Headlines

ಡಾ ವಿಷ್ಣುವರ್ಧನ್ ಸಮಾಧಿ ಧ್ವಂಸ; ಪೋಸ್ಟ್ ಮಾಡಿ ನೋವು ತೋಡಿಕೊಂಡ ‘ದೊಡ್ಮನೆ’ ರಾಘವೇಂದ್ರ ರಾಜ್‌ಕುಮಾರ್! | Actor Raghavendra Rajkumar Post On Vishnuvardhan Memorial Demolition

ಡಾ ವಿಷ್ಣುವರ್ಧನ್ ಸಮಾಧಿ ಧ್ವಂಸ; ಪೋಸ್ಟ್ ಮಾಡಿ ನೋವು ತೋಡಿಕೊಂಡ ‘ದೊಡ್ಮನೆ’ ರಾಘವೇಂದ್ರ ರಾಜ್‌ಕುಮಾರ್! | Actor Raghavendra Rajkumar Post On Vishnuvardhan Memorial Demolition



ಡಾ ವಿಷ್ಣುವರ್ಧನ್ ಸಮಾಧಿ ಧ್ವಂಸ; ಪೋಸ್ಟ್ ಮಾಡಿ ನೋವು ತೋಡಿಕೊಂಡ ‘ದೊಡ್ಮನೆ’ ರಾಘವೇಂದ್ರ ರಾಜ್‌ಕುಮಾರ್! | Actor Raghavendra Rajkumar Post On Vishnuvardhan Memorial Demolition

ಡಾ ರಾಜ್‌ಕುಮಾರ್ ಫ್ಯಾಮಿಲಿಯಿಂದ ಈ ಬಗ್ಗೆ ಒಬ್ಬರೂ ಕೂಡ ಮಾತನ್ನಾಡುತ್ತಿಲ್ಲ ಎಂದು ಹಲವರು ಸೋಷಿಯಲ್ ಮೀಡಿಯಾಗಳಲ್ಲಿ ಕಾಮೆಂಟ್ ಮಾಡುತ್ತಿದ್ದರು. ಇದೀಗ ನಟ ರಾಘವೇಂದ್ರ ರಾಜ್‌ಕುಮಾರ್ ಅವರು ದೊಡ್ಮನೆ ಕುಟುಂಬದಿಂದ ಮೊಟ್ಟಮೊದಲ ಬಾರಿಗೆ ರಿಯಾಕ್ಟ್ ಮಾಡಿದ್ದಾರೆ.

ಸದ್ಯ, ಕನ್ನಡದ ಮೇರು ನಟ ಡಾ ವಿಷ್ಣುವರ್ಧನ್ (Dr Vishnuvardhan) ಅವರಿಗೆ ಆಗಿರುವ ಅವಮಾನದೇ ಸುದ್ದಿಯೇ ಕರ್ನಾಟಕದ ತುಂಬಾ ಧ್ವನಿಸುತ್ತಿದೆ. ಇತ್ತೀಚೆಗೆ, ಅಂದರೆ 08 ಆಗಷ್ಟ್ 2025 ರಂದು ಅಭಿಮಾನ್ ಸ್ಟುಡಿಯೋದಲ್ಲಿ ಇದ್ದ ಡಾ ವಿಷ್ಣುವರ್ಧನ್ ಅವರ ಸ್ಮಾರಕವನ್ನು ನೆಮಸಮ ಮಾಡಲಾಗಿದೆ. ರಾತ್ರೋರಾತ್ರಿ, ಅಂದರೆ 08ರ ಮುಂಜಾನೆ 3 ಗಂಟೆಗೆ ನಟ ವಿಷ್ಣುವರ್ಧನ್ ಅವರ ಸಮಾಧಿ ಸ್ಥಳವನ್ನು ತೆರವು ಮಾಡಲಾಗಿದೆ. ಈ ಕೃತ್ಯದ ಬಗ್ಗೆ ವಿಷ್ಣುವರ್ಧನ್ ಅಭಿಮಾನಿಗಳು ಸಹಜವಾಗಿಯೇ ಬೇಸರಗೊಂಡಿದ್ದು, ಧರಣಿ ಮಾಡುತ್ತಿದ್ದಾರೆ.

ಇನ್ನು, ಕನ್ನಡ ಚಿತ್ರರಂಗದಲ್ಲಿ ಹಲವಾರು ಕಲಾವಿದರು ನಟ ವಿಷ್ಣುವರ್ಧನ್ ಅವರಿಗೆ ಆಗಿರುವ ಈ ಅವಮಾನದ ವಿರುದ್ಧ ಧ್ವನಿ ಎತ್ತಿದ್ದಾರೆ. ನಟ ಕಿಚ್ಚ ಸುದೀಪ್, ರಿಯಲ್ ಸ್ಟಾರ್ ಉಪೇಂದ್ರ, ವಸಿಷ್ಠ ಸಿಂಹ, ವಿಜಯ ರಾಘವೇಂದ್ರ ಸೇರಿದಂತೆ ಹಲವರು ಇದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ನಟಿಯರಾದ ಶ್ರುತಿ, ಸುಧಾರಾಣಿ ಸಹ ಈ ಬಗ್ಗೆ ನೋವು ತೋಡಿಕೊಂಡಿದ್ದಾರೆ. ಇದೀಗ, ನಟ ಹಾಗೂ ಡಾ ರಾಜ್‌ಕುಮಾರ್ ಎರಡನೇ ಮಗ ರಾಘವೇಂದ್ರ ರಾಜ್‌ಕುಮಾರ್ ಅವರು ಫೇಸ್‌ಬುಕ್‌ ಪೇಜ್‌ನಲ್ಲಿ ಈ ಬಗ್ಗೆ ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.

ಡಾ ರಾಜ್‌ಕುಮಾರ್ ಫ್ಯಾಮಿಲಿಯಿಂದ ಈ ಬಗ್ಗೆ ಒಬ್ಬರೂ ಕೂಡ ಮಾತನ್ನಾಡುತ್ತಿಲ್ಲ ಎಂದು ಹಲವರು ಸೋಷಿಯಲ್ ಮೀಡಿಯಾಗಳಲ್ಲಿ ಕಾಮೆಂಟ್ ಮಾಡುತ್ತಿದ್ದರು. ಇದೀಗ ನಟ ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar) ಅವರು ದೊಡ್ಮನೆ ಕುಟುಂಬದಿಂದ ಮೊಟ್ಟಮೊದಲ ಬಾರಿಗೆ ರಿಯಾಕ್ಟ್ ಮಾಡಿದ್ದಾರೆ. ಈ ಬಗ್ಗೆ ತಮ್ಮ ಪೇಸ್‌ಬುಕ್‌ ಪೇಜ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ದೊಡ್ಡತನ ತೋರಿದ್ದಾರೆ. ‘ನಡೆದಿರುವ ಘಟನೆ ಕೇಳಿ ಮನಸ್ಸಿಗೆ ತುಂಬಾ ಬೇಸರವಾಗಿದೆ. ಡಾ ವಿಷ್ಣುವರ್ಧನ್ ಸರ್ ಅವರಿಗೆ ಸರಿಯಾದ ಗೌರವ ಸಿಗಲೇಬೇಕು..’ ಎಂದು ಅವರು ಪೋಸ್ಟ್ ಮಾಡಿದ್ದಾರೆ.

ರಾಘವೇಂದ್ರ ರಾಜ್‌ಕುಮಾರ್ ಅವರು ಪೋಸ್ಟ್ ನೋಡಿ ಹಲವರು ಕಾಮೆಂಟ್ ಮಾಡಿದ್ದಾರೆ. ಅವರಲ್ಲಿ ಒಬ್ಬರು, ‘ರಾಘಣ್ಣ ಇವತ್ತು ರಾಜಕುಮಾರ್ ಅಣ್ಣವರು ಇದ್ದಿದ್ರೆ ಮೊದಲೂ ಅವರೇ ಇದನ್ನು ಖಂಡೀಸೂತಿದ್ದರು ಒಬ್ಬ ಕನ್ನಡದ ಮೇರು ನಟನಿಗೆ ಸಿಗುವ ಗೌರವ ಮಾನ್ಯತೆ ಸಿಗುವಂತೆ ಹೊರಡುತ್ತಿದ್ದರು ಅದ್ರೆ ಈವತ್ತಿನ ಕನ್ನಡ ಸಿನಿಮಾ ರಂಗ ಜೇಬಲ್ಲಿ ದುಡ್ಡು ಇದ್ರೆ ಸಾಕು ಅವರು ಹೇಳಿದಂತೆ ಕೇಳುವ ಕಾಲ ಬಂದಿದೆ ಇವರಿಗೇ ಕಲೆ ಕಲಾವಿದರನ್ನು ನಟರನ್ನು ಹೇಗೆ ನೆಡೆಸಿಕೊಳ್ಳಬೇಕು ಗೊತ್ತಿಲ್ಲ ಹಣದ ಮಧ ಅಭಿಮಾನಿಗಳಿಂದ ರೌಡಿಸಂ ಮಾಡುವ ಮಟ್ಟಕ್ಕೆ ಇಳಿದಿದ್ದಾರೆ ಇವತ್ತಿನ ಕೆಲವು ನಟರೂ ಕನ್ನಡಕ್ಕಾಗಿ ಇಷ್ಟು ವರ್ಷಗಳ ಸೇವೆ ಮಾಡಿದ ಗಣ್ಯರಿಗೆ ಸ್ಥಾನ ಗೌರವ ನೀಡದೇ ಇದ್ದರೆ ಅವರಿಗೆ ಮೋಸ ಅನ್ಯಾಯ ಮಾಡಿದಂತೆ ಅಲ್ಲವೇ ರಾಘಣ್ಣ?’ ಎಂದಿದ್ದಾರೆ.

ಇನ್ನೊಬ್ಬರು, ‘ರಾಘಣ್ಣ ನಿಮ್ಮ ಬಗ್ಗೆ ಅಣ್ಣಾವ್ರ ಬಗ್ಗೆ ಶಿವಣ್ಣನ ಬಗ್ಗೆ ನಿಮ್ ದೊಡ್ಮನೆ ಬಗ್ಗೆ ನನಗೆ ತುಂಬಾ ಗೌರವವಿದೆ ದಯವಿಟ್ಟು ದಯವಿಟ್ಟು ವಿಷ್ಣು ಅಣ್ಣ ನಮ್ಮ ಆರಾಧ್ಯ ದೈವ, ಅಭಿಮಾನ ಸ್ಟುಡಿಯೋದಲ್ಲಿರೋ ಅಣ್ಣನ ಪುಣ್ಯಭೂಮಿ ಗೆ ನೀವು ನಿಮ್ಮ ಕುಟುಂಬದವರೆಲ್ಲರೂ ದಯವಿಟ್ಟು ಇದರ ಬಗ್ಗೆ ಸರ್ಕಾರದ ಗಮನಕ್ಕೆ ತನ್ನಿ . ಪುಣ್ಯಭೂಮಿಯನ್ನು ಉಳಿಸಿಕೊಡಿ . ನಿಮ್ಮ ದೊಡ್ಡ ಮನೆಯ ಹೆಸರು ಇನ್ನು ಎತ್ತರಕ್ಕೆ ಬೆಳೆಯಲಿ ದಯವಿಟ್ಟು ಇದರ ಬಗ್ಗೆ ಮಾತಾಡಿ ದೊಡ್ಡಮನೆ ಎಲ್ಲ ಕಲಾವಿದರು ನಿಮಗೆ ಮತ್ತೊಮ್ಮೆ ವಂದನೆಗಳೊಂದಿಗೆ..’ ಎಂದಿದ್ದಾರೆ.

ಮತ್ತೊಬ್ಬರು, ‘ಅವರಿಗಾದ ಅನ್ಯಾಯ ಬಹುಶಃ ಪ್ರಪಂಚದ ಚಲನಚಿತ್ರರಂಗದಲ್ಲಿ ಯಾರಿಗೂ ಆಗಿಲ್ಲ, ಅವರಿಗೆ ಸಿಗಬೇಕಾದ ಗೌರವವೂ ಸಿಕ್ಕಿಲ್ಲ, ಇದು ದುರಂತ..’ ಎಂದಿದ್ದಾರೆ



Source link

Leave a Reply

Your email address will not be published. Required fields are marked *