ಹೂತು ಹಾಕಿದ ಭಯಾನಕ ಅನುಭವ ತೆರೆದಿಟ್ಟ ‘ಮೈನಾ’ ಸೀರಿಯಲ್​ ನಾಯಕಿ ವಿಜಯಲಕ್ಷ್ಮಿ | Maina Serial Actress Vijayalakshmi About Horrible Experience Which Shooting Suc

ಹೂತು ಹಾಕಿದ ಭಯಾನಕ ಅನುಭವ ತೆರೆದಿಟ್ಟ ‘ಮೈನಾ’ ಸೀರಿಯಲ್​ ನಾಯಕಿ ವಿಜಯಲಕ್ಷ್ಮಿ | Maina Serial Actress Vijayalakshmi About Horrible Experience Which Shooting Suc



ಹೂತು ಹಾಕಿದ ಭಯಾನಕ ಅನುಭವ ತೆರೆದಿಟ್ಟ ‘ಮೈನಾ’ ಸೀರಿಯಲ್​ ನಾಯಕಿ ವಿಜಯಲಕ್ಷ್ಮಿ | Maina Serial Actress Vijayalakshmi About Horrible Experience Which Shooting Suc

ಸೀರಿಯಲ್​ಗಳಲ್ಲಿ ಆ್ಯಕ್ಷನ್​ ದೃಶ್ಯಗಳನ್ನು ಮಾಡುವಾಗ, ಕೆಲವೊಮ್ಮೆ ಎಷ್ಟು ಡೇಂಜರ್​ ಇರುತ್ತದೆ ಎನ್ನುವ ಬಗ್ಗೆ ಕಿರುತೆರೆ ನಟಿ ವಿಜಯಲಕ್ಷ್ಮಿ ಹೇಳಿದ್ದಾರೆ. ಹೂತು ಹಾಕಿರುವ ದೃಶ್ಯದ ಕುರಿತು ಅವರು ಮಾತನಾಡಿದ್ದಾರೆ. 

ತೆರೆಯ ಮೇಲೆ ಒಂದು ದೃಶ್ಯವನ್ನು ತೋರಿಸುವಾಗ ಅದರ ಹಿಂದೆ ನಟ-ನಟಿಯರು ಎಷ್ಟೆಲ್ಲಾ ಸರ್ಕಸ್​ ಮಾಡಿರುತ್ತಾರೆ. ಎಷ್ಟೋ ಸಂದರ್ಭದಲ್ಲಿ ಜೀವಕ್ಕೆ ಅಪಾಯ ತಂದುಕೊಂಡಿರುವ ಉದಾಹರಣೆಗಳೂ ಸಾಕಷ್ಟು ಇವೆ. ಅದರಲ್ಲಿಯೂ ಆ್ಯಕ್ಷನ್​ ದೃಶ್ಯಗಳನ್ನು ಮಾಡುವಾಗ ನಟ-ನಟಿಯರಿಗೆ ಗಂಭೀರ ಸ್ವರೂಪದ ಗಾಯಗಳಾಗುವ ಸುದ್ದಿಗಳೂ ಆಗ್ಗಾಗ್ಗೆ ಬರುತ್ತಲೇ ಇರುತ್ತವೆ. ಆದರೆ ಒಂದು ಚಿತ್ರ ಯಶಸ್ಸು ಆಗಬೇಕಾದರೆ ನಟರು ಇವೆಲ್ಲಾ ಮಾಡುವುದು ಅನಿವಾರ್ಯವೇ. ಇಷ್ಟು ಮಾಡಿದ ಮೇಲೂ ಚಿತ್ರ ಯಶಸ್ವಿ ಆಗಿಯೇ ಆಗುತ್ತದೆ ಎಂದೂ ಹೇಳುವುದು ಕಷ್ಟ. ಇದು ಸಿನಿಮಾದ ಮಾತಾದರೆ, ಇಂದು ಸೀರಿಯಲ್​ಗಳೂ ಯಾವ ಸಿನಿಮಾಕ್ಕೂ ಕಮ್ಮಿ ಏನಿಲ್ಲ. ಸಿನಿಮಾಗಳ ಮಾದರಿಯಲ್ಲಿಯೇ ದೃಶ್ಯಗಳ ಶೂಟಿಂಗ್​ ನಡೆಯುತ್ತದೆ.

ಇದೀಗ ಅದೇ ರೀತಿಯ ಭಯಾನಕ ಅನುಭವವನ್ನು ಹೇಳಿದ್ದಾರೆ ಕಿರುತೆರೆ ನಟಿ, ಮೈನಾ ಸೀರಿಯಲ್​ ಮೂಲಕ ಫೇಮಸ್​ ಆಗಿರೋ ವಿಜಯಲಕ್ಷ್ಮಿ. bodhiable ಇನ್​ಸ್ಟಾಗ್ರಾಮ್​ನಲ್ಲಿ ಈ ವಿಷಯವನ್ನು ಶೇರ್​ ಮಾಡಲಾಗಿದೆ. ಇದರಲ್ಲಿ ನಟಿ, ತಮ್ಮನ್ನು ಸೀರಿಯಲ್​ಗಾಗಿ ಹೂತು ಹಾಕಿದ ದೃಶ್ಯವನ್ನು ನೆನಪಿಸಿಕೊಂಡಿದ್ದಾರೆ. ನನ್ನನ್ನು ಒಬ್ಬ ವಿಲನ್​ ಹೊಡೆದು ಹಾಕಿ ಮಣ್ಣಿನಲ್ಲಿ ಹೂತಾಕುವ ಸೀನ್​ ಇತ್ತು. ಅರ್ಧ ದಿನ ಆ ಸೀನ್​ ಮಾಡಬೇಕಾಯ್ತು. ಯಾವುದೇ ರೀತಿಯ ಡ್ಯೂಪ್​ ನಾನು ತೆಗೆದುಕೊಳ್ಳಲಿಲ್ಲ. ಮಣ್ಣನ್ನು ಅಗೆದು, ಗುಂಡಿಯ ಒಳಗೆ ಹೂತು ಹಾಕಿ ಮತ್ತೆ ಮೇಲಿನಿಂದ ಮಣ್ಣನ್ನು ಮುಚ್ಚಿದ್ರು. ಕೆಳಗೆ, ಮೇಲೆ ಎಲ್ಲಾ ಮಣ್ಣು ಚುಚ್ಚುತ್ತಿತ್ತು. ಕಂಪ್ಲೀಟ್​ ಮುಚ್ಚಿದ್ರು. ಆ ಎಕ್ಸ್​ಪೀರಿಯೆನ್ಸ್​ ತುಂಬಾ ಭಯಾನಕವಾಗಿತ್ತು. ಉಸಿರಾಡಲೂ ಆಗ್ತಿರಲಿಲ್ಲ ಎಂದಿದ್ದಾರೆ. ಇದು ಸೀರಿಯಲ್​ಗಳಲ್ಲಿ ಕೂಡ ತಾರೆಯರು ಎಷ್ಟು ರಿಸ್ಕ್​ ತೆಗೆದುಕೊಳ್ತಾರೆ ಎನ್ನುವುದನ್ನು ನೋಡಬಹುದಾಗಿದೆ.

ಕೆಲ ದಿನಗಳ ಹಿಂದೆ ಕಾಯಲ್​ ಎನ್ನುವ ತಮಿಳು ಸೀರಿಯಲ್​ನ ಶೂಟಿಂಗ್​ ದೃಶ್ಯದಲ್ಲಿ ನಟಿಯೇ ಖುದ್ದಾಗಿ . ಅಪಘಾತವೊಂದರ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು ಅದರ ವಿಡಿಯೋ ವೈರಲ್​ ಆಗಿತ್ತು. ಇದನ್ನು ನೋಡಿದರೆ ನಿಜಕ್ಕೂ ಮೈ ಜುಂ ಎನ್ನುವುದು ಗ್ಯಾರೆಂಟಿ. ಇದರಲ್ಲಿ ನಟಿ ಅಪಘಾತಗೊಳ್ಳುವ ದೃಶ್ಯವಿದ್ದು, ಅದನ್ನುಯಾವ ರೀತಿ ಶೂಟ್​ ಮಾಡಲಾಗಿದೆ ಎನ್ನುವುದನ್ನು ನೋಡಬಹುದು. ನಟಿಗೆ ಹಗ್ಗ ಕಟ್ಟಿ ಹೇಗೆ ನೇತು ಹಾಕಲಾಗಿದೆ ಎನ್ನುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ನಂತರ ಆ ಹಗ್ಗವನ್ನು ಕಾಣದಂತೆ ಮಾಡಲಾಗುತ್ತದೆ. ಅಪಘಾತವಾದಾಗ ಡಿಕ್ಕಿಯ ರಭಸಕ್ಕೆ ಗಾಳಿಯಲ್ಲಿ ತೇಲಿಹೋಗಿ ಬೀಳುವ ದೃಶ್ಯವನ್ನು ಹೇಗೆ ಮಾಡಲಾಗುತ್ತದೆ ಎನ್ನುವುದನ್ನು ಇದರಲ್ಲಿ ತೋರಿಸಲಾಗಿದೆ.

ಈ ಅಪಘಾತದ ಶೂಟಿಂಗ್​ ನೋಡಿದರೆ ತೆರೆಯ ಹಿಂದೆ ನಟ-ನಟಿಯರು ಎಷ್ಟೊಂದು ಸರ್ಕಸ್​ ಮಾಡುತ್ತಾರೆ ಎನ್ನುವುದನ್ನು ನೋಡಬಹುದು. ಒಂದು ಸಿನಿಮಾ ಅಥವಾ ಸೀರಿಯಲ್​ ಎಷ್ಟರಮಟ್ಟಿಗೆ ಸಕ್ಸಸ್​ ಆಗುತ್ತದೆಯೆಂದು ಹೇಳುವುದು ಕಷ್ಟ. ಹಾಗೆಂದು ಯಾವುದೇ ನಿರ್ದೇಶಕರು ತಮ್ಮ ಸರ್ವ ಪ್ರಯತ್ನವನ್ನೂ ಮಾಡಲೇಬೇಕು. ಅದಕ್ಕಾಗಿಯೇ ವೀಕ್ಷಕರಿಗೆ ಇಷ್ಟವಾಗುವಂಥ ಹೊಸ ಹೊಸ ರೋಚಕತನವನ್ನು ತೋರಿಸಲಾಗುತ್ತದೆ. ವೀಕ್ಷಕರಿಗೆ ರೋಚಕತೆ ಮುಂದಿಡಲು ಇಂಥ ಕೆಲವು ಕಠಿಣ ದೃಶ್ಯಗಳಿಗೆ ನಟ-ನಟಿಯರು ಒಗ್ಗಿಕೊಳ್ಳಲೇಬೇಕು. ಅವರಿಗೆ ಈ ರೀತಿಯ ಶೂಟಿಂಗ್​ ಮಾಡುವಾಗ ಎಲ್ಲ ರೀತಿಯ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆಯಾದರೂ ಇಂಥ ಆ್ಯಕ್ಷನ್​ ಶೂಟಿಂಗ್​ ಮಾಡುವುದು ಸುಲಭದ ಮಾತಲ್ಲ ಎನ್ನುವುದೂ ಅಷ್ಟೇ ದಿಟ.

 

 



Source link

Leave a Reply

Your email address will not be published. Required fields are marked *