12 ಗಂಟೆಯಲ್ಲಿ 1113 ಪುರುಷರ ಜೊತೆ ಮಿಲನ! ಲಿಲಿ ಫಿಲಿಪ್ಸ್‌ ವಿಶ್ವದಾಖಲೆಗೆ ಬೆಚ್ಚಿದ ಪಡ್ಡೆಗಳು | Lily Phillips Claims She Made Record By Sleeping With 1113 Men In 12 Hours Bni

12 ಗಂಟೆಯಲ್ಲಿ 1113 ಪುರುಷರ ಜೊತೆ ಮಿಲನ! ಲಿಲಿ ಫಿಲಿಪ್ಸ್‌ ವಿಶ್ವದಾಖಲೆಗೆ ಬೆಚ್ಚಿದ ಪಡ್ಡೆಗಳು | Lily Phillips Claims She Made Record By Sleeping With 1113 Men In 12 Hours Bni



ನೀಲಿಚಿತ್ರ ನಟಿ ಲಿಲಿ ಫಿಲಿಪ್ಸ್‌ ಕೇವಲ 12 ಗಂಟೆಗಳಲ್ಲಿ 1113  ಪುರುಷರೊಂದಿಗೆ ಮಿಲನ ನಡೆಸಿ ವಿಶ್ವದಾಖಲೆ ನಿರ್ಮಿಸಿದ್ದಾಗಿ ಹೇಳಿಕೊಂಡಿದ್ದಾರೆ. ಬೋನಿ ಬ್ಲೂ ಅವರ ದಾಖಲೆಯನ್ನು ಮುರಿದಿದ್ದಾರೆ ಎನ್ನಲಾಗಿದೆ. ಈ ಸಾಧನೆ ಸಾಧ್ಯವೇ ಎಂಬ ಪ್ರಶ್ನೆ ಮೂಡಿದೆ.

ಇದೀಗ ನೀಲಿಚಿತ್ರ ಲೋಕದ ಮಾಡೆಲ್‌ ಕಂ ನಟಿ ಕಂ ಸೆಲೆಬ್ರಿಟಿಗಳ ನಡುವೆ- ಯಾರು ಕಡಿಮೆ ಅವಧಿಯಲ್ಲಿ ಹೆಚ್ಚು ಪುರುಷರ ಜೊತೆ ಮಲಗಿ ಏಳುವವರು ಎಂಬ ಸ್ಪರ್ಧೆ ಶುರುವಾದಂತಿದೆ. ಒಂದು ದಿನದಲ್ಲಿ ಸಾವಿರ, ಹತ್ತು ದಿನದಲ್ಲಿ ಎರಡು ಸಾವಿರ ಗಂಡಸರು ತನ್ನ ಶರೀರವನ್ನು ಭೋಗಿಸಿದರು- ಎಂದೆಲ್ಲ ಹೇಳಿಕೊಳ್ಳುವುದೇ ಇವರಿಗೀಗ ರೋಮಾಂಚಕ ವಿಷಯ. ಈ ಸಾಲಿಗೆ ಹೊಸ ಸೇರ್ಪಡೆ ಲಿಲಿ ಫಿಲಿಪ್ಸ್‌ (Lily Phillips) ಎಂಬ ನೀಲಿ ತಾರೆ. ಈಕೆ ತಾನು ವಿಶ್ವದಾಖಲೆ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಅದು ಹೇಗೆ? ಕೇವಲ 12 ಗಂಟೆಗಳಲ್ಲಿ 1,113 ಪುರುಷರೊಂದಿಗೆ ಮಿಲನ ಮುಗಿಸುವ ಮೂಲಕ ಬೋನಿ ಬ್ಲೂ (Bonnie Blue) ಎಂಬಾಕೆಯ ದಾಖಲೆ ಮುರಿದಿದ್ದೇನೆ ಎಂದು ಮಾಡೆಲ್‌ ಲಿಲಿ ಫಿಲಿಪ್ಸ್ ಹೇಳಿಕೊಂಡಿದ್ದಾರೆ.

ಈಗ ಸ್ವಲ್ಪ ಈ ಸುದ್ದಿಯನ್ನು ಡಿಕೋಡ್‌ ಮಾಡೋಣ. ಇದು ಹೇಗೆ ಸಾಧ್ಯ ಎಂದು ಸ್ವಲ್ಪ ಪರಿಶೀಲಿಸೋಣ. 12 ಗಂಟೆಯಲ್ಲಿ 1,113 ಪುರುಷರ ಜತೆಗೆ ಮಿಲನ ಮುಗಿಸಲು ಸಾಧ್ಯವೇ? 12 ಗಂಟೆ ಎಂದರೆ 720 ನಿಮಿಷ ಅಥವಾ 43,200 ಸೆಕೆಂಡ್‌ಗಳು. ಇದನ್ನು ಈಗ 1,113ರಿಂದ ಭಾಗಿಸೋಣ. ಆಗ 38.23 ಸೆಕೆಂಡ್‌ ಸಿಗುತ್ತದೆ. ಅಂದರೆ ಒಬ್ಬೊಬ್ಬ ಗಂಡಸಿನ ಜತೆಗೆ ಆಕೆ ಕಳೆದಿರುವುದು ಕೇವಲ 38 ಸೆಕೆಂಡ್.‌ ಇಷ್ಟು ಕಡಿಮೆ ಅವಧಿಯಲ್ಲಿ ಏನೇನೆಲ್ಲ ಮಾಡಲು ಸಾಧ್ಯ ಎಂದು ಕೊಂಚ ಯೋಚಿಸೋಣವೇ? ಬೇಡ ಬಿಡಿ, ಆ ಕಷ್ಟ ನಮಗೇಕೆ? ಅದು ಅವರಿಗೇ ಇರಲಿ.

ಈ ಹಿಂದೆ ಬೋನಿ ಬ್ಲೂ ಎಂಬ ಮಾಡೆಲ್‌ 12 ಗಂಟೆಗಳಲ್ಲಿ ಸಾವಿರ ಪುರುಷರೊಂದಿಗೆ ಹಾಸಿಗೆ ಹಂಚಿಕೊಳ್ಳುವ ಮೂಲಕ ದಾಖಲೆ ನಿರ್ಮಿಸಿದ್ದಳು. ಅವರ ಈ ದಾಖಲೆ ವಿಶ್ವಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿ ಅವರಿಗೆ ಸಾಕಷ್ಟು ಪ್ರಚಾರ ನೀಡಿತ್ತು. ಇದೀಗ ಮತ್ತೊಬ್ಬ ಮಾಡೆಲ್ ಅಂತಹುದೇ ದಾಖಲೆಯ ಹಿಂದೆ ಬಿದ್ದಿದ್ದಾಳೆ. ಅತೀ ಕಡಿಮೆ ಸಮಯದಲ್ಲಿ ಅತೀ ಹೆಚ್ಚು ಪುರುಷರೊಂದಿಗೆ ಮಲಗುವ ದಾಖಲೆ ಗೀಳಿಗೆ ಬಿದ್ದಿರುವ ಕೆಲ ಮಾಡೆಲ್‌ಗಳು ಪ್ರಚಾರ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಆ ಪಟ್ಟಿಗೆ ಇದೀಗ ರೂಪದರ್ಶಿ ಲಿಲಿ ಫಿಲಿಪ್ಸ್ ಸೇರಿಕೊಂಡಿದ್ದಾರೆ. ತಾನು ಕೇವಲ 12 ಗಂಟೆಗಳಲ್ಲಿ 1,113 ಪುರುಷರೊಂದಿಗೆ ಮಿಲನ ನಡೆಸಿ ಬೋನಿ ಬ್ಲೂ ದಾಖಲೆ ಮುರಿದಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತ ವಿಡಿಯೋವನ್ನೂ ಕೂಡ ಅಪ್ಲೋಡ್ ಮಾಡಿದ್ದಾರೆ.

ಇನ್‌ಸ್ಟಾಗ್ರಾಮ್ ಖಾತೆಯ ವಿಡಿಯೋದಲ್ಲಿ ಆಕೆ ಹೇಳಿರುವುದು ಹೀಗೆ- ‘ನನ್ನ ಫಾಲೋವರ್ಸ್​​​ ಜೊತೆಗೆ ಆಸಕ್ತಿಯ ವಿಚಾರವನ್ನು ಹಂಚಿಕೊಳ್ಳುತ್ತಿದ್ದೇನೆ. ನಾನು ವಿಶ್ವ ದಾಖಲೆ ಮಾಡಬೇಕು ಎಂದುಕೊಂಡಿದ್ದೆ. ಅದನ್ನು ನಾನು ನಿನ್ನೆ ಮಾಡಿದ್ದೇನೆ. ನನಗೆ ತುಂಬಾ ಸಂತೋಷವಾಗಿದೆ. ನಾನು 12 ಗಂಟೆಗಳಲ್ಲಿ 1,113 ಪುರುಷರ ಜತೆಗೆ ಮಲಗಿದ್ದೇನೆʼ ಎಂದು ವೀಡಿಯೊ ಜೊತೆಗೆ, ʼವಿಶ್ವ ದಾಖಲೆ ಸ್ಲಝಾʼ ಎಂದು ಲಿಲಿ ಬರೆದುಕೊಂಡಿದ್ದಾರೆ.

ಹೆಣ್ಣಿನ ಬಗ್ಗೆ ನಿಮಗೆ ಗೊತ್ತಿಲ್ಲದ ಇಂಟರೆಸ್ಟಿಂಗ್ ವಿಷ್ಯಗಳಿವು

ಇನ್ನೊಬ್ಬ ಓನ್ಲಿ ಫ್ಯಾನ್ಸ್‌ ಮಾಡೆಲ್‌, 25 ವರ್ಷ ವಯಸ್ಸಿನ ಬೋನಿ ಬ್ಲೂ ತಾನು ಕೇವಲ 12 ಗಂಟೆಗಳಲ್ಲಿ ಬರೋಬ್ಬರಿ 1,057 ಪುರುಷರ ಜೊತೆ ಮಲಗಿ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾಗಿ ಹೇಳಿಕೊಂಡಿದ್ದಳು. ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಇದನ್ನು ಹೇಳಿಕೊಂಡಿದ್ದು, ಈ ದಾಖಲೆಯನ್ನು ಇನ್ಯಾರೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಳು. ಈಕೆಗಿಂತ ಮೊದಲು 2004ರಲ್ಲಿ ಲಿಸಾ ಸ್ಪಾರ್ಕ್ಸ್‌ ಎಂಬ ರೂಪದರ್ಶಿ ಇಂತಹ ದಾಖಲೆ ನಿರ್ಮಿಸಿದ್ದರು. ಲಿಸಾ ಒಂದೇ ದಿನದಲ್ಲಿ 919 ಪುರುಷರೊಂದಿಗೆ ಮಲಗಿ ಎದ್ದು ದಾಖಲೆ ನಿರ್ಮಿಸಿದ್ದರು.

Men’s Wealth: ಪತ್ನಿ ಖುಷಿಯಾಗಿದ್ದರೆ ಸಿಗಲಿದೆ ಪತಿಗೆ ಶೇಕಡಾ 80ರಷ್ಟು ಸಂಪತ್ತು! ಏನಿದು?

 

 

 



Source link

Leave a Reply

Your email address will not be published. Required fields are marked *