ಯಶ್ ರಾವಣನಾಗಿ, ರಣಬೀರ್ ಕಪೂರ್ ಶ್ರೀರಾಮನಾಗಿ ಕಾಣಿಸಿಕೊಂಡಿರುವ ರಾಮಾಯಣ ಸಿನಿಮಾದ ಮೊದಲ ವಿಡಿಯೋ ರಿಲೀಸ್ ಆಗಿದೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದಂತೆ, ಟಿ-ಸಿರೀಸ್ ಆದಿಪುರುಷ್ ಸಾಂಗ್ ರಿಲೀಸ್ ಮಾಡಿದೆ. ಇದು ಯಶ್ ಅಭಿಮಾನಿಗಳನ್ನು ಕೆರಳಿಸಿದೆ.
ಮುಂಬೈ (ಜು.03) ಬಹು ನಿರೀಕ್ಷಿತ ರಾಮಾಯಾಣ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಯಶ್, ರಣಬೀರ್ ಕಪೂರ್, ಸಾಯಿ ಪಲ್ಲವಿ ಸೇರಿದಂತೆ ಸ್ಟಾರ್ ಸೆಲೆಬ್ರೆಟಿಗಳ ಬಹು ನಿರೀಕ್ಷಿತ ಪೌರಾಣಿಕ ಸಿನಿಮಾ ರಾಮಾಯಣದ ಈ ವಿಡಿಯೋಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶ್ರೀರಾಮನಾಗಿ ರಣಬೀರ್ ಕಪೂರ್ ಹಾಗೂ ರಾವಣನಾಗಿ ಯಶ್ ನಡುವಿನ ಸಂಘರ್ಷದ ಚಿತ್ರಣವನ್ನೂ ಈ ಫಸ್ಟ್ ಲುಕ್ ವಿಡಿಯೋ ನೀಡುತ್ತಿದೆ. ಭಾರಿ ನಿರೀಕ್ಷೆ ಹುಟ್ಟು ಹಾಕಿದ್ದ ರಾಮಾಯಣದ ಈ ವಿಡಿಯೋ ಲಕ್ಷಾಂತರ ವೀಕ್ಷಣೆ ಕಂಡಿದೆ. ಆದರೆ ಇದರ ಬೆನ್ನಲ್ಲೇ ಟಿ-ಸೀರಿಸ್ ಪ್ರಭಾಸ್ ಅಭಿನಯದ ಆದಿಪುರುಷ್ ಸಿನಿಮಾದ ಸಾಂಗ್ ರಿಲೀಸ್ ಮಾಡಿದೆ. ಇದು ಟಿ ಸಿರೀಸ್ ಹೊಟ್ಟೆ ಕಿಚ್ಚಿನಿಂದ ಮಾಡಿದ ಕೆಲಸ. ಯಶ್ ಅವತಾರದ, ಜನಪ್ರಿಯತೆ ಸಹಿಸದ ಟಿ ಸೀರಿಸ್ ಇದೇ ಸಮಯತಲ್ಲಿ ಸಾಂಗ್ ರಿಲೀಸ್ ಮಾಡಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ತಿರುಗೇಟು ನೀಡಿದ್ದಾರೆ.
ಮೊದಲೆ ನಿರ್ಧರಿಸಿದಂತೆ ರಾಮಾಯಣ ಫಸ್ಟ್ ಲುಕ್ ರಿಲೀಸ್
ನಮಿತ್ ಮಲ್ಹೋತ್ರ ಹಾಗೂ ನಿತೀಶ್ ತಿವಾರಿ ಇಂದು (ಜು.03) ರಾಮಾಯಣದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ. ಜುಲೈ 3 ರಂದು ರಾಮಾಯಣ ಗ್ಲಿಂಪ್ಸ್ ವಿಜಿಯೋ ಬಿಡುಗಡೆಯಾಗಲಿದೆ ಎಂದು ಮೊದಲೇ ಘೋಷಣೆ ಮಾಡಲಾಗಿತ್ತು. ಇದರಂತೆ ರಾಮಯಾಣ ವಿಡಿಯೋ ಬಿಡುಗಡೆಯಾಗಿದೆ. ಈ ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಹಿಂದೂ ಧರ್ಮ ಅಸ್ಮಿತೆಯ ಪ್ರತೀಕವಾಗಿರುವ ಶ್ರೀರಾಮನನ್ನು ತೆರೆ ಮೇಲೆ ಅತ್ಯಂತ ಸೂಕ್ಷ್ಮವಾಗಿ ಚಿತ್ರಿಸಲಾಗಿದೆ. ಹೀಗಾಗಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಇದೇ ಸಂದರ್ಭವನ್ನು ಬಳಸಿಕೊಂಡ ಟಿ ಸೀರಿಸ್ 2023ರಲ್ಲಿ ಬಿಡುಗಡೆಯಾದ ಆದಿಪುರುಷ್ ಸಿನಿಮಾದ ರಾಮಾಯಣ ಹಾಡನ್ನು ರಿಲೀಸ್ ಮಾಡಿದೆ.
ಪ್ರಭಾಸ್ ಅಭಿನಯದ ಆದಿಪುರುಷ್ ಬಿಡುಗಡೆಯಾದ ಭಾರಿ ವಿರೋಧ ವ್ಯಕ್ತವಾಗಿತ್ತು. ಚಿತ್ರದ ಡೈಲಾಗ್, ಸೀನ್ ಸೇರಿದಂತೆ ಹಲವು ವಿಚಾರಗಳು ಭಾರಿ ವಿರೋಧಕ್ಕೆ ಕಾರಣವಾಗಿತ್ತು. ಇದೀಗ ಟಿ ಸಿರೀಸ್ ರಾಮಾಯಣ ಸಿನಿಮಾ ಮೇಲೆ ಜನರು ಪ್ರೀತಿ ತೋರಿಸುತ್ತಿದ್ದಂತೆ ಆದಿಪುರುಷ್ ಸಾಂಗ್ ರಿಲೀಸ್ ಮಾಡಿದೆ. ರಾಮಾಯಾಣ ಸಿನಿಮಾದ ಫಸ್ಟ್ ಲುಕ್‌ನಲ್ಲೇ ಯಶ್ ಪ್ರಭಾವ ಸ್ಪಷ್ಟವಾಗಿದೆ. ಆದರೆ ಇದನ್ನು ಸಹಿಸದ ಟಿ ಸೀರಿಸ್ ಆದಿಪುರುಷ್ ಸಾಂಗ್ ರಿಲೀಸ್ ಮಾಡಿದೆ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.
ಸಿನಿಮಾಗೆ ಸಿಕ್ಕ ಪ್ರತಿಕ್ರಿಯೆಯಿಂದ ಆದಿಪುರುಷ್ ಕಂಗಾಲು
ಆದಿಪುರುಷ್ ಸಿನಿಮಾ ಬಿಡುಗಡೆಯಾದಾಗ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಅಪಸ್ವರ ಕೇಳಿಬಂದಿತ್ತು. ಚಿತ್ರದ ಸೀನ್ ಹಾಗೂ ಸಂಭಾಷಣೆ ವಿರುದ್ದ ಪ್ರತಿಭಟನೆಗಳು ನಡೆದಿತ್ತು. ಹೀಗಾಗಿ ಕೆಲ ಸೀನ್ ಹಾಗೂ ಸಂಭಾಷಣೆಗೆ ಕತ್ತರಿ ಹಾಕಬೇಕಾಗಿತ್ತು. ಆದಿಪುರುಷ ಭಾರಿ ಬಜೆಟ್ ಸಿನಿಮಾ ಆಗಿದ್ದರೂ ನಿರೀಕ್ಷಿತ ಗಳಿಕೆ ಕಂಡಿಲ್ಲ. ಇದೀಗ ಟಿ ಸೀರಿಸ್ ರಾಮಾಯಾಣ ಫಸ್ಟ್ ಲುಕ್ ನೆಪದಲ್ಲಿ ಮತ್ತೆ ಆದಿಪುರುಷ್ ಸಾಂಗ್ ರಿಲೀಸ್ ಮಾಡಿ ಜನರನ್ನು ದಾರಿ ತಪ್ಪಿಸುತ್ತಿದೆ. ರಾಮಾಯಣದ ಫಸ್ಟ್ ಲುಕ್ ಎಂದು ಇದೇ ಆದಿಪುರುಷ್ ಸಾಂಗ್ ನೋಡಲಿ ಎಂಬ ದುರುದ್ದೇಶ ಹಾಗೂ ಅತೀ ಆಸೆಯಿಂದ ಈ ರೀತಿ ಮಾಡಿದ್ದಾರೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ರಾಮಾಯಣ ಫಸ್ಟ್ ಲುಕ್ ಸಮಯದಲ್ಲೇ ಈ ವಿಡಿಯೋ ಬೇಕಿತ್ತಾ ಎಂದು ಹಲವರು ಪ್ರಶ್ನಿಸಿದ್ದಾರೆ. ಇದೀಗ ಟಿ ಸಿರೀಸ್ ನಡೆ ಭಾರಿ ಟೀಕೆಗೆ ಕಾರಣವಾಗಿದೆ.