Breaking ಧರ್ಮಸ್ಥಳ ಕೇಸ್, ಅನಾಮಿಕ ಗುರುತಿಸಿದ 2ನೇ ಸಮಾಧಿಯಲ್ಲೂ ಕಳೇಬರ ಇಲ್ಲ | Dharmasthala Mass Burial Case No Body Found In 2nd Grave During Excavation

ಧರ್ಮಸ್ಥಳದಲ್ಲಿ ಹೂತಿಟ್ಟ ಶವಗಳ ಹೊರಗೆಯುವ ಎಸ್ಐಟಿ ತನಿಖೆ ತೀವ್ರಗೊಂಡಿದೆ. 2ನೇ ದಿನ ದೂರುದಾರ ಗುರುತಿಸಿದ 2ನೇ ಸಮಾಧಿ ಸ್ಥಳದಲ್ಲಿ ಉತ್ಖನನ ಮಾಡಲಾಗಿದೆ. ಆದರೆ 2ನೇ ಸಮಾಧಿಯಲ್ಲೂ ಯಾವುದೇ ಕಳೇಬರಹ ಪತ್ತೆಯಾಗಿಲ್ಲ

ಧರ್ಮಸ್ಥಳ (ಜು.30) ಧರ್ಮಸ್ಥಳದಲ್ಲಿ ನೂರೂರು ಶವಗಳ ಹೂತಿಟ್ಟ ಪ್ರಕರಣ ಸಂಬಂಧ ಎಸ್ಐಟಿ ತನಿಖೆ ತೀವ್ರಗೊಂಡಿದೆ. ನೇತ್ರಾವತಿ ಸ್ನಾನಘಟ್ಟ ಸಮೀಪದ ಕಾಡಿನಲ್ಲಿ ಅನಾಮಿಕ ದೂರುದಾರ ಸಮಾಧಿ ಸ್ಥಳಗಳನ್ನು ಗುರುತಿಸಿದ್ದಾನೆ. ಈ ಪೈಕಿ ಮೊದಲ ಸಮಾಧಿ ಸ್ಥಳವನ್ನು ನಿನ್ನೆ (ಜು.29)ರಂದು ಅಗೆಯಲಾಗಿತ್ತು. ಆದರೆ ಯಾವುದೇ ಕಳೇಬರ ಪತ್ತೆಯಾಗಿರಲಿಲ್ಲ. ಇಂದು (ಜು.30) ದೂರುದಾರ ಗುರುತಿಸಿದ 2ನೇ ಸಮಾಧಿ ಸ್ಥಳ ಅಗೆಯಲಾಗಿದೆ. ಆದರೆ ಎರಡನೇ ಸಮಾಧಿಯಲ್ಲೂ ಯಾವುದೇ ಕಳೇಬರ ಪತ್ತೆಯಾಗಿಲ್ಲ.

2ನೇ ಸಮಾಧಿ ಸ್ಥಳ ಅಗೆತ ಮುಕ್ತಾಯ

ನೇತ್ರಾವತಿ ಸ್ನಾನಘಟ್ಟದ ಪಕ್ಕದಲ್ಲೇ ಇರುವ ಕಾಡಿನ ಪ್ರವೇಶದ ಬಳಿ 2ನೇ ಸಮಾಧಿ ಸ್ಥಳ ಗುರುತಿಸಲಾಗಿತ್ತು. ಇಂದು ಕಾರ್ಮಿಕರು 6 ಅಡಿ ಆಳದವರೆಗೆ ಸಮಾಧಿ ಸ್ಥಳ ಅಗೆದಿದ್ದಾರೆ. ಆದರೆ ಯಾವುದೇ ಕಳೇಬರಹ ಪತ್ತೆಯಾಗಿಲ್ಲ. ಹೀಗಾಗಿ 2ನೇ ಸಮಾಧಿ ಸ್ಥಳದ ಉತ್ಖನನ ಕಾರ್ಯ ಅಂತ್ಯಗೊಳಿಸಲಾಗಿದೆ. ಧರ್ಮಸ್ಥಳ ಗ್ರಾಮ ಪಂಚಾಯತಿಯ 20 ಕಾರ್ಮಿಕರ ತಂಡವನ್ನು ಸಮಾಧಿ ಸ್ಥಳ ಅಗೆಯಲು ಬಳಸಿಕೊಳ್ಳಲಾಗಿದೆ. ಆರು ಅಡಿ ಉದ್ದ, ಐದು ಅಡಿ ಅಗಲದಲ್ಲಿ ಸಮಾಧಿ ಸ್ಥಳವನ್ನು 6 ಅಡಿ ಆಳವದ ವರೆಗೆ ಅಗೆಯಲಾಗಿದೆ. ಆದರೆ ಯಾವುದೇ ಅಸ್ಥಿಪಂಜರ ಪತ್ತೆಯಾಗಿಲ್ಲ. ಹೀಗಾಗಿ 2ನೇ ಮಾರ್ಕ್ ಸ್ಥಳ ಕಾರ್ಯಾಚರಣೆ ಅಂತ್ಯಗೊಂಡಿದೆ.

ಮೂರನೇ ಸಮಾಧಿ ಸ್ಥಳ ಅಗೆತಕ್ಕೆ ನಿರ್ಧಾರ

ಆರಂಭಿಕ 2 ಸಮಾಧಿ ಸ್ಥಳದಲ್ಲಿ ಯಾವುದೇ ಕಳೇಬರಹ ಪತ್ತೆಯಾಗಿಲ್ಲ. ಹೀಗಾಗಿ ಮೂರನೇ ಸಮಾಧಿ ಸ್ಥಳ ಅಗೆತ ಕಾರ್ಯ ಆರಂಭಗೊಂಡಿದೆ.ದೂರುದಾರ

Source link

Leave a Reply

Your email address will not be published. Required fields are marked *