ರಶ್ಮಿಕಾ ಮಂದಣ್ಣ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕೂರ್ಗ್ ಕಮ್ಯೂನಿಟಿಯಿಂದ ಬಂದ ಮೊದಲ ನಟಿ ನಾನೇ ಎನ್ನುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (National Crush Rashmika Mandanna) ಮತ್ತೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಗೊತ್ತಿಲ್ದೆ ಕಾಂಟ್ರವರ್ಸಿ ಮಾಡಿಕೊಳ್ತಾರಾ ಇಲ್ಲ ಪ್ರಸಿದ್ಧಿಗಾಗಿ ಕಾಂಟ್ರವರ್ಸಿ ಮಾಡ್ತಾರಾ ದೇವರೇ ಬಲ್ಲ. ಕರ್ನಾಟಕದಲ್ಲೇ ಹುಟ್ಟಿ, ಕನ್ನಡದಲ್ಲೇ ಮೊದಲ ಸಿನಿಮಾ ಮಾಡಿದ್ರೂ ತಮ್ಮ ಜನ, ಜಾತಿ ಬಗ್ಗೆ ರಶ್ಮಿಕಾಗೆ ಸಂಪೂರ್ಣ ಜ್ಞಾನ ಇದ್ದಂತೆ ಕಾಣ್ತಿಲ್ಲ. ಸ್ಯಾಂಡಲ್ ವುಡ್ ಕಲಾವಿದರ ಬಗ್ಗೆಯೂ ರಶ್ಮಿಕಾ ಅಜ್ಞಾನ ಹೊಂದಿದ್ದಾರೆ ಅನ್ನೋದು ಈ ಮಾತಿನಿಂದ ಸ್ಪಷ್ಟವಾಗ್ತಿದೆ. ಅಷ್ಟಕ್ಕೂ ರಶ್ಮಿಕಾ ಮಾಡಿದ್ದು ಏನು ಅಂದ್ರಾ?
ವಿ ದಿ ವುಮೆನ್ (We The Women) ಸಂದರ್ಶನದಲ್ಲಿ ಪಾಲ್ಗೊಂಡಿದ್ದ ರಶ್ಮಿಕಾ ಮಂದಣ್ಣ ಹೇಳಿಕೆಯೊಂದು ಈಗ ಚರ್ಚೆ ಹುಟ್ಟುಹಾಕಿದೆ. ರಶ್ಮಿಕಾ ಮಂದಣ್ಣ, ಕೂರ್ಗ್ ಕಮ್ಯುನಿಟಿಯಿಂದ ಯಾರೂ ಸಿನಿಮಾಕ್ಕೆ ಬಂದಿರಲಿಲ್ಲ. ನಾನೇ ಮೊದಲು ಅಂತ ಹೇಳಿಕೆ ನೀಡಿದ್ದಾರೆ. ಇದು ಕನ್ನಡಿಗರನ್ನು ಕೆರಳಿಸಿದೆ. ರಶ್ಮಿಕಾ ಮಂದಣ್ಣ ಸಿನಿಮಾಕ್ಕೆ ಎಂಟ್ರಿ ಆಗೋ ಮುನ್ನ ಕೂರ್ಗ್ ಕಮ್ಯೂನಿಟಿಯ ಅನೇಕರು ಸಿನಿಮಾ ರಂಗದಲ್ಲಿ ಸಾಧನೆ ಮಾಡಿದ್ದಾರೆ. ಅದ್ರಲ್ಲಿ ನಟಿ ಪ್ರೇಮಾ, ಹರ್ಷಿಕಾ ಪೂಣಚ್ಚ, ನಿಧಿ ಸುಬ್ಬಯ್ಯ, ಡೈಸಿ ಬೋಪಣ್ಣ, ಗುಲ್ಶನ್ ದೇವಯ್ಯ ಸೇರಿದ್ದಾರೆ. ಇದಲ್ಲದೆ ಕಿರುತೆರೆಯಲ್ಲಿ ಅನೇಕ ಕಲಾವಿದರಿದ್ದಾರೆ. ಆದ್ರೆ ರಶ್ಮಿಕಾ ಮಂದಣ್ಣ ಮಾತ್ರ ಈವರೆಗೆ ಯಾರೂ ಬಂದಿರಲಿಲ್ಲ ಎನ್ನುವ ಹೇಳಿಕೆ ನೀಡಿ ಕೋಪಕ್ಕೆ ಗುರಿಯಾಗಿದ್ದಾರೆ.
ರಶ್ಮಿಕಾ ಎಲ್ಲೂ, ಹಿಂದಿ ಸಿನಿಮಾ ರಂಗಕ್ಕೆ ಬಂದ ಅಥವಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರಸಿದ್ಧಿ ಪಡೆದ ಕೂರ್ಗ್ ಸಮುದಾಯದ ಮೊದಲ ನಟಿ ಅಂತ ಹೇಳಿಕೊಳ್ದೆ ಕೂರ್ಗ ಕಮ್ಯುನಿಟಿಯಿಂದ ಬಂದ ಮೊದಲ ನಟಿ ಎಂದಿರೋದು ಕಾಂಟ್ರವರ್ಸಿ ಕ್ರಿಯೇಟ್ ಮಾಡಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಕನ್ನಡ ಸಿನಿಮಾ ಬಲ್ಲ ಪ್ರತಿಯೊಬ್ಬರೂ ಇದನ್ನು ವಿರೋಧಿಸಿದ್ದಾರೆ. ರಶ್ಮಿಕಾ ಮಂದಣ್ಣ ನಾಟಕ ಮಾಡ್ತಾರೆ. ಪ್ರಸಿದ್ಧ ನಟಿ ಪ್ರೇಮಾ ಇವರಿಗೆ ಗೊತ್ತಿಲ್ವಾ ಅಂತ ಪ್ರಶ್ನೆ ಮಾಡಿದ್ದಾರೆ. ದೊಡ್ಡ ಚಾನೆಲ್ ಗಳಲ್ಲಿ ಮಾತನಾಡುವಾಗ ಹೆಚ್ಚಿನ ನಾಲೇಜ್ ಇರ್ಬೇಕು. ಜ್ಞಾನವಿಲ್ಲದೆ ಬಂದು ಕುಳಿತ್ರೆ ಹೀಗೆ ಆಗೋದು ಎಂದ ನೆಟ್ಟಿಗರು, ಕೂರ್ಗ್ ಕಮ್ಯೂನಿಟಿಯಿಂದ ಬಂದ ಕಲಾವಿದರ ಪಟ್ಟಿಯನ್ನೇ ನೀಡಿದ್ದಾರೆ.
ಇನ್ನು ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ, ಅನೇಕ ವಿಷ್ಯಗಳನ್ನು ಹಂಚಿಕೊಂಡಿದ್ದಾರೆ. ರಶ್ಮಿಕಾ ತಮ್ಮ ಮೊದಲ ಸಂಬಳವನ್ನು ಅಪ್ಪ – ಅಮ್ಮನಿಗೆ ನೀಡಿದ್ರಂತೆ. ಹಣವನ್ನು ಹೇಗೆ ಹೂಡಿಕೆ ಮಾಡ್ಬೇಕು, ಏನು ಮಾಡ್ಬೇಕು ಎನ್ನುವ ಜ್ಞಾನ ನನಗಿರಲಿಲ್ಲ. ಅಪ್ಪ ಅಮ್ಮ ಎಲ್ಲವನ್ನೂ ನೋಡಿಕೊಳ್ತಿದ್ದರು. ಹಾಗಾಗಿ ಅವರಿಗೆ ನೀಡಿದ್ದೆ ಎಂದ ರಶ್ಮಿಕಾ ಮಂದಣ್ಣ, ಒಂದು ಸಿನಿಮಾ ಮಾತ್ರ ಮಾಡೋ ಪ್ಲಾನ್ ನಲ್ಲಿ ಇದ್ರು. ಆಡಿಷನ್ ಬಗ್ಗೆ ಪಾಲಕರಿಗೆ ಹೇಳ್ದೆ ಬಂದಿದ್ದ ರಶ್ಮಿಕಾ, ಆ ಟೈಂನಲ್ಲಿ ನಾನು ಆಕ್ಟಿಂಗ್ ಬಯಸಿರಲಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ, ಹಿಂದೆ, ದಕ್ಷಿಣ ಭಾರತದ ಕುಟುಂಬಗಳಲ್ಲಿ ಸಿನಿಮಾ ಮಾಡೋದನ್ನು ತಪ್ಪಾಗಿ ಪರಿಗಣಿಸಲಾಗ್ತಿತ್ತು. ಅವರಿಗೆ ಇಂಡಸ್ಟ್ರಿ ಹೇಗೆ ಕೆಲಸ ಮಾಡುತ್ತೆ ಅನ್ನೋದು ಅರ್ಥವಾಗಿರಲಿಲ್ಲ ಎಂದು ರಶ್ಮಿಕಾ ಹೇಳಿದ್ದಾರೆ.
ರಶ್ಮಿಕಾ ಮಂದಣ್ಣ ಸ್ಮೋಕಿಂಗ್ ಬಗ್ಗೆಯೂ ಹೇಳಿದ್ದಾರೆ. ಸಿನಿಮಾವನ್ನು ಸಿನಿಮಾ ಆಗಿ ನೋಡ್ತೆನೆ. ನಾನು ಸ್ಮೋಕಿಂಗ್ ಇಷ್ಟಪಡೋದಿಲ್ಲ. ಸಿನಿಮಾದಲ್ಲಿ ಕೂಡ ಸ್ಮೋಕಿಂಗ್ ಮಾಡು ಅಂದ್ರೆ ನಾನೂ ಮಾಡೋದಿಲ್ಲ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ದೀಪಿಕಾ – ವಂಗಾ ವಿವಾದದ ಬಗ್ಗೆಯೂ ಮಾತನಾಡಿದ ರಶ್ಮಿಕಾ, ಇದು ಕಲಾವಿದರು ಮತ್ತು ನಿರ್ದೇಶಕರಿಗೆ ಸಂಬಂಧಿಸಿದ್ದು. ಇದ್ರ ಬಗ್ಗೆ ಪ್ರತಿಯೊಬ್ಬರೂ ತಮ್ಮ ತಂಡದ ಜೊತೆ ಓಪನ್ ಆಗಿ ಮಾತನಾಡ್ಬೇಕು ಎಂದಿದ್ದಾರೆ. ಹಿಂದಿ, ತೆಲುಗು, ತಮಿಳು ಚಿತ್ರದಲ್ಲಿ ಬ್ಯುಸಿ ಇರುವ ನಟಿ ರಶ್ಮಿಕಾ, ಅತಿ ಹೆಚ್ಚು ಸಂಬಳ ಪಡೆಯುವ ಭಾರತದ ನಟಿಯರಲ್ಲಿ ಒಬ್ಬರಾಗಿದ್ದಾರೆ.