Headlines

ಐದು ವರ್ಷ ನಾನೇ ಮುಖ್ಯಮಂತ್ರಿ: ಸಿದ್ದರಾಮಯ್ಯಗೆ ಸಚಿವರ ರಕ್ಷಣಾತ್ಮಕ ಹೇಳಿಕೆ | Siddaramaiah To Continue As Cm For Five Years With Minister Support Gvd

ಐದು ವರ್ಷ ನಾನೇ ಮುಖ್ಯಮಂತ್ರಿ: ಸಿದ್ದರಾಮಯ್ಯಗೆ ಸಚಿವರ ರಕ್ಷಣಾತ್ಮಕ ಹೇಳಿಕೆ | Siddaramaiah To Continue As Cm For Five Years With Minister Support Gvd



ಸಮಾಜ ಕಲ್ಯಾಣ ಸಚಿವ ಎಚ್‌.ಸಿ.ಮಹದೇವಪ್ಪ, ಹೌದು ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿ ಆಗಿ ಇರುತ್ತಾರೆ. ನಿಮಗ್ಯಾಕೆ ಅನುಮಾನ. ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿದ ಮೇಲೆ ಮುಗಿಯಿತಲ್ಲ.

ನಂದಿಬೆಟ್ಟ (ಜು.03): ಅಧಿಕಾರ ಹಂಚಿಕೆ, ಮುಖ್ಯಮಂತ್ರಿ ಬದಲಾವಣೆ ವಿಚಾರ ಹಾಗೂ ಐದು ವರ್ಷ ನಾನೇ ಮುಖ್ಯಮಂತ್ರಿ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಅವರ ಸಂಪುಟದ ಕೆಲ ಹಿರಿಯ ಸಹದ್ಯೋಗಿಗಳು ಬಲವಾಗಿ ಸಮರ್ಥಿಸಿಕೊಂಡಿದ್ದರೆ, ಇನ್ನು ಕೆಲವರು ಈ ಬಗ್ಗೆ ಹೈಕಮಾಂಡ್‌ ತೀರ್ಮಾನಿಸುತ್ತದೆ ಎಂಬ ರಕ್ಷಣಾತ್ಮಕ ಹೇಳಿಕೆ ನೀಡಿದ್ದಾರೆ. ನಂದಿಬೆಟ್ಟದಲ್ಲಿ ಬುಧವಾರ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಸಚಿವರಾದ ಎಚ್‌.ಡಿ.ಮಹದೇವಪ್ಪ, ರಾಮಲಿಂಗಾರೆಡ್ಡಿ, ಸಂತೋಷ್‌ ಲಾಡ್‌ ಮಾಧ್ಯಮದವರೊಂದಿಗೆ ಮಾತನಾಡಿದರು.

ಸಮಾಜ ಕಲ್ಯಾಣ ಸಚಿವ ಎಚ್‌.ಸಿ.ಮಹದೇವಪ್ಪ, ಹೌದು ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿ ಆಗಿ ಇರುತ್ತಾರೆ. ನಿಮಗ್ಯಾಕೆ ಅನುಮಾನ. ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿದ ಮೇಲೆ ಮುಗಿಯಿತಲ್ಲ. ನಿಮಗೇನಾದರೂ ಅನುಮಾನ ಇದೆಯಾ ಎಂದು ಮಾಧ್ಯಮದವರಿಗೆ ಮರು ಪ್ರಶ್ನಿಸಿದರು.

ಒಂದಿಬ್ಬರದ್ದು 140 ಜನರ ಅಭಿಪ್ರಾಯ ಆಗಲ್ಲ: ಶಾಸಕರಾದ ಇಕ್ಬಾಲ್‌ ಹುಸೇನ್‌, ಎಚ್‌.ಸಿ.ಬಾಲಕೃಷ್ಣ ಸೇರಿದಂತೆ ಕೆಲ ಶಾಸಕರು ಮುಖ್ಯಮಂತ್ರಿ ಬದಲಾವಣೆ ಆಗಬೇಕೆಂಬ ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ , ಯಾರೋ ಒಂದಿಬ್ಬರ ಅಭಿಪ್ರಾಯ ಇಡೀ 140 ಜನ ಶಾಸಕರ ಅಭಿಪ್ರಾಯ ಆಗೋದಿಲ್ಲ ಎಂದರು. ಸಿದ್ದರಾಮಯ್ಯ ಅವರು ಒಬ್ಬ ಜನಪ್ರಿಯ ನಾಯಕರು. ಕರ್ನಾಟಕದ ಇತಿಹಾಸದಲ್ಲೇ ಅವರು ಶ್ಲಾಘನೀಯ ಮುಖ್ಯಮಂತ್ರಿ. ಸಿಎಂ ಬದಲಾವಣೆ ವಿಚಾರವಾಗಿ ಯಾರು ಕೂಡ ಬಹಿರಂಗವಾಗಿ ಮಾತನಾಡಬಾರದು ಎಂದು ಹೈಕಮಾಂಡ್‌ ಸೂಚನೆ ನೀಡಿದೆ. ಈ ಬಗ್ಗೆ ನಾನೂ ಕೂಡ ಮನವಿ ಮಾಡುತ್ತೇನೆ. ಈಗಾಗಲೇ ಹೇಳಿಕೆ ನೀಡಿದವರಿಗೆ ಪಕ್ಷದ ಅಧ್ಯಕ್ಷರು ಕ್ರಮ ಕೈಗೊಳ್ಳುತ್ತಾರೆ ಎಂದರು.

ಸಿದ್ದು ಯಾವಾಗಲೋ ಸಿಎಂ ಆಗ್ಬೇಕಿತ್ತು: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಅಧಿಕಾರ ಹಂಚಿಕೆ, ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಯಾರೂ ಯಾವುದೇ ಹೇಳಿಕೆ ನೀಡಬಾರದು ಎಂದು ಹೈಕಮಾಂಡ್‌ ಸ್ಪಷ್ಟವಾಗಿ ಹೇಳಿದೆ. ಈ ಬಗ್ಗೆ ಏನೂ ಕೇಳಬೇಡಿ ಎಂದರು. ಸಿದ್ದರಾಮಯ್ಯ ಅದೃಷ್ಟದಿಂದ ಸಿಎಂ ಆದವರು ಎಂದು ಶಾಸಕ ಬಿ.ಆರ್‌.ಪಾಟೀಲ್‌ ನೀಡಿರುವ ಹೇಳಿಕೆ ಕುರಿತ ಪ್ರಶ್ನೆಗೆ, ಸಿದ್ದರಾಮಯ್ಯ ಜನಪ್ರಿಯ ನಾಯಕರು. ಅವರು ಯಾವಾಗಲೋ ಸಿಎಂ ಆಗಬೇಕಿತ್ತು. ಆದರೆ, ಆಗ ಜೆ.ಎಚ್‌.ಪಾಟೀಲ್‌ ಅವರಿಗೂ, ಇವರಿಗೂ ಸ್ಪರ್ಧೆ ಇತ್ತು. ಇದರಿಂದ ಸಿದ್ದರಾಮಯ್ಯ ಆಗ ಡಿಸಿಎಂ ಆಗಿದ್ದರು. ಈಗ ಸಿಎಂ ಬದಲಾವಣೆ ವಿಚಾರವಾಗಿ ಶಾಸಕರು ಅನಗತ್ಯವಾಗಿ ಮಾತನಾಡಬಾರದು. ನಮ್ಮ ಪಕ್ಷದಲ್ಲಿ ಈಗ ಖರ್ಗೆ ಅವರೇ ಸುಪ್ರೀಂ. ಅವರು ಹೇಳುವುದೇ ಅಂತಿಮ ಎಂದರು.

ಹೈಕಮಾಂಡ್‌ ನಿರ್ಧಾರ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಅಧಿಕಾರ ಹಂಚಿಕೆ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಈ ಬಗ್ಗೆ ಸಿಎಂ, ಡಿಸಿಎಂ ಅವರು ಏನು ಹೇಳಿದರು ನನಗೆ ಗೊತ್ತಿಲ್ಲ. ಅಧ್ಯಕ್ಷರಾಗಿ ಪಕ್ಷವನ್ನು ಹೇಗೆ ಮುನ್ನಡೆಸಬೇಕೆಂದು ಶಿವಕುಮಾರ್‌ ಅವರು ನೋಡಿಕೊಳ್ಳುತ್ತಿದ್ದಾರೆ. ಇದರಲ್ಲಿ ಸಾಫ್ಟ್‌, ಹಾರ್ಡ್‌ ಅನ್ನೋದೇನಿಲ್ಲ ಎಂದರು.



Source link

Leave a Reply

Your email address will not be published. Required fields are marked *