Headlines

Gujarat ATS Arrests Four Al Qaeda Linked Terrorists | ಗುಜರಾತ್ ಎಟಿಎಸ್‌ನಿಂದ ಭರ್ಜರಿ ಭೇಟೆ; ಅಲ್-ಖೈದಾ ಸಂಪರ್ಕ ಹೊಂದಿದ್ದ ನಾಲ್ವರು ಶಂಕಿತ ಉಗ್ರರ ಬಂಧನ | Gujarat Ats Arrests Four Al Qaeda Linked Terrorists In Anti Terror Operation

Gujarat ATS Arrests Four Al Qaeda Linked Terrorists | ಗುಜರಾತ್ ಎಟಿಎಸ್‌ನಿಂದ ಭರ್ಜರಿ ಭೇಟೆ; ಅಲ್-ಖೈದಾ ಸಂಪರ್ಕ ಹೊಂದಿದ್ದ ನಾಲ್ವರು ಶಂಕಿತ ಉಗ್ರರ ಬಂಧನ | Gujarat Ats Arrests Four Al Qaeda Linked Terrorists In Anti Terror Operation



ಗುಜರಾತ್ ಎಟಿಎಸ್ ಅಲ್-ಖೈದಾ ಜೊತೆ ಸಂಪರ್ಕ ಹೊಂದಿದ್ದ ನಾಲ್ವರು ಶಂಕಿತ ಭಯೋತ್ಪಾದಕರನ್ನು ಬಂಧಿಸಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ಯುವಕರನ್ನು ಸೇರ್ಪಡೆಗೊಳಿಸುತ್ತಿದ್ದ ಈ ಗುಂಪು ದೊಡ್ಡ ದುಷ್ಕೃತ್ಯಕ್ಕೆ ಸಂಚು ರೂಪಿಸಿತ್ತು.

Gujarat ATS Arrests Four Al Qaeda Linked Terrorists: ಗುಜರಾತ್ ಎಟಿಎಸ್ (ಆಂಟಿ ಟೆರರಿಸ್ಟ್ ಸ್ಕ್ವಾಡ್) ದೊಡ್ಡ ಕಾರ್ಯಾಚರಣೆಯೊಂದರಲ್ಲಿ ಅಲ್-ಖೈದಾ ಜೊತೆ ಸಂಪರ್ಕ ಹೊಂದಿದ್ದ ನಾಲ್ವರು ಶಂಕಿತ ಭಯೋತ್ಪಾದಕರನ್ನು ಬಂಧಿಸಿದೆ. ಎಟಿಎಸ್ ಡಿಐಜಿ ಸುನಿಲ್ ಜೋಶ್ ಪ್ರಕಾರ, ಬಂಧಿತರಾದ ಜೀಶನ್, ಫರ್ದೀನ್, ಸೈಫುಲ್ಲಾ ಮತ್ತು ಫಾರಿಕ್ ದೀರ್ಘಕಾಲದಿಂದ ಸಕ್ರಿಯರಾಗಿದ್ದರು. ಇವರಲ್ಲಿ ಇಬ್ಬರು ಗುಜರಾತ್‌ನಿಂದ, ಒಬ್ಬ ದೆಹಲಿಯಿಂದ ಮತ್ತು ಒಬ್ಬ ನೋಯ್ಡಾದಿಂದ ಬಂಧನಕ್ಕೊಳಗಾಗಿದ್ದಾರೆ.

ಸೋಷಿಯಲ್ ಮೀಡಿಯಾ ಭಯೋತ್ಪಾದನೆ ಚಟುವಟಿಕೆ:

ಎಟಿಎಸ್ ಮಾಹಿತಿಯಂತೆ, ಈ ಶಂಕಿತರು ಸಾಮಾಜಿಕ ಮಾಧ್ಯಮಗಳ ಮೂಲಕ ಜನರನ್ನು ತಮ್ಮ ಗುಂಪಿಗೆ ಸೇರಿಸಿಕೊಳ್ಳುತ್ತಿದ್ದರು ಮತ್ತು ಅಲ್-ಖೈದಾದ ಸಿದ್ಧಾಂತವನ್ನು ಪ್ರಚಾರ ಮಾಡುತ್ತಿದ್ದರು. ಗುಪ್ತ ಮಾಹಿತಿಯ ಆಧಾರದ ಮೇಲೆ ಎಟಿಎಸ್ ತನಿಖೆ ಆರಂಭಿಸಿ, ಯಶಸ್ವಿ ಕಾರ್ಯಾಚರಣೆಯ ಮೂಲಕ ಈ ಆರೋಪಿಗಳನ್ನು ಬಂಧಿಸಿದೆ.

ಭಾರೀ ದುಷ್ಕೃತ್ಯಕ್ಕೆ ಸಂಚು:

20 ರಿಂದ 25 ವರ್ಷ ವಯಸ್ಸಿನ ಈ ಶಂಕಿತರು ದೊಡ್ಡ ಪ್ರಮಾಣದ ಭಯೋತ್ಪಾದಕ ದಾಳಿಗೆ ಸಂಚು ರೂಪಿಸುತ್ತಿದ್ದರು ಎಂದು ತಿಳಿದುಬಂದಿದೆ. ಸಮಯಕ್ಕೆ ಸರಿಯಾಗಿ ಇವರನ್ನು ಬಂಧಿಸಿರುವುದು ಗುಜರಾತ್ ಎಟಿಎಸ್‌ನ ದೊಡ್ಡ ಯಶಸ್ಸಾಗಿ ಪರಿಗಣಿಸಲಾಗಿದೆ. ಈ ಕಾರ್ಯಾಚರಣೆ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಮಹತ್ವದ ಸಾಧನೆಯಾಗಿದ್ದು, ತನಿಖೆ ಇನ್ನೂ ಮುಂದುವರಿದಿದೆ.



Source link

Leave a Reply

Your email address will not be published. Required fields are marked *