ಮತ್ತೆಂದೂ ಕನ್ನಡ ಚಿತ್ರದಲ್ಲಿ ರಜನಿಕಾಂತ್ ನಟಿಸದಿರಲು ‘ಆ ಒಂದು ಘಟನೆ’ಯೇ ಕಾರಣ..? | Rajinikanth Did Not Act Again In Kannada Movies Reason Behind This Revealed

ಮತ್ತೆಂದೂ ಕನ್ನಡ ಚಿತ್ರದಲ್ಲಿ ರಜನಿಕಾಂತ್ ನಟಿಸದಿರಲು ‘ಆ ಒಂದು ಘಟನೆ’ಯೇ ಕಾರಣ..? | Rajinikanth Did Not Act Again In Kannada Movies Reason Behind This Revealed



ಮತ್ತೆಂದೂ ಕನ್ನಡ ಚಿತ್ರದಲ್ಲಿ ರಜನಿಕಾಂತ್ ನಟಿಸದಿರಲು ‘ಆ ಒಂದು ಘಟನೆ’ಯೇ ಕಾರಣ..? | Rajinikanth Did Not Act Again In Kannada Movies Reason Behind This Revealed

ಒಂದು ಕಾಲದಲ್ಲಿ ನಟ ರಜನಿಕಾಂತ್ ಅವರು ಧೂಮಪಾನ ಹಾಗೂ ಮದ್ಯಪಾನ ಮಾಡುತ್ತಿದ್ದರು. ಆಗ ಅವರು ಅನಾರೋಗ್ಯಕ್ಕೆ ಈಡಾಗಿದ್ದರು. ಯಾವಾಗ ನಟ ರಜನಿಕಾಂತ್ ಅವರು ಅನಾರೋಗ್ಯಕ್ಕೆ ತುತ್ತಾದರೋ, ಆಗಿನಿಂದ ಅವರು ತಮ್ಮ ಜೀವನದಲ್ಲಿ ಶಿಸ್ತು ರೂಢಿಸಿಕೊಂಡರು, ಆಧ್ಯಾತ್ಮಿಕ ದಾರಿಯಲ್ಲಿಯೂ ಸಾಗತೊಡಗಿದರು.

ಏಷ್ಯಾದಲ್ಲೇ ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ಅಂದ್ರೆ ಸುಮ್ನೆನಾ? ಅವ್ರು ಏರಿದ ಭಾರೀ ಎತ್ತರ ಅಳೆಯೋದಕ್ಕೇ ಅಸಾಧ್ಯ. ಸಿನಿಮಾದಲ್ಲಂತೂ ನಟ ರಜನಿಕಾಂತ್ ಅವರು ಸೂಪರ್ ಸ್ಟಾರ್. ಅದರ ಜೊತೆಜೊತೆಗೆ, ನಟ ರಜನಿ ಅವರು ಆಧ್ಯಾತ್ಮಿಕ ಹಾಗೂ ಧಾರ್ಮಿಕ ವ್ಯಕ್ತಿ ಕೂಡ ಹೌದು. ಇಂದು ರಜನಿಕಾಂತ್ ಸಂಭಾವನೆ ಎಷ್ಟಿದೆ ಎಂದರೆ ಅದರಿಂದಲೇ ಒಂದು ಸಾಮಾನ್ಯ ಬಜೆಟ್‌ನ ಸಿನಿಮಾ ಮಾಡಬಹುದು. ಅಂಥ ರಜನಿಕಾಂತ್ ಅವರು ಒಂದು ಕಾಲದಲ್ಲಿ ಬೆಂಗಳೂರಿನ ಬೀದಿಯಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲ, ಕನ್ನಡ ಸಿನಿಮಾದಲ್ಲಿಯೇ ಮೊದಲು ಬಣ್ಣ ಹಚ್ಚಿದ್ದಾರೆ.

ಹೌದು, ನಟ ರಜನಿಕಾಂತ್ ಅವರಿಗೆ ಕನ್ನಡ ಸಿನಿಮಾದಲ್ಲಿ ಮತ್ತೆಮತ್ತೆ ಸರಿಯಾದ ಅವಕಾಶ ಸಿಗಲಿಲ್ಲ. ಆದರೆ ಈ ಅನುಭವ ಹಲವರಿಗೆ ಆಗುತ್ತೆ. ಆದರೆ ನಟ ರಜನಿಕಾಂತ್ ಅವರು ಕನ್ನಡ ಸಿನಿಮಾರಂಗ ಬಿಟ್ಟು ಶಾಶ್ವತವಾಗಿ ತಮಿಳು ಚಿತ್ರರಂಗಕ್ಕೆ ಹೋಗಲು ಕಾರಣವಾಗಿದ್ದು ಮಾತ್ರ ಆ ಒಂದು ಘಟನೆ. ಅಂದು ಹಾಗಾಗದಿದ್ದರೆ ಬಹುಶಃ ನಟ ರಜನಿಕಾಂತ್ ಅವರು ಕನ್ನಡ ಸಿನಿಮಾರಂಗದಲ್ಲೇ ಮುಂದುವರೆಯುತ್ತಿದ್ದರರೋ ಏನೋ! ಹಾಗಿದ್ದರೆ ಅಂದು ಏನಾಗಿತ್ತು? ಇಲ್ಲಿದೆ ನೋಡಿ ಸ್ಟೋರಿ..

ಹೌದು, ಅಂದು ಒಂದು ದಿನ ಕನ್ನಡ ಸಿನಿಮಾವೊಂದಕ್ಕೆ ನಟ ರಜನಿಕಾಂತ್ ಅವರು ಮೇಕಪ್‌ ರೂಂಗೆ ಹೋಗಿ ಕುಳಿತರು, ಮೇಕಪ್ ಹಾಕಿದ್ದೂ ಆಯ್ತು. ಶೂಟಿಂಗ್‌ ಸಲುವಾಗಿ ಕಾಯುತ್ತಾ ಕುಳಿತಿದ್ದರು ನಟ ರಜನಿಕಾಂತ್. ಅಷ್ಟರಲ್ಲಿ ಅದೇನು ಬದಲಾವಣೆ ಆಯ್ತೋ ಏನೋ, ನಟ ರಜನಿಕಾಂತ್ ಅವರನ್ನು ಮತ್ತೆ ಮೇಕಪ್‌ ರೂಮಿಗೆ ಕರೆಸಿ ಅವರ ಮೇಕಪ್ ತೆಗೆದು ಮನೆಗೆ ಕಳಿಸಲಾಯ್ತು. ಅಂದು ನಡೆದ ಘಟನೆ ಬಳಿಕ ನಟ ರಜನಿಕಾಂತ್ ಅವರು ತಮಿಳು ಚಿತ್ರರಂಗಕ್ಕೆ ಹೋದರು, ಮತ್ತೆಂದೂ ಕನ್ನಡ ಸಿನಿಮಾರಂಗದ ಕಡೆಗೆ ಮುಖ ಮಾಡಲೇ ಇಲ್ಲ.

ತಮಿಳು ಚಿತ್ರರಂಗದಲ್ಲಿ ನಟ ರಜನಿಕಾಂತ್ ಅವರು ಯಾರೂ ಬೆಳೆಯದಷ್ಟು ಎತ್ತರಕ್ಕೆ ಬೆಳೆದರು. ತಮಿಳು ಚಿತ್ರರಂಗ ಮಾತ್ರವಲ್ಲ, ಭಾರತದಲ್ಲೇ ರಜನಿಕಾಂತ್ ಅವರು ನಂಬರ್ ಒನ್ ನಟ. ಅಷ್ಟೇ ಅಲ್ಲ, ಇಡೀ ಏಷ್ಯಾ ಖಂಡದಲ್ಲೇ ನಟ ರಜನಿಕಾಂತ್ ಅವರಷ್ಟು ಸಂಭಾವನೆ ತೆಗೆದುಕೊಳ್ಳುವ ಮತ್ತೊಬ್ಬರು ನಟ ಇಲ್ಲವೇ ಇಲ್ಲ. ಇತ್ತೀಚೆಗೆ ತೆರೆ ಕಂಡಿರುವ ‘ಕೂಲಿ’ ಚಿತ್ರಕ್ಕೆ ನಟ ರಜನಿಕಾಂತ್ ಅವರು ಬರೋಬ್ಬರಿ 300 ಕೋಟಿ ಸಂಭಾವನೆ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಒಂದು ಕಾಲದಲ್ಲಿ ನಟ ರಜನಿಕಾಂತ್ ಅವರು ಧೂಮಪಾನ ಹಾಗೂ ಮದ್ಯಪಾನ ಮಾಡುತ್ತಿದ್ದರು. ಆಗ ಅವರು ಅನಾರೋಗ್ಯಕ್ಕೆ ಈಡಾಗಿದ್ದರು. ಯಾವಾಗ ನಟ ರಜನಿಕಾಂತ್ ಅವರು ಅನಾರೋಗ್ಯಕ್ಕೆ ತುತ್ತಾದರೋ, ಆಗಿನಿಂದ ಅವರು ತಮ್ಮ ಜೀವನದಲ್ಲಿ ಶಿಸ್ತು ರೂಢಿಸಿಕೊಂಡರು, ಆಧ್ಯಾತ್ಮಿಕ ದಾರಿಯಲ್ಲಿಯೂ ಸಾಗತೊಡಗಿದರು. ಅಲ್ಲಿಂದ ಮುಂದೆ ಆರೋಗ್ಯದ ಬಗ್ಗೆ ತುಂಬಾ ಕಾಳಜಿ ವಹಿಸುವುದಕ್ಕೆ ಶುರು ಮಾಡಿದರು.

ರಜನಿಕಾಂತ್‌ ಅವರಿಗೆ ಕೇವಲ ಆಧ್ಯಾತ್ಮಿಕತೆ ಕಡೆಗಷ್ಟೇ ಒಲವು ಎಂದು ಕೊಂಡಿದ್ದವರೇ ಹೆಚ್ಚು. ಆದರೆ, ಆರೋಗ್ಯದ ಕಡೆಗೂ ಸಿಕ್ಕಾಪಟ್ಟೆ ಕಾಳಜಿ ವಹಿಸುವ ರಜನಿ, ಇತ್ತೀಚೆಗೆ ‘ಕೂಲಿ’ ಸಿನಿಮಾ ಆಡಿಯೋ ಲಾಂಚ್ ಇವೆಂಟ್‌ನಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಬಗ್ಗೆ ಮಾತಾಡಿದ್ದರು. ತನ್ನ ಅಭಿಮಾನಿಗಳಿಗೆ ಹಾರ್ಟ್, ಲಿವರ್, ಕಿಡ್ನಿಯನ್ನು ಸರಿಯಾಗಿ ಇಟ್ಟುಕೊಳ್ಳುವುದಕ್ಕೆ ಕರೆ ನೀಡಿದ್ದರು.

ಜಿಮ್‌ನಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್:

ಹೌದು, ನಟ ರಜನಿಕಾಂತ್‌ಗೆ ಈಗ 74 ವರ್ಷ ಆಗಿದೆ. ಈ ವಯಸ್ಸಿನಲ್ಲಿ ಬೇರೆ ಯಾರೇ ಆಗಿದ್ದರೂ ಒಂದಿಷ್ಟು ದೂರ ವಾಕ್ ಮಾಡಿ ಸುಮ್ಮನೆ ಇದ್ದು ಬಿಡುತ್ತಾರೆ. ಆದರೆ, ನಟ ರಜನಿ ಹಾಗೆ ಮಾಡುತ್ತಿಲ್ಲ. ಜಿಮ್‌ನಲ್ಲಿಸ ಕಸರತ್ತು ಮಾಡುವ ಮೂಲಕ ತಾವಿನ್ನೂ ಜಿಮ್‌ನಲ್ಲಿ ವರ್ಕೌಟ್ ಮಾಡುವಷ್ಟು ಫೀಟ್ ಆಗಿದ್ದೇನೆ, ಹಾಗೂ ಇನ್ನೂ ಹೆಚ್ಚು ಫಿಟ್ ಆಗಲು ಬಯಸುತ್ತೇನೆ ಎಂಬ ಸಂದೇಶವನ್ನು ತಮ್ಮ ಫ್ಯಾನ್ಸ್ ಸೇರಿದಂತೆ ಇಡೀ ಜಗತ್ತಿಗೇ ಕೊಡುತ್ತಿದ್ದಾರೆ ಎನ್ನಬಹುದೇ?

ಭಾರತದ ಸೂಪರ್‌ಸ್ಟಾರ್ ರಜನಿಕಾಂತ್ ಯಾವಾಗಲೂ ತುಂಬಾ ಸಿಂಪಲ್ ಆಗಿರುತ್ತಾರೆ. ಇಡೀ ವಿಶ್ವವೇ ಅವರನ್ನು ಗಮನಿಸುತ್ತಿದ್ದರೂ, ಅವರು ದುಬಾರಿ ಕಾರು, ಲೈಫ್‌ ಸ್ಟೈಲ್ ರೂಢಿಸಿಕೊಂಡಿಲ್ಲ. ಅತೀ ಸಾಮಾನ್ಯ ವ್ಯಕ್ತಿಯಂತೆ ಜೀವನ ನಡೆಸುತ್ತಿರೋದು ಅಭಿಮಾನಿಗಳು ಹಾಗೂ ಎಲ್ಲರ ಪ್ರೀತಿಗೆ ಕಾರಣ. ಯಾವತ್ತಿಗೂ ದೇಹ ಹಾಗೂ ಮನಸ್ಸನ್ನು ಫ್ರೆಶ್ ಆಗಿ ಇಟ್ಟುಕೊಳ್ಳುವ ಕಡೆಗೆ ಗಮನ ಹರಿಸುತ್ತಾರೆ ರಜನಿಕಾಂತ್.

ಪ್ರತಿದಿನ ವಾಕ್ ಮಿಸ್ ಮಾಡೋದೇ ಇಲ್ಲ. ಜೊತೆಗೆ, ಯೋಗವನ್ನು ಮಾಡುತ್ತಾರೆ. ಹಾಗೇ ಮಾನಸಿಕ ನೆಮ್ಮದಿಗೆ ಮೆಡಿಟೇಷನ್, ಯೋಗ ಮಾಡುತ್ತಾರೆ. ರಜನಿಕಾಂತ್ ಆಹಾರದಲ್ಲಿ ಸಿಕ್ಕಾಪಟ್ಟೆ ಕಟ್ಟುನಿಟ್ಟು. ಆರೋಗ್ಯಕರವಲ್ಲದ ಆಹಾರವನ್ನು ತಿನ್ನೋದಿಲ್ಲ, ಫಾಸ್ಟ್‌ಫುಡ್‌ಗಳನ್ನು ಮುಟ್ಟೋದೂ ಇಲ್ಲ. ಚೀಸ್, ಮಯೋನಿಸ್ ಹಾಗೂ ಕೊಬ್ಬು ಇರುವ ಮಾಂಸವನ್ನು ಸೇವಿಸುವುದಿಲ್ಲ. ಹಾಗೇ ಸಕ್ಕರೆ, ಅತಿಯಾದ ಉಪ್ಪು, ಸಿಹಿತಿಂಡಿಗಳನ್ನು ಅಪ್ಪಿತಪ್ಪಿಯೂ ಹೊಟ್ಟೆಯೊಳಕ್ಕೆ ಹಾಕೋದಿಲ್ಲ. ತಾಜಾ ಹಣ್ಣುಗಳು, ತರಕಾರಿಗಳು ಹಾಗೂ ಅತಿಯಾದ ಪ್ರೊಟೀನ್ ಇರುವ ಆಹಾರಗಳು ಬಳಸುತ್ತಾರೆ ಎಮದು ವರದಿಯಾಗಿದೆ.



Source link

Leave a Reply

Your email address will not be published. Required fields are marked *