Headlines

Su From So Movie Bhanu Real name: ರವಿ ಅಣ್ಣ, ನಾನು ನಾಚಿಕೊಳ್ಳೋ ದೃಶ್ಯ ನೋಡಿ ಸಂಧ್ಯಾ ಅರೆಕೆರೆ ರಿಯಲ್‌ ಪತಿ, ಅತ್ತೆ ಏನಂದ್ರು? | Actress Sandhya Arakere Husband Reaction So From Su Movie Ravi Anna Bhanu

Su From So Movie Bhanu Real name: ರವಿ ಅಣ್ಣ, ನಾನು ನಾಚಿಕೊಳ್ಳೋ ದೃಶ್ಯ ನೋಡಿ ಸಂಧ್ಯಾ ಅರೆಕೆರೆ ರಿಯಲ್‌ ಪತಿ, ಅತ್ತೆ ಏನಂದ್ರು? | Actress Sandhya Arakere Husband Reaction So From Su Movie Ravi Anna Bhanu



Su From So Movie Bhanu Real name: ರವಿ ಅಣ್ಣ, ನಾನು ನಾಚಿಕೊಳ್ಳೋ ದೃಶ್ಯ ನೋಡಿ ಸಂಧ್ಯಾ ಅರೆಕೆರೆ ರಿಯಲ್‌ ಪತಿ, ಅತ್ತೆ ಏನಂದ್ರು? | Actress Sandhya Arakere Husband Reaction So From Su Movie Ravi Anna Bhanu

So From Su Kannada Movie Ravi Anna And Bhanu: ನಟ ರಾಜ್‌ ಬಿ ಶೆಟ್ಟಿ, ಜೆಪಿ ತುಮಿನಾಡ್‌, ಸಂಧ್ಯಾ ಅರಕೆರೆ, ಶನೀಲ್‌ ಗೌತಮ್ ನಟನೆಯ ‘ಸು ಫ್ರಂ ಸೋ’ ಸಿನಿಮಾ ಇಂದು ಸೂಪರ್‌ ಹಿಟ್‌ ಆಗಿದೆ. ಇನ್ನು ಭಾನು ಪಾತ್ರದ ಬಗ್ಗೆ ಸಂಧ್ಯಾ ಅರೆಕೆರೆ ಪತಿ ಏನು ಹೇಳಿದ್ದಾರೆ? 

ನಟ ರಾಜ್‌ ಬಿ ಶೆಟ್ಟಿ, ಜೆಪಿ ತುಮಿನಾಡ್‌ ನಟನೆಯ ‘ಸು ಫ್ರಂ ಸೋ ಸಿನಿಮಾ’ದಲ್ಲಿ ( ‘Su From So Movie’ ) ಭಾನು ಪಾತ್ರ ಸಾಕಷ್ಟು ಜನರ ಮನಸ್ಸು ಗೆದ್ದಿದೆ. ಫುಲ್‌ ಕಾಮಿಡಿ ಇರುವ ಈ ಚಿತ್ರದಲ್ಲಿ ರವಿ ಅಣ್ಣ ಹಾಗೂ ಭಾನು ಕಾಂಬಿನೇಶನ್‌ ಅನೇಕರಿಗೆ ಇಷ್ಟ ಆಗಿದೆ. ಈ ಬಗ್ಗೆ ಭಾನು ಪಾತ್ರಧಾರಿ ಸಂಧ್ಯಾ ಅರಕೆರೆ ಪತಿ ಶೋಧನ್‌ ಬಸ್ರೂರು, ಹಾಗೂ ಅವರ ಅತ್ತೆ ಏನು ಹೇಳಿದ್ದಾರೆ.

ರಾಜ್‌ ಬಿ ಶೆಟ್ಟಿ ಏನು ಹೇಳಿದ್ದಾರೆ?

“ಪಾತ್ರ ಚೆನ್ನಾಗಿದೆ ಅಂತ ಹೇಳಿದ್ದಳು. ಆದರೆ ಕಥೆಯನ್ನು ಮಾತ್ರ ಬಿಟ್ಟುಕೊಡಲಿಲ್ಲ. ಸಿನಿಮಾ ನೋಡಿ ಎಂದಿದ್ದಳು. ಸಿನಿಮಾ ನೋಡಿದ ನಂತರದಲ್ಲಿ ನಾನು ಅವಳಿಗೆ ಏನೂ ಹೇಳಲಿಲ್ಲ, ಅದಾಗಿ ಮರುದಿನ ನಿರೀಕ್ಷೆಗೂ ಮೀರಿ ನಟಿಸಿದ್ದೀಯಾ ಅಂತ ಹೇಳಿದೆ. ನಿಜಕ್ಕೂ ಸಂಧ್ಯಾ ನಟನೆ ಇಷ್ಟ ಆಯ್ತು. ಕಾಮಿಡಿ ಜಾನರ್‌ ಸಿನಿಮಾದಲ್ಲಿ ಅದರಾಚೆಗಿನ ಪಾತ್ರವು ಎದ್ದು ಕಂಡಿದೆ. ಇಷ್ಟುದಿನಗಳ ಕಾಲ ಎಮೋಶನಲ್‌ ಪಾತ್ರ ಮಾಡ್ತಿದ್ದ ಸಂಧ್ಯಾ ಇಲ್ಲಿ ಬ್ಯಾಲೆನ್ಸ್‌ ಆಗಿ ನಟಿಸಿದ್ದಾಳೆ. ಭಾನು ಪಾತ್ರ ಸ್ವಲ್ಪ ಆಚೆ ಈಚೆ ಆದರೂ ಕೂಡ ಅದು ಬೇರೆ ಸ್ವರೂಪ ಪಡೆದುಕೊಳ್ಳುವುದು. ರವಿ ಅಣ್ಣ ಪಾತ್ರ ಬಿಲ್ಡ್‌ ಮಾಡಿದ ರೀತಿ ಚೆನ್ನಾಗಿದೆ. ಆ ಪಾತ್ರ ಬಹಳ ಮಜವಾಗಿದೆ. ನಾನು ಪಾತ್ರ ಮಾಡಬಹುದಿತ್ತು ಅಂತ ಅನಿಸಿದೆ. ನಿಜಕ್ಕೂ ಆ ಪಾತ್ರ ನೋಡುವಾಗ ಗಂಟಲು ಕಟ್ಟಿತ್ತು” ಎಂದು ಶೋಧನ್‌ ಹೇಳಿದ್ದಾರೆ.

ಸಂಧ್ಯಾ ಅರಕೆರೆ ಏನಂದ್ರು?

“ಸಿನಿಮಾ ನೋಡುವಾಗ ನನ್ನ ಅತ್ತೆ ಪಕ್ಕದಲ್ಲೇ ಕೂತಿದ್ರು. ರವಿ ಅಣ್ಣ, ಭಾನು ನೋಡಿ ನಾಚಿಕೊಳ್ಳುವಾಗ ನಮ್ಮತ್ತೆ ನನ್ನ ನೋಡಿ ನಗ್ತಿದ್ರು. ಆಗ ನಾನು ನೀವು ಯಾಕೆ ಈ ದೃಶ್ಯಕ್ಕೆ ನಗ್ತೀರಿ, ಅದು ನಿಮ್ಮ ಸೊಸೆ ಅಂತ ಹೇಳಿದ್ದೆ” ಎಂದಿದ್ದಾರೆ ಭಾನು ಪಾತ್ರಧಾರಿ ಸಂಧ್ಯಾ ಅರಕೆರೆ.

ಸಂಧ್ಯಾ ಅರಕೆರೆ ನಟನೆ ಸಿನಿಮಾಗಳಿವು!

‘ಟೋಬಿ’, ‘ಸ್ವಾತಿ ಮುತ್ತಿನ ಮಳೆಹನಿಯೇ’ ಸಿನಿಮಾಕ್ಕೆ ಆಡಿಷನ್‌ ಕೊಟ್ಟು ಸಂಧ್ಯಾ ಆಯ್ಕೆಯಾಗಿದ್ದರು. ಇದಾದ ಬಳಿಕ ಅವರಿಗೆ ಮತ್ತೆ ರಾಜ್‌ ಬಿ ಶೆಟ್ಟಿಯಿಂದ ಮತ್ತೆ ‘ಸು ಫ್ರಂ ಸೋ’ ಸಿನಿಮಾದ ಆಫರ್‌ ಬಂದಿತ್ತು. ಜೆಪಿ ತುಮಿನಾಡ್‌ ಅವರು ತುಳು ಚಿತ್ರರಂಗದಲ್ಲಿ ಸಾಕಷ್ಟು ಕೆಲಸ ಮಾಡಿದ್ದು, ಕನ್ನಡದಲ್ಲಿ ಇದು ಅವರ ಮೊದಲ ನಿರ್ದೇಶನದ ಸಿನಿಮಾವಾಗಿದೆ.

ರವಿ ಅಣ್ಣ ಪಾತ್ರದಲ್ಲಿ ಶನೀಲ್‌ ಗೌತಮ್‌ ನಟಿಸಿದ್ದಾರೆ. ಶನೀಲ್‌ ಅವರು ಈ ಹಿಂದೆ ‘ಕಾಂತಾರ’ ಸಿನಿಮಾದಲ್ಲಿ ಕೂಡ ನಟಿಸಿದ್ದರು. ಆ ಚಿತ್ರದಲ್ಲಿ ಅವರು ಬುಳ್ಳ ಪಾತ್ರದಲ್ಲಿ ನಟಿಸಿದ್ದರು.

 



Source link

Leave a Reply

Your email address will not be published. Required fields are marked *