Headlines

Kantara Movie 1 Making Video Release: 250 ದಿನ ಮೈನವಿರೇಳಿಸುವಂಥೆ ಶೂಟಿಂಗ್‌ ಮಾಡಿದ ರಿಷಬ್‌ ಶೆಟ್ಟಿ! | Actor Rishab Shetty Starrer Kantara Chapter 1 Movie 250 Days Shooting Complete

Kantara Movie 1 Making Video Release: 250 ದಿನ ಮೈನವಿರೇಳಿಸುವಂಥೆ ಶೂಟಿಂಗ್‌ ಮಾಡಿದ ರಿಷಬ್‌ ಶೆಟ್ಟಿ! | Actor Rishab Shetty Starrer Kantara Chapter 1 Movie 250 Days Shooting Complete


Rishab Shetty Kantara Movie 1: ಈಗಾಗಲೇ ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿರುವ ‘ಹೊಂಬಾಳೆ ಫಿಲ್ಮ್ಸ್’‌ ಈಗ ‘ಕಾಂತಾರ’ ಸಿನಿಮಾದ ಮೇಕಿಂಗ್‌ ವಿಡಿಯೋ ರಿಲೀಸ್‌ ಮಾಡಿದ್ದಾರೆ. 

ರಾಜಕುಮಾರ, ಕೆಜಿಎಫ್, ಸಲಾರ್, ಕಾಂತಾರಾದಂತಹ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿದ ಹೊಂಬಾಳೆ ಫಿಲ್ಮ್ಸ್, ಇಂದು ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರ ‘ಕಾಂತಾರ ಚಾಪ್ಟರ್ 1’ ಸಿನಿಮಾದ ( Rishab Shetty Kantara Movie 1 ) ಮೇಕಿಂಗ್ ವಿಡಿಯೋವನ್ನು ರಿಲೀಸ್ ಮಾಡಿದೆ. ಈ ವಿಡಿಯೋದಿಂದ, ಸಿನಿಮಾಕ್ಕಾಗಿ ಹಾಕಿದ ಭಾರಿ ಶ್ರಮ ಮತ್ತು ಅದರ ಅದ್ದೂರಿತನ ಏನು ಎನ್ನೋದು ಗೊತ್ತಾಗುವುದು.

ಮೂರು ವರ್ಷಗಳ ಶೂಟಿಂಗ್!‌

ಶೂಟಿಂಗ್ ಮುಗಿದ ಸಂಭ್ರಮದಲ್ಲಿ ಬಿಡುಗಡೆಯಾಗಿರುವ ಈ ವಿಡಿಯೋ, 250 ದಿನಗಳಿಗೂ ಹೆಚ್ಚು ಕಾಲ ನಡೆದ ಶೂಟಿಂಗ್ ಪಯಣ‌ ಹೇಗಿತ್ತು ಎನ್ನೋದು ತೋರಿಸುತ್ತದೆ. ಮೂರು ವರ್ಷಗಳ ನಿರಂತರ ಶ್ರಮದ ಫಲವೇ ಈ ಸಿನಿಮಾ.

ಬಹುನಿರೀಕ್ಷಿತ ಸಿನಿಮಾ!

ಸಾವಿರಾರು ಸಿಬ್ಬಂದಿ ಪ್ರತಿ ಹಂತದಲ್ಲೂ ಹಗಲಿರುಳು ಕೆಲಸ ಮಾಡಿದ್ದಾರೆ. ಈ ಮೇಕಿಂಗ್ ವಿಡಿಯೋ ರಿಷಬ್ ಶೆಟ್ಟಿ ಅವರ ಕಥೆ ಹೇಳುವ ಶೈಲಿ ಮತ್ತು ಅವರ ನಿಖರತೆಗೆ ಒಂದು ಗೌರವವಾಗಿದೆ. ‘ಕಾಂತಾರ ಚಾಪ್ಟರ್ 1’ ಹೊಂಬಾಳೆ ಫಿಲ್ಮ್ಸ್‌ನ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದೆ. ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್, ಛಾಯಾಗ್ರಾಹಕ ಅರವಿಂದ್ ಕಶ್ಯಪ್, ಮತ್ತು ಪ್ರೊಡಕ್ಷನ್ ಡಿಸೈನರ್ ವಿನೇಶ್ ಬಂಗ್ಲನ್ ಸೇರಿದಂತೆ ಇಡೀ ತಂಡ ಸಿನಿಮಾಗೆ ಅದ್ಭುತ ದೃಶ್ಯ ಮತ್ತು ಭಾವನಾತ್ಮಕ ಸ್ಪರ್ಶ ನೀಡಿದ್ದಾರೆ.

ಸಿನಿಮಾ ರಿಲೀಸ್‌ ಯಾವಾಗ?

ಅಕ್ಟೋಬರ್ 2 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿರುವ ಈ ಸಿನಿಮಾ, ಕನ್ನಡ, ಹಿಂದಿ, ತೆಲುಗು, ಮಲಯಾಳಂ, ತಮಿಳು, ಬೆಂಗಾಲಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ತೆರೆ ಕಾಣಲಿದೆ. ಇದರಿಂದ ಸಿನಿಮಾ ತನ್ನ ಸಾಂಸ್ಕೃತಿಕ ಬೇರುಗಳನ್ನು ಉಳಿಸಿಕೊಂಡೇ ವಿವಿಧ ಭಾಷೆ ಮತ್ತು ಪ್ರದೇಶಗಳ ಪ್ರೇಕ್ಷಕರನ್ನು ತಲುಪಲಿದೆ.

ಗಡಿಗಳನ್ನು ಮೀರಿ ಬೆಳೆಯುತ್ತಿರೋ ಸಿನಿಮಾ!

‘ಕಾಂತಾರ ಚಾಪ್ಟರ್ 1’ ಸಿನಿಮಾ ಮೂಲಕ ಹೊಂಬಾಳೆ ಫಿಲ್ಮ್ಸ್ ಭಾರತೀಯ ಸಿನಿಮಾದ ಗಡಿಗಳನ್ನು ಮೀರಿ ಬೆಳೆಯುತ್ತಿದೆ. ಜಾನಪದ, ನಂಬಿಕೆ ಮತ್ತು ಸಿನಿಮೀಯ ಶ್ರೇಷ್ಠತೆಯನ್ನು ಆಚರಿಸುವ ಒಂದು ಆಳವಾದ ಅನುಭವವನ್ನು ಈ ಸಿನಿಮಾ ಪ್ರೇಕ್ಷಕರಿಗೆ ನೀಡಲಿದೆ.

ರಿಷಬ್‌ ಶೆಟ್ಟಿ ಏನಂತಾರೆ?

“ನಮ್ಮ ಮಣ್ಣಿನ ಕಥೆಯನ್ನು ಇಡೀ ಪ್ರಪಂಚಕ್ಕೆ ಹೇಳಬೇಕು ಎನ್ನೋದು ನನ್ನ ಕನಸು. 3 ವರ್ಷಗಳ ಪರಿಶ್ರಮ, 250 ದಿನಗಳ ಶೂಟಿಂಗ್‌, ಎಷ್ಟೇ ಕಷ್ಟಬಂದರೂ ಕೂಡ ನಾನು ನಂಬಿದ ದೈವ ನನ್ನ ಕೈ ಬಿಡಲಿಲ್ಲ. ನನ್ನ ತಂಡ, ನನ್ನ ನಿರ್ಮಾಪಕರು ಕೈ ಬಿಡಲಿಲ್ಲ. ಪ್ರತಿದಿನ ಸೆಟ್‌ನಲ್ಲಿ ಸಾವಿರಾರು ಜನರನ್ನು ನೋಡ್ತಿದ್ದಾಗ ಇದು ಸಿನಿಮಾವಲ್ಲ, ಶಕ್ತಿ ಎನ್ನೋದು ನನಗೆ ಅರ್ಥ ಆಯ್ತು. ಕಾಂತಾರ ಪ್ರಪಂಚಕ್ಕೆ ನಿಮಗೆಲ್ಲರಿಗೂ ಸ್ವಾಗತ” ಎಂದು ರಿಷಬ್‌ ಶೆಟ್ಟಿ ಅವರು ಹೇಳಿದ್ದಾರೆ.

YouTube video player



Source link

Leave a Reply

Your email address will not be published. Required fields are marked *