Headlines

Khushi Mukherjee: ‘ಹಾಯ್’​ ಹೇಳಲು 8 ಕೋಟಿ ಕೊಟ್ಟ ಅಭಿಮಾನಿ! ವಿಡಿಯೋ ಕಳಿಸಿ ಈಕೆ ಗಳಿಸಿದ್ದೆಷ್ಟು ನೋಡಿ… | Actress Khushi Mukherjee On Her App And How She Earned In Crores Suc

Khushi Mukherjee: ‘ಹಾಯ್’​ ಹೇಳಲು 8 ಕೋಟಿ ಕೊಟ್ಟ ಅಭಿಮಾನಿ! ವಿಡಿಯೋ ಕಳಿಸಿ ಈಕೆ ಗಳಿಸಿದ್ದೆಷ್ಟು ನೋಡಿ… | Actress Khushi Mukherjee On Her App And How She Earned In Crores Suc



ಕನಿಷ್ಠ ಬಟ್ಟೆ ತೊಟ್ಟು ಸದ್ಯ ಹಾಟ್​ ಟಾಪಿಕ್​ ಆಗಿರೋ ಬಾಲಿವುಡ್​ ನಟಿ ಖುಷಿ ಮುಖರ್ಜಿಗೆ ಹಾಯ್​, ಹಲೋ ಹೇಳಲು ಅಭಿಮಾನಿಯೊಬ್ಬ ಎಂಟು ಕೋಟಿ ರೂಪಾಯಿ ಕೊಟ್ಟಿದ್ನಂತೆ! ಈ ಬಗ್ಗೆ ನಟಿ ಹೇಳಿದ್ದೇನು ನೋಡಿ… 

ಹಿಂದೊಮ್ಮೆ ಆ್ಯಪ್​ ಮಾಡಿಕೊಂಡು ಅದರಲ್ಲಿ ವಿಡಿಯೋ ಮತ್ತು ಫೋಟೋ ಅಪ್​ಲೋಡ್​ ಮಾಡಿ ಒಂದೇ ಬಾರಿಗೆ 10 ಕೋಟಿ ರೂಪಾಯಿ ಸಂಪಾದನೆ ಮಾಡಿರುವುದಾಗಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಟ್ರೋಲ್​ಗೆ ಒಳಗಾಗುತ್ತಿರುವ ನಟಿ ಖುಷಿ ಮುಖರ್ಜಿ ಹೇಳಿದ್ದಾರೆ. ಇನ್​ಸ್ಟಾಗ್ರಾಮ್​ಗೆ ನೀಡಿರುವ ಸಂದರ್ಶನದಲ್ಲಿ ನಟಿ, ಈಗ ಇವೆಲ್ಲಾ ಮಾಮೂಲು, ಬಹುತೇಕ ನಟಿಯರು ಹೀಗೆ ಫೋಟೋ, ವಿಡಿಯೋ ಅಪ್​ಲೋಡ್ ಮಾಡುತ್ತಾರೆ. ಆದರೆ, ಆಗ ತುಂಬಾ ಕಡಿಮೆ ಜನ ಹೀಗೆ ಮಾಡುತ್ತಿದ್ದರು. ನಮ್ಮ ಫೋಟೋ, ವಿಡಿಯೋ ನೋಡಿ ಜನ ಹಣ ಕಳುಹಿಸುತ್ತಿದ್ದರು. ಅದನ್ನು ಅನ್​ಲಾಕ್​ ಮಾಡಲು ಹಣ ಹಾಕುತ್ತಿದ್ದರು. ಕೆಲವರಿಗೆ ನಮ್ಮ ಜೊತೆ ಮಾತನಾಡುವ ಆಸೆ ಇರುತ್ತಿತ್ತು. ಒಬ್ಬನೇ ವ್ಯಕ್ತಿ ವಿದೇಶದ ನನಗೆ 8 ಕೋಟಿ ಕೊಟ್ಟಿದ್ದಾನೆ ಎಂದು ನಟಿ ಖುಷಿ ಮುಖರ್ಜಿ ಹೇಳಿದ್ದಾರೆ. ಅಂಥವರಿಗೆ ಹಾಯ್​, ಹಲೋ ಹೇಳಿದ್ರೆ ಸಾಕು ಎಂದಿದ್ದಾರೆ. ವೆಬ್​ಸೀರಿಸ್​ನಲ್ಲಿ ಇವೆಲ್ಲಾ ಮಾಡಿ ಪ್ರತಿದಿನ ತುಂಬಾ ದುಡಿಯಬಹುದು, ಈಗ ಅವುಗಳಿಗೆ ಅವಕಾಶವಿದೆ ಎನ್ನುವ ಮೂಲಕ ನಟಿಯರು ಹೇಗೆಲ್ಲಾ ಸಂಪಾದನೆಯ ಹಾದಿ ಹಿಡಿಯುತ್ತಿದ್ದಾರೆ ಎನ್ನುವ ಬಗ್ಗೆ ಮಾತನಾಡಿದ್ದಾರೆ!

ಅಷ್ಟಕ್ಕೂ ನಟಿ ಖುಷಿ ಮುಖರ್ಜಿ ಕಳೆದ ಕೆಲವು ತಿಂಗಳುಗಳಿಂದ ಭಾರಿ ಸುದ್ದಿ ಮಾಡುತ್ತಿದ್ದಾರೆ. ಸಂಪೂರ್ಣ ದೇಹವನ್ನು ಕಾಣಿಸುವಂತೆ ಬಟ್ಟೆ ಧರಿಸಿ ಇಲ್ಲವೇ ಅರ್ಧಂಬರ್ಧ ಬಟ್ಟೆ ಧರಿಸಿ ಅದನ್ನು ಗಾಳಿಗೆ ಹಾರಲು ಬಿಟ್ಟು ಹಿಡಿದುಕೊಂಡಂತೆ ಮಾಡಿ… ಹೀಗೆ ಒಟ್ಟಿನಲ್ಲಿ ಪಾಪರಾಜಿಗಳಿಂದ ಫೇಮಸ್​ ಆಗುತ್ತಿದ್ದಾರೆ. ಗ್ಲಾಮರಸ್​ ಲೋಕಕ್ಕೆ ಬಂದ ಮೇಲೆ ಅದು ಬೇಡ, ಇದು ಬೇಡ ಎನ್ನಲು ಆಗಲ್ಲ. ಫೇಮಸ್​​ ಆಗ್ಬೇಕು ಎಂದೇ ಬಂದಿರುವಾಗ ಇದೆಲ್ಲಾ ಮಾಮೂಲು ಎನ್ನುತ್ತಲೇ ತಮ್ಮ ಡ್ರೆಸ್​ನಿಂದ ಇನ್ನಿಲ್ಲದಂತೆ ಟ್ರೋಲ್​​ ಆಗ್ತಿರೋ ನಟಿ ಖುಷಿ ಮುಖರ್ಜಿ ಓಪನ್ನಾಗಿಯೇ ಹಿಂದೊಮ್ಮೆ ಮಾತನಾಡಿದ್ದರು. ಸದಾ ದೇಹಪ್ರದರ್ಶನದಿಂದಲೇ ಫೇಮಸ್​ ಆಗಿರೋ ನಟಿ, ಇದೀಗ ಹಿಂಬದಿ ಹರಿದ ಜೀನ್ಸ್​ ಧರಿಸಿ ಪೋಸ್​ ಕೊಟ್ಟಿದ್ದರಿಂದ ಸದ್ದು ಮಾಡಿದ್ದೂ ಇದೆ. ಇದಾಗಲೇ ಅತೀ ಎನ್ನಿಸುವಷ್ಟು ದೇಹ ಪ್ರದರ್ಶನ ಮಾಡಿ ಸುದ್ದಿಯಾಗಿದ್ದರೂ, ಹರಿದ ಜೀನ್ಸ್​, ಕೊನೆಗೆ ಅತ್ಯಂತ ಕನಿಷ್ಠ ಬಟ್ಟೆ ತೊಟ್ಟು ಸದ್ದು ಮಾಡಿದ್ದರು.

ಈ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಬೋಲ್ಡ್​ ಆಗಿಯೇ ಉತ್ತರಿಸೋ ಖುಷಿ, ಗ್ಲಾಮರಸ್​ ಇಂಡಸ್ಟ್ರಿಗೆ ಬಂದ ಮೇಲೆ ಫೇಮಸ್​ ಆಗಬೇಕು ಎಂದು ಇದೆಲ್ಲಾ ಮಾಡಿದ್ರೆ ತಪ್ಪೇನಿಲ್ಲ ಎಂದಿದ್ದಾರೆ. ಊಟ ನಿಮ್ಮ ಇಚ್ಛೆಯಂತೆ ಮಾಡಿ, ಡ್ರೆಸ್​ ಬೇರೆಯವರ ಇಚ್ಛೆಯಂತೆ ಹಾಕಿಕೊಳ್ಳಿ ಎನ್ನುವ ಮಾತನ್ನು ನಾನು ಒಪ್ಪುವುದಿಲ್ಲ. ನನಗೆ ಇಷ್ಟಬಂದ ಡ್ರೆಸ್​ ಹಾಕುವ ಹಕ್ಕು ನನಗೆ ಇದೆ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ. ನೀವು ನನ್ನ ಬಗ್ಗೆ ಒಳ್ಳೆಯದ್ದೇ ಹೇಳಿ, ಕೆಟ್ಟದ್ದೇ ಹೇಳಿ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದೂ ಹೇಳಿದ್ದಾರೆ. ಅಷ್ಟಕ್ಕೂ ನಟಿ ಈ ಹಿಂದೆ ಬೇಕಾದಷ್ಟು ಬಾರಿ ಇಂಥ ಡ್ರೆಸ್​ ಹಾಕಿ, ಉದ್ದೇಶಪೂರ್ವಕವಾಗಿ ಆ ಡ್ರೆಸ್​ ಹಾರಿಹೋಗುವಂತೆ ಮಾಡಿ, ಪ್ರದರ್ಶನ ಮಾಡಿರೋದು ಇದೆ. ಈಗ ಅವುಗಳ ಬಗ್ಗೆ ಮಾತನಾಡಿದ್ದಾರೆ.

ಇನ್ನು ನಟಿಯ ಕುರಿತು ಹೇಳುವುದಾದರೆ, ಇವರು, ಬಹುಭಾಷಾ ನಟಿಯಾಗಿದ್ದು, ತೆಲುಗು, ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತಮಿಳಿನಲ್ಲಿ ‘ಅಂಜಲಾ ತುರಾಯ್‌’, ತೆಲುಗಿನ ಪೂರಿ ಜಗನ್ನಾಥ್ ನಿರ್ದೇಶನದ ‘ಹಾರ್ಟ್ ಎಟಾಕ್‌’, ತೆಲುಗಿನಲ್ಲೇ ‘ದೊಂಗ ಪ್ರೇಮ’ ಚಿತ್ರ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಲ ವರ್ಷಗಳ ಹಿಂದೆ ಬೆಂಗಳೂರಿಗೂ ಬಂದಿದ್ದ ನಟಿ ಕನ್ನಡದಲ್ಲಿ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದರು. ಪಾತ್ರಕ್ಕೆ ತಕ್ಕಂತೆ ಯಾವ ರೀತಿಯ ಡ್ರೆಸ್​ ಬೇಕಾದರೂ ಧರಿಸಲು ಸಿದ್ಧ ಎಂದಿದ್ದರು ಈ ಮುಂಬೈ ಬೆಡಗಿ! ಈ ಹಿಂದೆ ಇವರು ತಮಗೆ ಚಿತ್ರರಂಗದಲ್ಲಿ ಅವಕಾಶ ಸಿಕ್ಕ ಬಗೆಯನ್ನೂ ವಿವರಿಸಿದ್ದರು. ನನ್ನದು ಮಾಡೆಲಿಂಗ್ ವೃತ್ತಿ. ಮುಂಬೈ, ಬೆಂಗಳೂರು, ಹೈದರಾಬಾದ್, ಚೆನ್ನೈ ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ವಿವಿಧ ಶೋಗಳಲ್ಲಿ ಭಾಗವಹಿಸುತ್ತೇನೆ. ಹಲವು ಉತ್ಪನ್ನಗಳಲ್ಲೂ ಕಾಣಿಸಿಕೊಳ್ಳುತ್ತಿದ್ದೇನೆ. ಒಮ್ಮೆ ಹೈದರಾಬಾದ್‌ನಲ್ಲಿ ನಡೆದ ಫ್ಯಾಷನ್ ಶೋನಲ್ಲಿ ಭಾಗವಹಿಸಲು ಹೋಗಿದ್ದಾಗ ತೆಲುಗು ಚಿತ್ರದಲ್ಲಿ ನಟಿಸುವ ಅವಕಾಶ ಬಂತು ಎಂದಿದ್ದರು. ಐಟಂ ಸಾಂಗ್​ ಕೊಟ್ಟರೂ ರೆಡಿ, ಪಾತ್ರಕ್ಕಾಗಿ ಬಟ್ಟೆ ಬಿಚ್ಚಲೂ ರೆಡಿ ಎನ್ನುವ ಮಾತುಗಳನ್ನೂ ಆಡಿದ್ದರು ನಟಿ!

 

 



Source link

Leave a Reply

Your email address will not be published. Required fields are marked *