ರಾಖಿಯಾಲ್ನ ಶಾಲೆಯೊಂದರಲ್ಲಿ ಎಲ್ಸಿ ವಿವಾದದ ಹಿನ್ನೆಲೆಯಲ್ಲಿ ಪೋಷಕನೊಬ್ಬ ಶಿಕ್ಷಕರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿದ್ದು, ಆಕ್ರೋಶ ವ್ಯಕ್ತವಾಗಿದೆ.
Ahmedabad school stabbing: ರಾಖಿಯಾಲ್ನ ನೂತನ್ ಭಾರತಿ ಶಾಲೆಯಲ್ಲಿ ಶನಿವಾರ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ರಜೆ ಪ್ರಮಾಣಪತ್ರ (ಎಲ್ಸಿ) ವಿವಾದದ ಹಿನ್ನೆಲೆಯಲ್ಲಿ ಪೋಷಕನೊಬ್ಬ ಶಿಕ್ಷಕನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿದ್ದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯ ವಿವರ
ಶಿಕ್ಷಕ ಶಬ್ಬೀರ್ ಶೇಖ್ಗೆ ತಲೆಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯಾದ ಹಾಜಿ ಮುಷ್ತಾಕ್ ಅಹ್ಮದ್ ತಮ್ಮ 6ನೇ ತರಗತಿಯ ಮಗಳ ಎಲ್ಸಿ ಪಡೆಯಲು ಶಾಲೆಗೆ ಭೇಟಿ ನೀಡಿದ್ದರು. ಪ್ರಾಂಶುಪಾಲರ ಜೊತೆ ಮಾತನಾಡಿದ ನಂತರ, ಗುಮಾಸ್ತ-ಶಿಕ್ಷಕ ಶಬ್ಬೀರ್ ಶೇಖ್ ಅವರನ್ನು ಸಂಪರ್ಕಿಸಿದಾಗ, ಶುಕ್ರವಾರದಂದು ಎಲ್ಸಿ ಪಡೆಯಲು ಮರಳಿ ಬರಲು ಶಬ್ಬೀರ್ ಸೂಚಿಸಿದ್ದರು. ಆದರೆ, ಪ್ರಾಂಶುಪಾಲರು ಸೋಮವಾರ ಬರಲು ಹೇಳಿದ್ದಾರೆಂದು ವಾದಿಸಿದ ಮುಷ್ತಾಕ್ ಆಕ್ರೋಶಗೊಂಡರು.
ವಿವಾದ ತಾರಕಕ್ಕೇರಿತು:
ವಾಗ್ವಾದ ತೀವ್ರಗೊಂಡು, ಮುಷ್ತಾಕ್ ಶಬ್ಬೀರ್ಗೆ ಕಪಾಳಮೋಕ್ಷ ಮಾಡಿದರು. ಶಿಕ್ಷಕ ಎದ್ದು ನಿಂತಾಗ, ಮುಷ್ತಾಕ್ ಜೇಬಿನಿಂದ ಚಾಕು ತೆಗೆದು ಶಬ್ಬೀರ್ನ ತಲೆಗೆ ಇರಿದಿದ್ದಾರೆ. ಇತರ ಸಿಬ್ಬಂದಿ ಮಧ್ಯಪ್ರವೇಶಿಸಿ ಇಬ್ಬರನ್ನು ಬೇರ್ಪಡಿಸಿದರು. ಗಾಯಗೊಂಡ ಶಬ್ಬೀರ್ನನ್ನು ಸಿವಿಲ್ ಆಸ್ಪತ್ರೆಗೆ ಕರೆದೊಯ್ದು, ಏಳು ಹೊಲಿಗೆಗಳು ಹಾಕಲಾಗಿದೆ.
ಶಬ್ಬೀರ್ ಶೇಖ್ ರಾಖಿಯಾಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳು ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದು, ಆರೋಪಿಯ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಶಿಕ್ಷಕರ ಸುರಕ್ಷತೆ ಮತ್ತು ಶಾಲೆಯಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು ಕಠಿಣ ಕ್ರಮಗಳ ಅಗತ್ಯತೆಯ ಬಗ್ಗೆ ಚರ್ಚೆಗಳು ತೀವ್ರಗೊಂಡಿವೆ.
ಈ ಘಟನೆಯ ಕುರಿತು ನಿಮ್ಮ ಅನಿಸಿಕೆ ಏನು ಕಾಮೆಂಟ್ ಮಾಡಿ