ವಿಮಾನ ಆಟೋ ಪೈಲಟ್‌ ಮೋಡ್‌ಗೆ ಹಾಕಿ 35,000 ಅಡಿ ಎತ್ತರದಲ್ಲಿ ರೋಮ್ಯಾನ್ಸ್ : ಕಾಕ್‌ಫಿಟ್‌ ರಹಸ್ಯ ಹೇಳಿದ ಗಗನಸಖಿ | The High Mile Club Flight Attendant Reveals Secret World Of In Flight Romance

ವಿಮಾನ ಆಟೋ ಪೈಲಟ್‌ ಮೋಡ್‌ಗೆ ಹಾಕಿ 35,000 ಅಡಿ ಎತ್ತರದಲ್ಲಿ ರೋಮ್ಯಾನ್ಸ್ : ಕಾಕ್‌ಫಿಟ್‌ ರಹಸ್ಯ ಹೇಳಿದ ಗಗನಸಖಿ | The High Mile Club Flight Attendant Reveals Secret World Of In Flight Romance



ವಿಮಾನ ಆಟೋ ಪೈಲಟ್‌ ಮೋಡ್‌ಗೆ ಹಾಕಿ 35,000 ಅಡಿ ಎತ್ತರದಲ್ಲಿ ರೋಮ್ಯಾನ್ಸ್ : ಕಾಕ್‌ಫಿಟ್‌ ರಹಸ್ಯ ಹೇಳಿದ ಗಗನಸಖಿ | The High Mile Club Flight Attendant Reveals Secret World Of In Flight Romance

ವಿಮಾನದಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ವಿಮಾನದಲ್ಲಿ ಏನೇನಾಗುತ್ತೆ ಎಂಬ ವಿಚಾರದ ಬಗ್ಗೆ ಮಾತನಾಡಿದ್ದು, ಅಕೆಯ ವೀಡಿಯೋ ಈಗ ವೈರಲ್ ಆಗಿದೆ. 

ವಿಮಾನದ ಬಗ್ಗೆ ಜನಸಾಮಾನ್ಯರಲ್ಲಿ ಬಹಳ ಕುತೂಹಲ ಇದೆ. ಒಮ್ಮೆಯಾದರೂ ವಿಮಾನದಲ್ಲಿ ಹೋಗಬೇಕು ಎಂಬ ಕುತೂಹಲ ಕೆಲವರದಾದರೆ ವಿಮಾನದಲ್ಲಿ ಗಗನಸಖಿಯರು ಏನ್ ಮಾಡ್ತಿರ್ತಾರೆ, ಕಾಕ್‌ಫಿಟ್‌ನಲ್ಲಿ ಪೈಲಟ್‌ಗಳು ಹೇಗಿರ್ತಾರೆ ಎಂಬ ಕುತೂಹಲ ಮತ್ತೆ ಕೆಲವರದ್ದು, ಈಗ ವಿಮಾನದಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ವಿಮಾನದಲ್ಲಿ ಏನೇನಾಗುತ್ತೆ ಎಂಬ ವಿಚಾರದ ಬಗ್ಗೆ ಮಾತನಾಡಿದ್ದು, ಅಕೆಯ ವೀಡಿಯೋ ಈಗ ವೈರಲ್ ಆಗಿದೆ. ವಿದೇಶಿ ವಿಮಾನಯಾನ ಸಂಸ್ಥೆಯಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದ ಯುವತಿ ಸಿಯೆರಾ ಮಿಸ್ಟ್ ಎಂಬಾಕೆ ಕೆಲವು ಆಘಾತಕಾರಿ ವಿಚಾರವನ್ನು ಹೇಳಿದ್ದಾಳೆ. ವಿಮಾನದ ಕಾಕ್‌ಫಿಟ್‌ನ ಮುಚ್ಚಿದ ಬಾಗಿಲುಗಳ ಒಳಗೆ ಏನೆಲ್ಲಾ ನಡೆಯುತ್ತದೆ ಎಂದು ಆಕೆ ಹೇಳಿದ್ದು ಆಕೆಯ ಮಾತು ಕೇಳಿದ ನೆಟ್ಟಿಗರು ಅಚ್ಚರಿ ಪಡುತ್ತಿದ್ದಾರೆ. ಹಾಗಿದ್ರೆ ಆಕೆ ಏನು ಹೇಳಿದ್ದಾಳೆ ನೋಡೋಣ ಬನ್ನಿ.

ಕಾಕ್‌ಫಿಟ್‌ನಲ್ಲಿ ಪೈಲಟ್ಗ-ಗನಸಖಿ ರೋಮ್ಯಾನ್ಸ್‌:

ವಿಮಾನ ನಿಗದಿತ ಎತ್ತರ ತಲುಪುತ್ತಿದ್ದಂತೆ ಪೈಲಟ್‌ಗಳು ಅದನ್ನು ಆಟೋ ಮೋಡ್‌ಗೆ ಹಾಕುತ್ತಾರೆ ಎಂಬುದು ತಿಳಿದಿರುವ ವಿಷಯ. ಆದರೆ ಆ ವೇಳೆ ಅವರು ಸಿಬ್ಬಂದಿ ಜತೆ ರೊಮ್ಯಾನ್ಸ್‌ನಲ್ಲಿ ನಿರತರಾಗಿರು ರೆ ಎಂದು ವಿದೇಶಿ ಗಗನಸಖಿ ಸಿಯೆರಾ ಮಿಸ್ಟ್‌ ಹೇಳಿದ್ದಾರೆ. ಒಬ್ಬ ಪೈಟಲ್ ಕಾಕ್‌ಪಿಟ್‌ನಿಂದ ಹೊರ ಬಂದಾಗ, ಸಖಿಯೊಬ್ಬರು ಅದರೊಳಗೆ ಹೋಗಬಹುದು. ಕೆಲವರು ಇದನ್ನೇ ಅವಕಾಶವಾಗಿ ಬಳಸಿಕೊಂಡು, ಸಹಪೈಲಟ್ ಅನ್ನು ಹೊರ ಕಳಿಸಿ, ಗಗನಸಖಿ ಗೆಳತಿಯನ್ನು ಕರೆಸಿಕೊಳ್ಳುತ್ತಾರೆ. ವಿಮಾನ ಆಟೋ ಪೈಲಟ್ ಮೋಡ್‌ನಲ್ಲಿ ಇರುವಷ್ಟು ಹೊತ್ತು ಸರಸ ಸಲ್ಲಾಪಗಳಲ್ಲಿ ತೊಡಗಿರುತ್ತಾರೆ ಎಂದು ಅವರು ಹೇಳಿದ್ದಾರೆ. ಅವರು ಇನ್ನೂ ಏನೆಲ್ಲಾ ಶಾಕಿಂಗ್ ವಿಚಾರಗಳನ್ನು ಹೇಳಿದ್ದಾರೆ ಅಂತ ಇಲ್ಲಿದೆ ಡಿಟೇಲ್…

ವಿಮಾನವು ಸಾಮಾನ್ಯವಾಗಿ 35,000 ಅಡಿಗಳಷ್ಟು ಎತ್ತರವನ್ನು ತಲುಪಿದಾಗ ವಿಮಾನವನ್ನು ಆಟೋಪೈಲಟ್ ಮೋಡ್‌ಗೆ ಹಾಕಲಾಗುತ್ತದೆ ಆಗ ವಿಮಾನದ ಕಾಕ್‌ಫಿಟ್‌ನಲ್ಲಿರುವ ಪೈಲಟ್‌ಗಳು ಏನ್ ಮಾಡ್ತಿರ್ತಾರೆ ಎಂದಬುದನ್ನು ಈ ಸಿಯೆರಾ ವಿವರಿಸಿದ್ದಾಳೆ. ದೀರ್ಘ ಪ್ರಯಾಣದ ಹಾರಾಟದ ಸಮಯದಲ್ಲಿ, ವಿಮಾನಕ್ಕೆ ನಿರಂತರ ಹಸ್ತಚಾಲಿತ ನಿಯಂತ್ರಣ ಅಗತ್ಯವಿರುವುದಿಲ್ಲ ಆಗ ಕೆಲವೊಮ್ಮೆ ವಿಮಾನದ ಸಿಬ್ಬಂದಿ ಸದಸ್ಯರ ನಡುವೆ ರೋಮ್ಯಾನ್ಸ್ ನಡೆಯುತ್ತದೆ ಎಂದು ಆಕೆ ವಿವರಿಸಿದ್ದಾರೆ. ಆಟೋಪೈಲಟ್ ಆನ್ ಮಾಡಿದ ನಂತರ, ಈಗಾಗಲೇ ಪರಸ್ಪರ ಪ್ರೀತಿ ಹೊಂದಿರುವ ಕೆಲವು ಪೈಲಟ್‌ಗಳು ಮತ್ತು ಕ್ಯಾಬಿನ್ ಸಿಬ್ಬಂದಿ, ಅವರು ‘ಹೈ ಮೈಲ್ ಕ್ಲಬ್’ ಪಾರ್ಟಿಗಳಲ್ಲಿ ತೊಡಗುತ್ತಾರೆ ಈ ಘಟನೆಗಳು ಅಪರೂಪವಲ್ಲ ಅನೇಕ ದೀರ್ಘ ಪ್ರಯಾಣದ ವಿಮಾನಗಳಲ್ಲಿ ಇದು ನಡೆಯುತ್ತಿರುತ್ತದೆ ಎಂದು ಸಿಯೆರಾ ಮಿಸ್ಟ್ ಹೇಳಿದ್ದಾಳೆ.

ಗಗನಸಖಿಯರನ್ನು ಕಾಕ್‌ಪಿಟ್‌ಗೆ ಹೇಗೆ ಕರೆಯುತ್ತಾರೆ?

ಸಿಯೆರಾ ಮಿಸ್ಟ್ ಪ್ರಕಾರ, ಪ್ರಮಾಣಿತ ವಾಯುಯಾನ ಪ್ರೋಟೋಕಾಲ್ ಅಡಿಯಲ್ಲಿ, ಮತ್ತೊಬ್ಬ ಪೈಲಟ್ ಹೊರಗೆ ಬಂದಾಗ, ಉದಾಹರಣೆಗೆ, ಶೌಚಾಲಯಕ್ಕೆ ಹೋಗುವಂತಹ ಸಂದರ್ಭದಲ್ಲಿ, ಮತ್ತೊಬ್ಬ ಪೈಲಟ್‌ಗೆ ಫ್ಲೈಟ್ ಅಟೆಂಡೆಂಟ್ ಅನ್ನು ಕಾಕ್‌ಪಿಟ್‌ಗೆ ಕರೆಯಲು ಅವಕಾಶವಿದೆ. ಪೈಲಟ್ ಮತ್ತು ನಿರ್ದಿಷ್ಟ ಏರ್‌ಹೊಸ್ಟೆಸ್ ನಡುವೆ ಪ್ರಣಯ ಸಂಬಂಧವಿದ್ದಂತಹ ಸಂದರ್ಭಗಳಲ್ಲಿ, ಸಹಾಯದ ಅಗತ್ಯವಿದೆ ಎಂಬ ನೆಪದಲ್ಲಿ ಖಾಸಗಿ ಕ್ಷಣವನ್ನು ಹೊಂದಲು ಈ ನಿಯಮವನ್ನು ನೆಪವಾಗಿ ಬಳಸುತ್ತಾರೆ. ಅಂತಹ ಸಂದರ್ಭಗಳಲ್ಲಿ, ಕಾಕ್‌ಪಿಟ್ ಒಳಗೆ ಒಂದು ಪ್ರಣಯ ವಾತಾವರಣವು ಬೆಳೆಯುತ್ತದೆ. ಇದನ್ನು ವಿಮಾನ ಹಾರಾಟದ ಮೊದಲೇ ಫಿಕ್ಸ್ ಮಾಡಲಾಗುತ್ತದೆ. ಈ ಕಾಕ್‌ಫಿಟ್ ರೋಮ್ಯಾನ್ಸ್‌ಗಳು ವಿಮಾನ ಹಾರಾಟದ ಅಂತ್ಯದವರೆಗೆ ಅಥವಾ ಆಟೋಪೈಲಟ್ ಆಫ್ ಆಗುವವರೆಗೆ ಮತ್ತು ನಿಯಮಿತ ಮೇಲ್ವಿಚಾರಣೆ ಪ್ರಾರಂಭವಾಗುವವರೆಗೆ ಮುಂದುವರಿಯಬಹುದು ಎಂದು ಆಕೆ ಹೇಳಿದ್ದಾಳೆ.

ಸಿಯೆರಾ ಮಿಸ್ಟ್, ದೀರ್ಘ ಪ್ರಯಾಣದ ವಿಮಾನಗಳಲ್ಲಿ ಕ್ಯಾಬಿನ್ ಸಿಬ್ಬಂದಿಗೆ ವಿಶ್ರಾಂತಿ ಪಡೆಯಲು ಮೀಸಲಾಗಿರುವ ಸ್ಥಳವಾದ ಕ್ರೂ ವಿಶ್ರಾಂತಿ ಡೆಕ್ ಅನ್ನು ಈ ರೀತಿಯ ಪ್ರಣಯ ಸಂವಹನಗಳು ನಡೆಯಬಹುದಾದ ಮತ್ತೊಂದು ರಹಸ್ಯ ಸ್ಥಳವೆಂದು ಹೇಳಿದ್ದಾರೆ. ಈ ಡೆಕ್ ಸಾಮಾನ್ಯವಾಗಿ ವಿಮಾನ ಪ್ರಯಾಣಿಕರಿಗೆ ಗೋಚರಿಸುವುದಿಲ್ಲ ಮತ್ತು ಅಧಿಕೃತ ಸಿಬ್ಬಂದಿಗೆ ಮಾತ್ರ ಪ್ರವೇಶಿಸಬಹುದು ಎಂದು ಆಕೆ ಹೇಳಿದ್ದಾರೆ. ಆದರೆ ಇವರು ಕಾಕ್‌ಫಿಟ್‌ನಲ್ಲಿ ಏನು ಬೇಕಾದರೂ ಮಾಡಲಿ ಆದರೆ ಮೇಲೇರಿದ ನಮ್ಮನ್ನು ಸುರಕ್ಷಿತವಾಗಿ ಗುರು ತಲುಪಿಸಿದರೆ ಸಾಕು ಎನ್ನುವುದು ಸಾಮಾನ್ಯ ವಿಮಾನ ಪ್ರಯಾಣಿಕನ ಮನದಾಳದ ಮಾತು. ಈ ಬಗ್ಗೆ ನಿಮಗೇನನಿಸುತ್ತೆ ಕಾಮೆಂಟ್ ಮಾಡಿ.

ಇದನ್ನೂ ಓದಿ: ಸಾಕುನಾಯಿಯನ್ನು ರೈಲಿನ ಸೀಟಿಗೆ ಕಟ್ಟಿ ತೊರೆದು ಹೋದ ವ್ಯಕ್ತಿ: ಮಾಲೀಕನ ಬರುವಿಕೆಗಾಗಿ ಕಾದು ಕುಳಿತ ನಾಯಿ
ಇದನ್ನೂ ಓದಿ: ಹಾವು ಮೈಮೇಲೆ ಬಿದ್ದಿತ್ತು ಆದ್ರೆ ಕಚ್ಚಿರಲಿಲ್ಲ : ಯುವಕನ ಭ್ರಮೆಗೆ ಹಾವಿನ ಜೀವವೇ ಹೋಯ್ತು

 



Source link

Leave a Reply

Your email address will not be published. Required fields are marked *