ಅಮ್ಮನ ಕಾಯಿಲೆನ ಕೆಲವೇ ಸೆಕೆಂಡ್‌ನಲ್ಲಿ ಕಂಡುಹಿಡಿದ ChatGPT; ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಮಗಳು | Chatgpt Saved My Mom Says Indian Woman

ಅಮ್ಮನ ಕಾಯಿಲೆನ ಕೆಲವೇ ಸೆಕೆಂಡ್‌ನಲ್ಲಿ ಕಂಡುಹಿಡಿದ ChatGPT; ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಮಗಳು | Chatgpt Saved My Mom Says Indian Woman



ಮಹಿಳೆಯೊಬ್ಬರು OpenAI ನ ChatGPT ತನ್ನ ತಾಯಿಯ ಜೀವ ಉಳಿಸಲು ಹೇಗೆ ಸಹಾಯ ಮಾಡಿತು ಎಂಬುದರ ಕುರಿತು X ನಲ್ಲಿ ಭಾವನಾತ್ಮಕ ಪೋಸ್ಟ್ ಶೇರ್ ಮಾಡಿದ್ದಾರೆ.

AI ಮತ್ತು ChatGPT ಬಗ್ಗೆ ಚರ್ಚೆಯಾಗುತ್ತಿರುವುದು ಇದೇ ಮೊದಲಲ್ಲ. ಆದರೆ ಮತ್ತೊಮ್ಮೆ ಇದಕ್ಕೆ ಸಂಬಂಧಿಸಿದ ಒಂದು ವಿಶಿಷ್ಟ ಪ್ರಕರಣ ಬೆಳಕಿಗೆ ಬಂದಿದೆ. ಏಕೆಂದರೆ ಇತ್ತೀಚೆಗೆ ಮಹಿಳೆಯೊಬ್ಬರು OpenAI ನ ChatGPT ತನ್ನ ತಾಯಿಯ ಜೀವ ಉಳಿಸಲು ಹೇಗೆ ಸಹಾಯ ಮಾಡಿತು ಎಂಬುದರ ಕುರಿತು X ನಲ್ಲಿ ಭಾವನಾತ್ಮಕ ಪೋಸ್ಟ್ ಶೇರ್ ಮಾಡಿದ್ದಾರೆ.

ಪೋಸ್ಟ್ ಪ್ರಕಾರ, ಶ್ರೇಯಾ ಅವರ ತಾಯಿ 1 ವರ್ಷಕ್ಕೂ ಹೆಚ್ಚು ಕಾಲ ಕೆಮ್ಮಿನಿಂದ ಬಳಲುತ್ತಿದ್ದರು. ಅವರು ಅನೇಕ ವೈದ್ಯರನ್ನು ಸಂಪರ್ಕಿಸಿದರು, ಅಲೋಪತಿ, ಹೋಮಿಯೋಪತಿ ಮತ್ತು ಆಯುರ್ವೇದ ಸೇರಿದಂತೆ ಹಲವು ರೀತಿಯ ಚಿಕಿತ್ಸೆಯನ್ನು ಪಡೆದರು, ಆದರೆ ಯಾವುದೇ ಪರಿಹಾರ ಸಿಗಲಿಲ್ಲ. ಮುಂದಿನ 6 ತಿಂಗಳಲ್ಲಿ ತಾಯಿಯ ಸ್ಥಿತಿ ಸುಧಾರಿಸದಿದ್ದರೆ, ಅದು ಮಾರಕವಾಗಬಹುದು ಎಂದು ವೈದ್ಯರು ಎಚ್ಚರಿಸಿದ್ದರು.

ಕೊನೆಗೆ ಯಾವುದೇ ಪರಿಹಾರ ಸಿಗದಿದ್ದಾಗ ಮಹಿಳೆ ChatGPT ಸಹಾಯ ಪಡೆದು ತನ್ನ ತಾಯಿಯ ಲಕ್ಷಣಗಳ ಬಗ್ಗೆ ಬೋಟ್‌ಗೆ ಹೇಳಿದಳು. ಚಾಟ್‌ಬಾಟ್ ಸಂಭವನೀಯ ಕಾರಣಗಳ ಪಟ್ಟಿ ನೀಡಿತು. ಇದರಿಂದ ತಿಳಿದು ಬಂದದ್ದೇನೆಂದರೆ ಆಕೆಯ ತಾಯಿ ರಕ್ತದೊತ್ತಡದ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದು, ಅದು ಸಂಭಾವ್ಯ ಅಡ್ಡಪರಿಣಾಮ(Possible side effect)ಗಳನ್ನು ಉಂಟುಮಾಡಿರಬಹುದು ಎಂದು ತಿಳಿದುಬಂದಿದೆ.

ನಂತರ ಮಹಿಳೆ ತನ್ನ ವೈದ್ಯರಿಗೆ ಈ ಬಗ್ಗೆ ತಿಳಿಸಿ, ಔಷಧವನ್ನು ಬದಲಾಯಿಸಿದ್ದಾಳೆ. ನಂತರ ಆಕೆಯ ತಾಯಿಯ ಸ್ಥಿತಿ ಕ್ರಮೇಣ ಸುಧಾರಿಸಲು ಪ್ರಾರಂಭಿಸಿದೆ. ಕೊನೆಗೆ ಮಹಿಳೆ ತನ್ನ ತಾಯಿಯ ಜೀವವನ್ನು ಉಳಿಸಿದ ಕೀರ್ತಿಯನ್ನು ChatGPT ಗೆ ನೀಡಿ, ತನ್ನ ತಾಯಿಯ ಅನಾರೋಗ್ಯದ ಕಾರಣವನ್ನು ತಿಳಿದುಕೊಳ್ಳುವಲ್ಲಿ ಚಾಟ್‌ಬಾಟ್‌ನ ಪಾತ್ರವನ್ನು ಪ್ರಮುಖವೆಂದು ವಿವರಿಸಿದ್ದಾರೆ.

ಶ್ರೇಯಾ X ನಲ್ಲಿ ಬರೆದಿರುವ ಪ್ರಕಾರ, “ನನಗೆ ತುಂಬಾ ಭಯವಾಯಿತು. ಹತಾಶೆಯಿಂದ ನಾನು ChatGPTಗೆ ಎಲ್ಲವನ್ನೂ ಹೇಳಿದೆ. ChatGPT ನನಗೆ ಹಲವಾರು ಕಾರಣಗಳನ್ನು ಹೇಳಿತು. ಅದರಲ್ಲಿ ಒಂದು ರಕ್ತದೊತ್ತಡ ಔಷಧಿ. ನಿಜ ಹೇಳಬೇಕೆಂದರೆ ಆ ಬಗ್ಗೆ ನಾವು ಎಂದಿಗೂ ಯೋಚಿಸಿರಲ್ಲ. ChatGPT “ತಾಯಿ ಈ ಪದಾರ್ಥದೊಂದಿಗೆ ರಕ್ತದೊತ್ತಡ ಔಷಧಿ ತೆಗೆದುಕೊಳ್ಳುತ್ತಿದ್ದಾರೆಯೇ?” ಎಂದು ಪ್ರಶ್ನಿಸಿತು. ಜೊತೆಗೆ ಇದು ಸಹ ಕಾರಣವಾಗಿರಬಹುದು ಎಂದು ಸೂಚಿಸಿತು. ನಂತರ ನಾವು ವೈದ್ಯರಿಗೆ ಹೇಳಿದೆವು. ಅವರು ತಕ್ಷಣ ಅದನ್ನು ಕನ್‌ಫರ್ಮ್ ಮಾಡಿದರು. ಕೊನೆಗೆ ಔಷಧಿಯನ್ನು ಬದಲಾಯಿಸಿದರು. ನನ್ನ ತಾಯಿ ಈಗ ಚೆನ್ನಾಗಿದ್ದಾರೆ. ಉತ್ಪ್ರೇಕ್ಷೆ ಮಾಡಲು ಅಲ್ಲ, ಆದರೆ ChatGPT ತಾಯಿಯ ಜೀವವನ್ನು ಉಳಿಸಿತು.”

ಇದಾದ ನಂತರ ಜನರು ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದು, ಶ್ರೇಯಾ ಅವರ ತಾಯಿಯ ಜೀವವನ್ನು ಉಳಿಸುವಲ್ಲಿ ಚಾಟ್‌ಜಿಪಿಟಿಯ ಪಾತ್ರವನ್ನು ಶ್ಲಾಘಿಸಿದ್ದಾರೆ. ಜೊತೆಗೆ ರೋಗವನ್ನು ಪತ್ತೆಹಚ್ಚಲು ಅವರು ಹೆಚ್ಚಿನ ಕೆಲಸ ಮಾಡಬೇಕಾಗಿತ್ತು ಎಂದು ಹೇಳುತ್ತಾ ವೈದ್ಯರನ್ನು ಸಹ ಟೀಕಿಸಿದ್ದಾರೆ. ಮತ್ತೆ ಕೆಲವು ಬಳಕೆದಾರರು ಚಾಟ್‌ಜಿಪಿಟಿಯ ಈ ವೈಶಿಷ್ಟ್ಯವು ವೈದ್ಯರ ಕೆಲಸವನ್ನು ಕಸಿದುಕೊಳ್ಳಬಹುದು ಎಂದು ತಮಾಷೆ ಮಾಡಿದ್ದಾರೆ. ಹೆಚ್ಚಿನ ನೆಟ್ಟಿಗರು ಈ ರೀತಿ ಪ್ರತಿಕ್ರಿಯಿಸಿದ್ದು, ಇಲ್ಲಿದೆ ನೋಡಿ ವಿವರ…

“ಅದ್ಭುತ, ಇದರರ್ಥ ಭವಿಷ್ಯದಲ್ಲಿ AI ಕಾರಣದಿಂದಾಗಿ ವೈದ್ಯರು ನಿರುದ್ಯೋಗಿಗಳಾಗಬಹುದು. ರೋಗ ಗುರುತಿಸುವಿಕೆ ಮುಂತಾದ ವೈದ್ಯರ ಕೆಲವು ಕೆಲಸಗಳನ್ನು AI ಉತ್ತಮವಾಗಿ ಮಾಡಬಹುದು”.

“ನಿಮ್ಮ ತಾಯಿ ಈಗ ಗುಣಮುಖರಾಗುತ್ತಿದ್ದಾರೆ ಎಂದು ನನಗೆ ತುಂಬಾ ಸಂತೋಷವಾಗಿದೆ. ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಇದು ವೈದ್ಯಕೀಯ ಸೇವೆಯಲ್ಲಿನ ದೊಡ್ಡ ಸಮಸ್ಯೆಯನ್ನು ಎತ್ತಿ ತೋರಿಸುತ್ತದೆ. ಕೆಮ್ಮು ಅವರ ರಕ್ತದೊತ್ತಡದ ಔಷಧಿಗಳಿಂದ ಉಂಟಾಗಿದೆಯೇ ಎಂದು ವೈದ್ಯರು ಪರಿಶೀಲಿಸಬೇಕಾಗಿತ್ತು, ಇದು ಸಾಮಾನ್ಯ ಅಡ್ಡಪರಿಣಾಮವಾಗಿದೆ. ಆಶ್ಚರ್ಯಕರ ಸಂಗತಿಯೆಂದರೆ ChatGPT ಅದನ್ನು ಕಂಡುಕೊಂಡಿಲ್ಲ, ಆದರೆ ಅನೇಕ ವೈದ್ಯರು ಅಂತಹ ಮೂಲಭೂತ ವಿಷಯವನ್ನು ನಿರ್ಲಕ್ಷಿಸಿದ್ದಾರೆ.”



Source link

Leave a Reply

Your email address will not be published. Required fields are marked *