಈ ಸುದ್ದಿ ಸಾಕಷ್ಟು ವೈರಲ್ ಆಗತೊಡಗಿದೆ.
ಸದ್ಯ ಎಲ್ಲಾ ಕಡೆ ಧರ್ಮಸ್ಥಳ ಕೇಸ್ ಬಗ್ಗೆಯೇ ಸುದ್ದಿ ಹಾಗೂ ಚರ್ಚೆಗಳು ನಡೆಯತೊಡಗಿವೆ. ಕಾರಣ, ಕೋಟ್ಯಂತರ ಭಕ್ತರ ಧಾರ್ಮಿಕ ಕ್ಷೇತ್ರವಾಗಿರುವ ಧರ್ಮಸ್ಥಳದ ಬಗ್ಗೆ ಕೇಸ್ ದಾಖಲಾಗಿರುವುದು ಸಹಜವಾಗಿಯೇ ಭಕ್ತವೃಂದದಲ್ಲಿ ಅಚ್ಚರಿ ಹಾಗೂ ಶಾಖ್ ಮೂಡಿಸಿದೆ. ಇತ್ತೀಚಿನ ವರ್ಷಗಳಲ್ಲಿ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅ*ತ್ಯಾಚಾರ, ಕೊ*ಲೆಗಳು ಸಾಕಷ್ಟು ಸದ್ದು-ಸುದ್ದಿ ಮಾಡಿದ್ದವು. ಕೆಲವು ದಿನಗಳ ಹಿಂದೆ ವ್ಯಕ್ತಿಯೊಬ್ಬರು ದೂರು ದಾಖಲಿಸಿದ ಬಳಿಕ ಇದೀಗ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎಸ್‌ಐಟಿ (SIT) ತನಿಖೆಗೆ ಆದೇಶ ಹೊರಡಿಸಿದೆ.