ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಪ್ರಮುಖ 6 ಜಲಾಶಯಗಳು ಶೇ.90ರಷ್ಟು ಭರ್ತಿಯಾಗಿವೆ. ಸೂಪಾ ಜಲಾಶಯ ಶೇ.95ರಷ್ಟು ಭರ್ತಿಯಾಗಿದ್ದು, ಇತರ ಜಲಾಶಯಗಳೂ ಪೂರ್ಣ ಪ್ರಮಾಣದತ್ತ ಸಾಗುತ್ತಿವೆ. ಮಳೆ ಮುಂದುವರಿದರೆ ಜಲಾಶಯಗಳು ಉಕ್ಕಿ ಹರಿಯುವ ಸಾಧ್ಯತೆ ಇದೆ.
ಉತ್ತರ ಕನ್ನಡ/ಕಾರವಾರ (ಜು.03): ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿದಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ಎಲ್ಲ ಜಲಾಶಯಗಳಿಗೆ ನಿರೀಕ್ಷಿತ ನೀರಿನ ಒಳಹರಿವು ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪ್ರಮುಖ 6 ಜಲಾಶಯಗಳು ಶೇ.90ರಷ್ಟು ಭರ್ತಿಯಾಗಿದ್ದು, ಶೀಘ್ರದಲ್ಲೇ ಪೂರ್ಣ ಪ್ರಮಾಣಸಾಧ್ಯತೆ ಇದೆ. ಜಿಲ್ಲೆಯ ಪ್ರಮುಖ 6 ಜಲಾಶಯಗಳ ಇಂದಿನ ನೀರಿನ ಮಟ್ಟ, ಒಳಹರಿವು ಹಾಗೂ ಹೊರ ಹರಿವಿನ ವಿವರಗಳು ಈ ಕೆಳಗಿನಂತಿವೆ:
ಸೂಪಾ ಜಲಾಶಯ:
- ಗರಿಷ್ಠ ಮಟ್ಟ: 564.00 ಟಿಎಂಸಿ
- ಇಂದಿನ ಮಟ್ಟ: 539.12 ಟಿಎಂಸಿ
- ಒಳಹರಿವು: 36,874.53 ಕ್ಯೂಸೆಕ್
- ಹೊರ ಹರಿವು: 5,584.79 ಕ್ಯೂಸೆಕ್
ಜಿಲ್ಲೆಯ ಅತಿದೊಡ್ಡ ಜಲಾಶಯವಾದ ಸೂಪಾ ಕೂಡ ಈಗಾಗಲೇ ಶೇ. 95ರಷ್ಟು ಮಟ್ಟ ತಲುಪಿದೆ.
ಕದ್ರಾ ಜಲಾಶಯ:
- ಗರಿಷ್ಠ ಮಟ್ಟ: 34.50 ಟಿಎಂಸಿ
- ಇಂದಿನ ಮಟ್ಟ: 30.00 ಟಿಎಂಸಿ
- ಒಳಹರಿವು: 23,182 ಕ್ಯೂಸೆಕ್
- ಹೊರ ಹರಿವು: 19,904 ಕ್ಯೂಸೆಕ್
ಕದ್ರಾ ಜಲಾಶಯ ಶೇ. 87ರಷ್ಟು ಮಟ್ಟ ತಲುಪಿದ್ದು, ಮಳೆ ಮುಂದುವರಿದರೆ ಶೀಘ್ರದಲ್ಲೇ ಭರ್ತಿಯಾಗುವ ಸಾಧ್ಯತೆ.
ಕೊಡಸಳ್ಳಿ ಜಲಾಶಯ:
- ಗರಿಷ್ಠ ಮಟ್ಟ: 75.50 ಟಿಎಂಸಿ
- ಇಂದಿನ ಮಟ್ಟ: 68.90 ಟಿಎಂಸಿ
- ಒಳಹರಿವು: 12,717 ಕ್ಯೂಸೆಕ್
- ಹೊರ ಹರಿವು: 5,647 ಕ್ಯೂಸೆಕ್
ಕೊಡಸಳ್ಳಿಯೂ ಶೇ. 91ರಷ್ಟು ಭರ್ತಿಯಾಗಿದ್ದು, ನಿರಂತರವಾಗಿ ಒಳ ಮತ್ತು ಹೊರ ಹರಿವು ಕಾಣುತ್ತಿದೆ.
ತಟ್ಟಿಹಳ್ಳ ಜಲಾಶಯ:
- ಗರಿಷ್ಠ ಮಟ್ಟ: 468.38 ಟಿಎಂಸಿ
- ಇಂದಿನ ಮಟ್ಟ: 455.51 ಟಿಎಂಸಿ
- ಒಳಹರಿವು: 694.00 ಕ್ಯೂಸೆಕ್
- ಹೊರ ಹರಿವು: 0.00 ಕ್ಯೂಸೆಕ್
ತಟ್ಟಿಹಳ್ಳ ಜಲಾಶಯ ಕೂಡ ಶೇ.92ರಷ್ಟು ಭರ್ತಿಯಾಗಿದೆ. ಯಾವುದೇ ಹೊರ ಹರಿವು ಇಲ್ಲದಿರುವುದು ಗಮನಾರ್ಹ.
ಬೊಮ್ಮನಹಳ್ಳಿ ಜಲಾಶಯ:
- ಗರಿಷ್ಠ ಮಟ್ಟ: 438.38 ಟಿಎಂಸಿ
- ಇಂದಿನ ಮಟ್ಟ: 435.80 ಟಿಎಂಸಿ
- ಒಳಹರಿವು: 9,152 ಕ್ಯೂಸೆಕ್
- ಹೊರ ಹರಿವು: 4,807 ಕ್ಯೂಸೆಕ್
ಇಲ್ಲಿ ಶೇ. 99ರಷ್ಟು ಮಟ್ಟವನ್ನು ತಲುಪಿರುವುದರಿಂದ ಸಮತೋಲನ ಸಾಧಿಸಲು ಹೊರ ಹರಿವನ್ನು ನಿರ್ವಹಿಸಲಾಗುತ್ತಿದೆ.
ಗೇರುಸೊಪ್ಪ ಜಲಾಶಯ:
- ಗರಿಷ್ಠ ಮಟ್ಟ: 55.00 ಟಿಎಂಸಿ
- ಇಂದಿನ ಮಟ್ಟ: 50.55 ಟಿಎಂಸಿ
- ಒಳಹರಿವು: 10,108 ಕ್ಯೂಸೆಕ್
- ಹೊರ ಹರಿವು: 7,134 ಕ್ಯೂಸೆಕ್
ಗೇರುಸೊಪ್ಪ ಜಲಾಶಯ ಕೂಡ ಶೇ.91.9ರಷ್ಟು ಭರ್ತಿಯಾಗಿದ್ದು, ಅನಾಹುತಕ್ಕೆ ಅವಕಾಶವಿಲ್ಲದಂತೆ ನಿರ್ವಹಣೆ ನಡೆಯುತ್ತಿದೆ.