Headlines

15 ತಿಂಗಳ ಮಗುವನ್ನು ಬಸ್‌ ನಿಲ್ದಾಣದಲ್ಲಿ ಬಿಟ್ಟ ಇನ್ಸ್ಟಾಗ್ರಾಂ ಪ್ರೇಮಿಯ ಜೊತೆ ಓಡಿಹೋದ ತಾಯಿ | Telangana Mother Abandon Baby In Bus Stop For Instagram Lover Caught On Cctv

15 ತಿಂಗಳ ಮಗುವನ್ನು ಬಸ್‌ ನಿಲ್ದಾಣದಲ್ಲಿ ಬಿಟ್ಟ ಇನ್ಸ್ಟಾಗ್ರಾಂ ಪ್ರೇಮಿಯ ಜೊತೆ ಓಡಿಹೋದ ತಾಯಿ | Telangana Mother Abandon Baby In Bus Stop For Instagram Lover Caught On Cctv



15 ತಿಂಗಳ ಮಗುವನ್ನು ಬಸ್‌ ನಿಲ್ದಾಣದಲ್ಲಿ ಬಿಟ್ಟ ಇನ್ಸ್ಟಾಗ್ರಾಂ ಪ್ರೇಮಿಯ ಜೊತೆ ಓಡಿಹೋದ ತಾಯಿ | Telangana Mother Abandon Baby In Bus Stop For Instagram Lover Caught On Cctv

ನಲಗೊಂಡದಲ್ಲಿ 15 ತಿಂಗಳ ಮಗುವನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ತಾಯಿ ಪ್ರೇಮಿಯೊಂದಿಗೆ ಪರಾರಿಯಾದಂತಹ ಘಟನೆ ನಡೆದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ನಲಗೊಂಡ: 15 ತಿಂಗಳ ಗಂಡು ಮಗುವನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ತಾಯಿಯೊಬ್ಬಳು ತನ್ನ ಪ್ರೇಮಿಯ ಜೋತೆ ಓಡಿ ಹೋದಂತಹ ಅಮಾನವೀಯ ಘಟನೆ ತೆಳಂಗಾಣದ ನಲಗೊಂಡದಲ್ಲಿ ನಡೆದಿದೆ. ಘಟನೆಯ ಸಂಪೂರ್ಣ ದೃಶ್ಯಾವಳಿ ಬಸ್‌ ನಿಲ್ದಾಣದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವೀಡಿಯೋ ನೋಡಿದ ಅನೇಕರು ಹೀಗೆ ತಾನೆ ಹೆತ್ತ ಪುಟ್ಟ ಮಗುವನ್ನು ನಡುಬೀದಿಯಲ್ಲಿ ಬಿಟ್ಟು ಹೋಗಿ, ಅಮ್ಮನೆಂಬ ಮಮತೆಯ ಸ್ಥಾನಕ್ಕೆ ಕಳಂಕ ತಂದ ಮಹಿಳೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವೀಡಿಯೋದಲ್ಲಿ ಕಾಣುವಂತೆ ಬಸ್‌ ನಿಲ್ದಾಣದಲ್ಲಿ ಜನರಿರುವಾಗಲೇ ಮಹಿಳೆ ಈ ಕೃತ್ಯವೆಸಗಿದ್ದಾಳೆ. ಮಗು ಅಳುವುದನ್ನು ಕೂಡ ಲೆಕ್ಕಿಸದೇ ಮಗುವನ್ನು ತಾಯಿ ಬಸ್‌ ನಿಲ್ದಾಣದಲ್ಲಿ ಬಿಟ್ಟು ಓಡಿ ಹೋಗಿದ್ದಾಳೆ. ಇತ್ತ ಮಗುವಿನ ಅಳುಕಂಡ ಅಲ್ಲೇ ಇದ್ದ ಸಾರ್ವಜನಿಕರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಹೀಗೆ ಮಗುವನ್ನು ನಡುರಸ್ತೆಯಲ್ಲಿ ಬಿಟ್ಟು ಹೋದ ತಾಯಿಗೆ ಇನ್ಸ್ಟಾಗ್ರಾಮ್ ಮೂಲಕ ಯುವಕನೋರ್ವ ಪರಿಚಯವಾಗಿ ಪ್ರೀತಿಯಾಗಿದ್ದು, ಅತನಿಗಾಗಿ ಈಕೆ ಹಾಲುಗಲ್ಲದ ಕಂದ ಹಾಗೂ ಗಂಡನನ್ನು ಬಿಟ್ಟು ಹೋಗುವುದಕ್ಕೆ ರೆಡಿಯಾಗಿದ್ದಾಳೆ.

ಪ್ರೇಮಿಗಾಗಿ 15 ತಿಂಗಳ ಮಗುವನ್ನು ತೊರೆದ ಮಹಿಳೆ

ಹಾಗೆಯೇ ಇಬ್ಬರನ್ನು ಬಿಟ್ಟು ಹೋಗುವುದಕ್ಕೆ ನಿರ್ಧರಿಸಿದ ಆಕೆ ಮಗುವನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ತನ್ನ ಇನಿಯನ ಜೊತೆ ಬೈಕ್‌ನಲ್ಲಿ ಪರಾರಿಯಾಗಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಟುಟೌನ್ ಎಸ್‌ಐ ವಿ. ಸೈದುಲು ಮಾತನಾಡಿದ್ದು, ಹೈದರಾಬಾದ್‌ ಮೂಲದ ನವೀನಾ ಎಂಬ ವಿವಾಹಿತ ಮಹಿಳೆ ತನ್ನ 15 ತಿಂಗಳ ಮಗು ಧನುಷ್‌ನನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ನಲ್ಗೊಂಡ ಓಲ್ಡ್‌ ಸಿಟಿಯ ಯುವಕನೊಂದಿಗೆ ಬೈಕ್‌ನಲ್ಲಿ ಪರಾರಿಯಾಗಿದ್ದಾಳೆ. ಪ್ರಾಥಮಿಕ ತನಿಖೆಯಲ್ಲಿ ಇವರಿಬ್ಬರಿಗೆ ಸಂಬಂಧವಿದ್ದು, ಹೀಗಾಗಿ ಆಕೆ ಗಂಡ ಮಗುವನ್ನು ಬಿಟ್ಟು ಹೋಗುವುದಕ್ಕೆ ನಿರ್ಧರಿಸಿದ್ದಳು ಎಂದು ಹೇಳಿದ್ದಾರೆ.

ಬೈಕ್‌ನಲ್ಲಿ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬಸ್ ನಿಲ್ದಾಣದ ಸಿಸಿಟಿವಿಯಲ್ಲಿ ಈ ದೃಶ್ಯ ರೆಕಾರ್ಡ್ ಆಗಿದ್ದು, ನವೀನಾ ತನ್ನ ಮಗನನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗುತ್ತಿರುವುದು ಕಾಣುತ್ತಿದೆ. ಜೊತೆಗೆ ಆಕೆ ಬೈಕ್ ಹಿಂದೆ ಕುಳಿತು ಹೋಗುತ್ತಿರುವ ದೃಶ್ಯವೂ ಸೆರೆಯಾಗಿದೆ. ಹಾಗೆಯೇ ಮಗು ಅಮ್ಮ ಹೋಗಿದ್ದನ್ನು ನೋಡಿ ಮಮ್ಮಿ ಎಂದು ಕರೆಯುವುದು ಕೂಡ ರೆಕಾರ್ಡ್ ಆಗಿದೆ ಎಂದುವ ವರದಿಯಾಗಿದೆ.

ಇನ್ಸ್ಟಾಗ್ರಾಂ ಲವರ್‌ಗಾಗಿ ಗಂಡ, ಮಗನ ತೊರೆದ ತಾಯಿ

ಹೀಗಾಗಿ ಸಿಸಿಟಿವಿ ದೃಶ್ಯಾವಳಿಯನ್ನು ಗಮನಿಸಿ ಆ ಬೈಕ್‌ನ ಮಾಲೀಕರನ್ನು ಪೊಲೀಸರು ಪತ್ತೆ ಹಚ್ಚಿದಾಗ ಮಹಿಳೆಯ ಗೆಳೆಯ ತನ್ನ ಸ್ನೇಹಿತನಾಗಿದ್ದು, ಆತ ತನ್ನ ಬಳಿ ಬೈಕ್ ಕೇಳಿದ್ದ ಎಂದು ಅವರು ಪೊಲೀಸರಿಗೆ ಹೇಳಿದ್ದಾರೆ. ಹಾಗಾಗಿ ಹೆಚ್ಚಿನ ತನಿಖೆ ನಡೆಸಿದ ಪೊಲೀಸರಿಗೆ ಇವರಿಬ್ಬರಿಗೂ ಇನ್ಸ್ಟಾಗ್ರಾಂನಲ್ಲಿ ಪ್ರೀತಿಯಾಗಿದ್ದು, ಆತನ ಗೆಳೆತನಕ್ಕಾಗಿ ಮಹಿಳೆ ಮಗುವನ್ನು ತೊರೆದಿರುವ ವಿಚಾ ಗೊತ್ತಾಗಿದೆ.

ನಂತರ ಕಾರ್ಯಾಚರಣೆಗೆ ಇಳಿದ ಪೊಲೀಸರು ಮಹಿಳೆ ಹಾಗೂ ಆಕೆಯ ಲವ್ವರ್ ಹಾಗೂ ಪತಿಯನ್ನು ಪೊಲೀಸ್ ಠಾಣೆಗೆ ಕರೆಸಿ ಅವರಿಗೆ ಕೌನ್ಸೆಲಿಂಗ್ ನಡೆಸಿದ್ದಾರೆ. ನಂತರ ಮಗುವನ್ನು ತಂದೆಯ ಸುಪರ್ದಿಗೆ ನೀಡಲಾಗಿದೆ. ಒಟ್ಟಿನಲ್ಲಿ ಮಕ್ಕಳಿಲ್ಲದ ದಂಪತಿ ಒಂದು ಮಗು ಪಡೆಯುವುದಕ್ಕಾಗಿ ಆಸ್ಪತ್ರೆಗಳಿಗೆ ಲಕ್ಷಾಂತರ ರೂ ವೆಚ್ಚ ಮಾಡುವುದರ ಜೊತೆ ದೇಗುಲ ತೀರ್ಥಕ್ಷೇತ್ರ ಅಂತ ಸುತ್ತಾಡ್ತಿದ್ರೆ ಇಲ್ಲಿ ಮಗು ಹೆತ್ತಿರುವ ಮಹಿಳೆ ಮಗುವನ್ನೇ ಬಸ್ ನಿಲ್ದಾಣದಲ್ಲಿ ತೊರೆದು ಹೋಗಿರುವುದು ಆಘಾತ ಮೂಡಿಸಿದೆ.

 

 

 



Source link

Leave a Reply

Your email address will not be published. Required fields are marked *