Headlines

‘ಕಿಂಗ್’ ಶೂಟಿಂಗ್‌ನಲ್ಲಿ ಶಾರುಖ್‌ ಖಾನ್‌ಗೆ ಗಾಯ.. ‘ಕಿಂಗ್‌ ಖಾನ್‌’ ಸದ್ಯದ ಸ್ಥಿತಿ ಬಗ್ಗೆ ಡಾಕ್ಟರ್ ಹೇಳಿದ್ದೇನು? | Bollywood Actor Shah Rukh Khan Got Back Injury In King Movie Shooting Set

‘ಕಿಂಗ್’ ಶೂಟಿಂಗ್‌ನಲ್ಲಿ ಶಾರುಖ್‌ ಖಾನ್‌ಗೆ ಗಾಯ.. ‘ಕಿಂಗ್‌ ಖಾನ್‌’ ಸದ್ಯದ ಸ್ಥಿತಿ ಬಗ್ಗೆ ಡಾಕ್ಟರ್ ಹೇಳಿದ್ದೇನು? | Bollywood Actor Shah Rukh Khan Got Back Injury In King Movie Shooting Set



ನಟ ಶಾರುಖ್ ಖಾನ್ ಅವರು ಕಿಂಗ್ ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ಸಾಹಸ ದೃಶ್ಯದಲ್ಲಿ ಭಾಗಿಯಾಗಿದ್ದ ನಟ ಶಾರುಖ್ ಖಾನ್ ಅವರ ಬೆನ್ನಿಗೆ ತೀವರ ಗಾಯವಾಗಿದೆ, ತಕ್ಷಣವೇ ನಟನನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿಅವರನ್ನು ಪರೀಕ್ಷಿಸಿರುವ ವೈದ್ಯರು…

ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಅವರು ‘ಕಿಂಗ್’ ಸಿನಿಮಾದ (King) ಶೂಟಿಂಗ್‌ನಲ್ಲಿ ಅಪಘಾತಕ್ಕೆ ಒಳಗಾಗಿದ್ದಾರೆ. ಅವರ ಬೆನ್ನಿಗೆ ಗಾಯವಾಗಿದ್ದು ತೀವ್ರ ನೋವಿನಿಂದ ಅವರು ಬಳಲುತ್ತಿದ್ದಾರೆ. ಈ ಕಾರಣಕ್ಕೆ ಕಿಂಗ್ ಸಿನಿಮಾ ಶೂಟಿಂಗ್‌ ಸ್ಥಗಿತಗೊಳಿಸಲಾಗಿದ್ದು, ಸದ್ಯ ಶಾರುಖ್ ಆರೋಗ್ಯದ ಸ್ಥಿತಿ ಸ್ಥಿರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಚಿತ್ರದಲ್ಲಿ ಶಾರುಖ್ ಜೋಡಿಯಾಗಿ ನಟಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಟರಾದ ಅನಿಲ್ ಕಪೂರ್ ಹಾಗೂ ಅಭಿಷೇಕ್ ಬಚ್ಚನ್ ಸಹ ನಟಿಸುತ್ತಿದ್ದಾರೆ.

ನಟ ಶಾರುಖ್ ಖಾನ್ ಅವರು ಕಿಂಗ್ ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ಸಾಹಸ ದೃಶ್ಯದಲ್ಲಿ ಭಾಗಿಯಾಗಿದ್ದ ನಟ ಶಾರುಖ್ ಖಾನ್ ಅವರ ಬೆನ್ನಿಗೆ ತೀವರ ಗಾಯವಾಗಿದೆ, ತಕ್ಷಣವೇ ನಟನನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿಅವರನ್ನು ಪರೀಕ್ಷಿಸಿರುವ ವೈದ್ಯರು, ಗಾಯಕ್ಕೆ ಸೂಕ್ತ ಚಿಕಿತ್ಸೆ ನೀಡಲಾಗಿದ್ದು ಅವರ ಆರೋಗ್ಯ ಸ್ಥಿರವಾಗಿದೆ ಎಂಬ ಮಾಹಿತಿ ನೀಡಿದ್ದಾರೆ. ಈ ಸುದ್ದಿಯಿಂದ ಆತಂಕಕ್ಕೊಳಗಾಗಿದ್ದ ಶಾರುಖ್ ಖಾನ್ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಕಿಂಗ್ ಸಿನಿಮಾ ಬಹತಾರಾಗಣ ಹೊಂದಿದೆ. ಈ ಚಿತ್ರವವನ್ನು ಶ್ರೀಲಂಕಾ ಸೇರಿದಂತೆ ಹಲವು ವಿದೇಶಗಳಲ್ಲೂ ಚಿತ್ರೀಕರಣ ಮಾಡಲಾಗುತ್ತಿದೆ. ಇದೀಗ ಶಾರುಖ್ ಖಾನ್ ಆರೋಗ್ಯ ಸರಿಯಲ್ಲದ ಕಾರಣ, ಮಿಕ್ಕ ನಟರುಗಳ ಪೋರ್ಶನ್ ಶೂಟಿಂಗ್ ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.



Source link

Leave a Reply

Your email address will not be published. Required fields are marked *