ದಾವಣಗೆರೆ ಸಿಇಎನ್ ಪೊಲೀಸರ ಭರ್ಜರಿ ಬೇಟೆ; ಹೈವೆ ಬಳಿ ನಿಂತು ಡ್ರಗ್ಸ್ ಮಾರುತ್ತಿದ್ದ ಐವರು ಪೆಡ್ಲರ್‌ಗಳ ಬಂಧನ | Davanagere Cen Police 5 Arrested Including Nigerians Dental Student

ದಾವಣಗೆರೆಯಲ್ಲಿ ನೈಜೀರಿಯಾ ಪ್ರಜೆಗಳು ಸೇರಿದಂತೆ ಐವರು ಡ್ರಗ್ಸ್ ಮಾರಾಟದ ಆರೋಪದ ಮೇಲೆ ಬಂಧಿತರಾಗಿದ್ದಾರೆ. ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಡ್ರಗ್ಸ್ ಮಾರಾಟ ಮಾಡುತ್ತಿದ್ದ ಈ ಜಾಲವನ್ನು ಸಿಇಎನ್ ಪೊಲೀಸರು ಬೇಧಿಸಿದ್ದಾರೆ. 

ದಾವಣಗೆರೆ (ಜು.25): ನಗರದ ಹೊರವಲಯದ ಬಾಡಾ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರು ನೈಜೀರಿಯಾ ಪ್ರಜೆಗಳು ಸೇರಿದಂತೆ ಐವರನ್ನು ದಾವಣಗೆರೆ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. .

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಕಾರಿನಲ್ಲಿ ಕುಳಿತು ಡ್ರಗ್ಸ್ ಮಾರಾಟ ಮಾಡುತ್ತಿದ್ದ ಈ ಐವರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಬೆಂಗಳೂರು ಮೂಲದ ಪ್ಯಾಟ್ರಿಕ್ (44) ಮತ್ತು ಪ್ರಾಮೇಸೆ (42) ಎಂಬ ನೈಜೀರಿಯಾ ಪ್ರಜೆಗಳಿದ್ದಾರೆ. ಜೊತೆಗೆ, ಬೆಂಗಳೂರಿನ ಮೊಹಮ್ಮದ್ ಬಿಲಾಲ್ (29) ಮತ್ತು ಸೈಯದ್ ಜಾಬೀರ್ (31) ಹಾಗೂ ದಾವಣಗೆರೆಯ ಖಾಸಗಿ ದಂತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಕಲ್ಯಾಣ್ (24) ಕೂಡ ಸೇರಿದ್ದಾರೆ. ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಖದೀಮರು ಡ್ರಗ್ಸ್ ಮಾರಾಟ ಮಾಡುತ್ತಿದ್ದರು.

ಪೊಲೀಸರ ತನಿಖೆಯ ಪ್ರಕಾರ, ಕಲ್ಯಾಣ್‌ಗೆ ಡ್ರಗ್ಸ್ ಮಾರಾಟ ಮಾಡಲು ಉಳಿದ ನಾಲ್ವರು ಬಂದಿದ್ದರು. ಈ ಗ್ಯಾಂಗ್ ಸಿಗರೇಟ್‌ಗಳಲ್ಲಿ MDMA ಡ್ರಗ್ಸ್ ತುಂಬಿಸಿ ಮಾರಾಟ ಮಾಡುತ್ತಿತ್ತು. ಬಂಧಿತರಿಂದ 13 ಗ್ರಾಂ MDMA ಡ್ರಗ್, ಆರು ಮೊಬೈಲ್ ಫೋನ್‌ಗಳು ಮತ್ತು ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಈ ಸಂಬಂಧ ದಾವಣಗೆರೆಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿದ್ದ ಈ ಡ್ರಗ್ಸ್ ಜಾಲದ ಪತ್ತೆಯಿಂದ ನಗರದಲ್ಲಿ ಡ್ರಗ್ಸ್ ಪೆಡ್ಲರ್‌ಗಳಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

Source link

Leave a Reply

Your email address will not be published. Required fields are marked *