ವಾಣಿಜ್ಯ ಸಂಸ್ಥೆಗಳಲ್ಲಿ ಉದ್ಯೋಗಿಗಳ ಕೆಲಸದ ಅವಧಿಯನ್ನು 10 ಗಂಟೆಗೆ ನಿಗದಿ ಪಡಿಸುವ ಕಾನೂನಿಗೆ ತೆಲಂಗಾಣ ಸರ್ಕಾರ ಅನುಮೋದನೆ ನೀಡಿದೆ. | Telangana Approves 10 Hour Workday For Commercial Employees

ವಾಣಿಜ್ಯ ಸಂಸ್ಥೆಗಳಲ್ಲಿ ಉದ್ಯೋಗಿಗಳ ಕೆಲಸದ ಅವಧಿಯನ್ನು 10 ಗಂಟೆಗೆ ನಿಗದಿ ಪಡಿಸುವ ಕಾನೂನಿಗೆ ತೆಲಂಗಾಣ ಸರ್ಕಾರ ಅನುಮೋದನೆ ನೀಡಿದೆ. | Telangana Approves 10 Hour Workday For Commercial Employees



ವಾಣಿಜ್ಯ ಸಂಸ್ಥೆಗಳಲ್ಲಿ ಉದ್ಯೋಗಿಗಳ ಕೆಲಸದ ಅವಧಿಯನ್ನು 10 ಗಂಟೆಗೆ ನಿಗದಿ ಪಡಿಸುವ ಕಾನೂನಿಗೆ ತೆಲಂಗಾಣ ಸರ್ಕಾರ ಅನುಮೋದನೆ ನೀಡಿದೆ.

ಹೈದರಾಬಾದ್‌: ವಾಣಿಜ್ಯ ಸಂಸ್ಥೆಗಳಲ್ಲಿ ಉದ್ಯೋಗಿಗಳ ಕೆಲಸದ ಅವಧಿಯನ್ನು 10 ಗಂಟೆಗೆ ನಿಗದಿ ಪಡಿಸುವ ಕಾನೂನಿಗೆ ತೆಲಂಗಾಣ ಸರ್ಕಾರ ಅನುಮೋದನೆ ನೀಡಿದೆ. ಆದರೆ ಉದ್ಯೋಗಿಗಳ ಕೆಸಲದ ಅವಧಿ ವಾರಕ್ಕೆ 48 ಗಂಟೆ ಮೀರಬಾರದು ಎಂದು ಸೂಚಿಸಿದೆ. ರಾಜ್ಯದಲ್ಲಿ ಉದ್ಯಮ ಸ್ನೇಹಿ ನೀತಿ ಜಾರಿ ನಿಟ್ಟಿನಲ್ಲಿ ಈ ಅನುಮತಿ ನೀಡಲಾಗಿದೆ.

ಅಂಗಡಿಗಳನ್ನು ಹೊರತು ಪಡಿಸಿ ಉಳಿದ ವಾಣಿಜ್ಯ ಸಂಸ್ಥೆಗಳಲ್ಲಿ ಕಾರ್ಮಿಕರ ಸುರಕ್ಷತೆಯ ಎಲ್ಲಾ ನಿಯಮಗಳಿಗೆ ಒಳಪಟ್ಟು ಉದ್ಯೋಗಿಗಳು ನಿತ್ಯ 10 ಗಂಟೆ ಕೆಲಸ ಮಾಡುವ ಪ್ರಸ್ತಾವನೆಗೆ ಸರ್ಕಾರ ಅನುಮತಿ ನೀಡಿದೆ. ಜೊತೆಗೆ ವಾರಕ್ಕೆ 48 ಗಂಟೆಗಳ ಮಿತಿ ಹೇರಿರುವ ಸರ್ಕಾರ ಅಧಿಕ ಅವಧಿ ಕೆಲಸ ಮಾಡಿಸಿಕೊಂಡರೆ ಹೆಚ್ಚಿನ ವೇತನವನ್ನು ನೀಡಬೇಕು ಎಂದಿದೆ.

ಇನ್ನು ಈ ಕಾನೂನಿಗೆ ಸಂಬಂಧಿಸಿದಂತೆ ಹಲವು ನಿಯಮಗಳನ್ನು ಪ್ರಕಟಿಸಿರುವ ಸರ್ಕಾರ, ಒಬ್ಬ ಉದ್ಯೋಗಿ ಒಂದು ದಿನದಲ್ಲಿ 6 ಗಂಟೆ ಕೆಲಸ ಮಾಡಿದರೆ 30 ನಿಮಿಷ ವಿಶ್ರಾಂತಿಯನ್ನು ಪಡೆಯಬೇಕು. ಅಧಿಕ ಅವಧಿಯನ್ನು ಸೇರಿಸಿ ದಿನದ ಕೆಲಸದ ಸಮಯ 12 ಗಂಟೆ ಮೀರಬಾರದು ಎಂದಿದೆ. ಜೊತೆಗೆ 3 ತಿಂಗಳ ಅವಧಿಗೆ ಉದ್ಯೋಗಿಗಳ ಒಟ್ಟು ಕೆಲಸದ ಸಮಯ 144 ಗಂಟೆಗೆ ಮಿತಿಗೊಳಿಸಿದೆ.

ಪ್ರಪಂಚದ ಟಾಪ್ ವರ್ಕ್ ಲೈಫ್ ಬ್ಯಾಲೆನ್ಸ್ ಹೊಂದಿರುವ ದೇಶಗಳ ಲಿಸ್ಟ್

ಪ್ರಪಂಚದ ಟಾಪ್   ವರ್ಕ್ ಲೈಫ್ ಬ್ಯಾಲೆನ್ಸ್ ಹೊಂದಿರುವ ದೇಶಗಳ ಲಿಸ್ಟ್ ಇಲ್ಲಿದೆ. ಭಾರತ ಟಾಪ್ 50 ರಲ್ಲಿ ಸ್ಥಾನ ಪಡೆದಿದೆ. ಕೆಲಸದ ಒತ್ತಡದಿಂದ ಸಾಲು ಸಾಲು ಸಾವು ಸಂಭವಿಸುತ್ತಿರುವ ಸಂದರ್ಭದಲ್ಲಿ ಈ ವರ್ಕ್ ಲೈ ಬ್ಯಾಲೆನ್ಸ್ ನಲ್ಲಿ ಭಾರತದ ಸ್ಥಾನ ಎಷ್ಟು ತಿಳಿಯೋಣ.

ಭಾರತದಲ್ಲಿ ಕೆಲವು ದಿನಗಳಿಂದ ಕೆಲಸದ ಒತ್ತಡದಿಂದ ಸಾವನ್ನಪ್ಪುತ್ತಿರುವವರ ಸುದ್ದಿಯೇ ಕೇಳಿ ಬರ್ತಿದೆ. ಅಂದ್ರೆ ನಮ್ಮ ದೇಶದಲ್ಲಿ ವರ್ಕ್ ಲೈಫ್ ಬ್ಯಾಲೆನ್ಸ್ ಸರಿಯಾಗಿಲ್ಲ ಎಂದು ಅರ್ಥ. ಶಾಸನಬದ್ಧ ವಾರ್ಷಿಕ ರಜೆ, ಪೇಯ್ಡ್ ಹೆರಿಗೆ ರಜೆ ಮತ್ತು ಪ್ರತಿ ಉದ್ಯೋಗಿಗೆ ಕೆಲಸ ಮಾಡುವ ಸರಾಸರಿ ಗಂಟೆಗಳಂತಹ ಪ್ರಮುಖ ಕೆಲಸದ ಅಂಶಗಳ ಸಂಯೋಜನೆಯ ಆಧಾರದ ಮೇಲೆ ಕೆಳಗಿನ 10 ದೇಶಗಳು ನಮ್ಮ ಜಾಗತಿಕ ಅಧ್ಯಯನದಲ್ಲಿ ಬೆಸ್ಟ್ ವರ್ಕ್ ಲೈಫ್ ಬ್ಯಾಲೆನ್ಸ್ (Work life balance) ಹೊಂದಿರುವ ದೇಶಗಳು ಎಂದು ತಿಳಿದು ಬಂದಿದೆ. ಈ ಲಿಸ್ಟ್ ನಲ್ಲಿ ಭಾರತ ಯಾವ ಸ್ಥಾನದಲ್ಲಿದೆ ನೋಡೋಣ.

ನ್ಯೂಝಿಲ್ಯಾಂಡ್

ಅದ್ಭುತವಾದ ವರ್ಕ್ ಲೈಫ್ ಬ್ಯಾಲೆನ್ಸ್ ಹೊಂದಿರುವ ದೇಶಗಳಲ್ಲಿ ನ್ಯೂಝಿಲ್ಯಾಂಡ್ ಮೊದಲನೇ ಸ್ಥಾನದಲ್ಲಿದೆ. 52,69,939 ಜನಸಂಖ್ಯೆ ಇರುವ ಈ ದೇಶದಲ್ಲಿನ 80.76 % ವರ್ಕ್ ಲೈಫ್ ಬ್ಯಾನೆನ್ಸ್ ಇದೆ. ಇವರಿಗೆ 32 ವಾರ್ಷಿಕ ರಜೆ ಇದೆ. 80% ಸಿಕ್ ಪೇಯ್ಡ್ ಲೀವ್ ಇದೆ. ಅಷ್ಟೇ ಅಲ್ಲ 26 ವಾರಗಳ ಮಟರ್ನಿಟಿ ರಜೆ ಇದ್ದು, ವಾರಕ್ಕೆ 177 $ ನೀಡಲಾಗುತ್ತೆ.

ಐರ್ಲ್ಯಾಂಡ್

ಯುರೋಪ್ ನ ಈ ದೇಶದಲ್ಲಿ 50,89,478 ಜನಸಂಖ್ಯೆ ಇದೆ. ಇಲ್ಲಿಯೂ ಕೂಡ ಜನರ ವರ್ಕ್ ಲೈಫ್ ಬ್ಯಾಲೆನ್ಸ್ ಸರಿಯಾಗಿಯೇ ಇದೆ. ಇಲ್ಲಿ 77.89% ವರ್ಕ್ ಲೈಫ್ ಬ್ಯಾಲೆನ್ಸ್ ಇದೆ. 30 ವಾರ್ಷಿಕ ರಜೆ, 70% ವೇತನ ಸಹಿತ ಸಿಕ್ ಲೀವ್ (paid sick leave), ವೇತನ ಸಹಿತ 26 ವಾರಗಳ ಮೆಟರ್ನಿಟಿ ರಜೆ .

ಬೆಲ್ಜಿಯಂ

ಬೆಲ್ಜಿಯಂ ನಲ್ಲಿ 11, 715, 744 ಜನಸಂಖ್ಯೆ ಹೊಂದಿರುವ ಈ ದೇಶದಲ್ಲಿ 73.45% ವರ್ಕ್ ಲೈಫ್ ಬ್ಯಾಲೆನ್ಸ್ ಇದೆ. 30 ವಾರ್ಷಿಕ ರಜೆ, 100% ವೇತನ ಸಹಿತ ಸಿಕ್ ಲೀವ್, ವೇತನ ಸಹಿತ 15 ವಾರಗಳ ಮೆಟರ್ನಿಟಿ ರಜೆ (maternity leave) .

ಡೆನ್ಮಾರ್ಕ್

ಡೆನ್ಮಾರ್ಕ್ ನ ವರ್ಕ್ ಲೈಫ್ ಬ್ಯಾಲೆನ್ಸ್ ಕೂಡ ಚೆನ್ನಾಗಿದೆ. ಜನಸಂಖ್ಯೆ 59,39,695 ಇರುವ ಈ ದೇಶದಲ್ಲಿ 73.45% ವರ್ಕ್ ಲೈಫ್ ಬ್ಯಾಲೆನ್ಸ್ ಇದೆ. 35 ವಾರ್ಷಿಕ ರಜೆ, 100%ವೇತನ ಸಹಿತ ಸಿಕ್ ಲೀವ್, ವೇತನ ಸಹಿತ 15 ವಾರಗಳ ಮೆಟರ್ನಿಟಿ ರಜೆ .

ಕೆನಡಾ

ಬರೋಬ್ಬರಿ 3,91,07,046 ಜನಸಂಖ್ಯೆ ಹೊಂದಿರುವ ಕೆನಡಾದಲ್ಲಿ 72.75% ವರ್ಕ್ ಲೈಫ್ ಬ್ಯಾಲೆನ್ಸ್ ಇದೆ. 17 ವಾರ್ಷಿಕ ರಜೆ, 100%ವೇತನ ಸಹಿತ ಸಿಕ್ ಲೀವ್, ವೇತನ ಸಹಿತ 17 ವಾರಗಳ ಮೆಟರ್ನಿಟಿ ರಜೆ



Source link

Leave a Reply

Your email address will not be published. Required fields are marked *