ಹೃದಯದ ಆರೈಕೆಗೆ ಜಿಮ್, ಯೋಗ ಸಾಲದು; ಹೆಲ್ತ್‌ ಇನ್ಶೂರೆನ್ಸ್ ಇರಲೇಬೇಕು, ಹೇಗೆ ಹೆಲ್ಫ್ ಆಗುತ್ತೆ ಗೊತ್ತಾ? | Heart Health Gym And Yoga Benefits Health Insurance Coverage Rav

ಹೃದಯದ ಆರೈಕೆಗೆ ಜಿಮ್, ಯೋಗ ಸಾಲದು; ಹೆಲ್ತ್‌ ಇನ್ಶೂರೆನ್ಸ್ ಇರಲೇಬೇಕು, ಹೇಗೆ ಹೆಲ್ಫ್ ಆಗುತ್ತೆ ಗೊತ್ತಾ? | Heart Health Gym And Yoga Benefits Health Insurance Coverage Rav



ಒಳ್ಳೆಯ ಇನ್ಶೂರೆನ್ಸ್ ಪಾಲಿಸಿ ಆಯ್ಕೆ ಮಾಡಿಕೊಳ್ಳುವುದರಿಂದ ಭವಿಷ್ಯದಲ್ಲಿ ಬರಬಹುದಾದ ಭಾರಿ ಚಿಕಿತ್ಸಾ ವೆಚ್ಚಗಳಿಂದ ಪಾರಾಗಬಹುದು. 

ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಜಿಮ್, ಯೋಗ, ಒಳ್ಳೆಯ ಆಹಾರ ಪದ್ಧತಿ ಪಾಲಿಸುವುದು ಒಳ್ಳೆಯದು. ಆದರೆ, ಹಠಾತ್ ಹೃದಯ ಸಂಬಂಧಿ ಕಾಯಿಲೆಗಳ ಚಿಕಿತ್ಸಾ ವೆಚ್ಚಗಳು ತುಂಬಾ ದುಬಾರಿಯಾಗಬಹುದು. ಸರಿಯಾದ ಆರೋಗ್ಯ ವಿಮೆ (Health insurance) ಇನ್ಶೂರೆನ್ಸ್‌ನ ಮಹತ್ವ ಇಲ್ಲಿ ಅರಿತುಕೊಳ್ಳಬೇಕು. ಒಳ್ಳೆಯ ಇನ್ಶೂರೆನ್ಸ್ ಪಾಲಿಸಿ ಆಯ್ಕೆ ಮಾಡಿಕೊಳ್ಳುವುದರಿಂದ ಭವಿಷ್ಯದಲ್ಲಿ ಬರಬಹುದಾದ ಭಾರಿ ಚಿಕಿತ್ಸಾ ವೆಚ್ಚಗಳಿಂದ ಪಾರಾಗಬಹುದು.

ಹೃದಯ ಸಂಬಂಧಿ ಕಾಯಿಲೆಗಳು

ಪ್ರತಿ ವರ್ಷ ಸುಮಾರು 1.79 ಕೋಟಿ ಜನ ಹೃದಯ ಸಂಬಂಧಿ ಕಾಯಿಲೆಗಳಿಂದ ಸಾವನ್ನಪ್ಪುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ. ಇದರಲ್ಲಿ 80% ಸಾವುಗಳು ಹೃದಯಾಘಾತ ಮತ್ತು ಪಾರ್ಶ್ವವಾಯುವಿನಿಂದ ಸಂಭವಿಸುತ್ತವೆ. ಇನ್ನೂ ಆಘಾತಕಾರಿ ಸಂಗತಿಯೆಂದರೆ, ಈ ಸಾವುಗಳಲ್ಲಿ ಮೂರನೇ ಒಂದು ಭಾಗ 70 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಸಂಭವಿಸುತ್ತದೆ. ಅನಾರೋಗ್ಯಕರ ಆಹಾರ ಪದ್ಧತಿ, ವ್ಯಾಯಾಮದ ಕೊರತೆ, ಧೂಮಪಾನ, ಅತಿಯಾದ ಮದ್ಯಪಾನ ಇವು ಹೃದ್ರೋಗಗಳಿಗೆ ಪ್ರಮುಖ ಕಾರಣಗಳು. ಜೊತೆಗೆ, ವಾಯು ಮಾಲಿನ್ಯ ಕೂಡ ಒಂದು ಪ್ರಮುಖ ಅಂಶ.

ಇದನ್ನೂ ಓದಿ: Heart attacks in Children: ಮಕ್ಕಳಲ್ಲಿ ಹೃದಯಾಘಾತಕ್ಕೆ ಮೊಬೈಲ್‌ ಬಳಕೆ ಕಾರಣ! KMCRI ಆಘಾತಕಾರಿ ವರದಿ ಬಹಿರಂಗ

ಇನ್ಶುರೆನ್ಸ್ ಏಕೆ ಬೇಕು?

ಹೃದಯ ಸಂಬಂಧಿ ಕಾಯಿಲೆಗಳ ಚಿಕಿತ್ಸೆಗೆ ತುಂಬಾ ಖರ್ಚಾಗುತ್ತದೆ. ಆಸ್ಪತ್ರೆಯ ವೆಚ್ಚಗಳು ಮಾತ್ರ ಹತ್ತಾರು ಸಾವಿರದಿಂದ ಲಕ್ಷಗಳವರೆಗೆ ಇರಬಹುದು. ಇದು ಚಿಕಿತ್ಸೆಯ ಸ್ವರೂಪ, ರೋಗದ ತೀವ್ರತೆ, ಆಸ್ಪತ್ರೆಯ ದರಗಳನ್ನು ಅವಲಂಬಿಸಿರುತ್ತದೆ. ಜನರು ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಲು ಪ್ರಾರಂಭಿಸಿದ್ದರೂ, ಆರೋಗ್ಯ ಇನ್ಶೂರೆನ್ಸ್‌ನ ಅವಶ್ಯಕತೆ ಇನ್ನೂ ಇದೆ.

ಹೆಲ್ತ್‌ ಇನ್ಶೂರೆನ್ಸ್‌ನಿಂದ ರಕ್ಷಣೆ

ಹೃದಯ ಸಂಬಂಧಿ ಕಾಯಿಲೆಗಳಿಗೆ ಆಸ್ಪತ್ರೆಗೆ ದಾಖಲಾದಾಗ ಬಳಸಬಹುದಾದ ವಿವಿಧ ರೀತಿಯ ಕವರೇಜ್‌ಗಳಿವೆ.

ಪೂರ್ವ-ಆಸ್ಪತ್ರೆ ವೆಚ್ಚಗಳು: ಆಸ್ಪತ್ರೆಗೆ ದಾಖಲಾಗುವ ಮೊದಲು ಮಾಡಿಸಿದ್ದ ಕನ್ಸಲ್ಟೇಷನ್, ಪರೀಕ್ಷೆಗಳು, ಔಷಧಿಗಳ ವೆಚ್ಚಗಳು ಇದರಲ್ಲಿ ಸೇರಿವೆ.

ನಂತರದ-ಆಸ್ಪತ್ರೆ ವೆಚ್ಚಗಳು: ಆಸ್ಪತ್ರೆಯಿಂದ ಬಿಡುಗಡೆಯಾದ ನಂತರದ ತಪಾಸಣೆಗಳು, ರೋಗನಿರ್ಣಯ, ಔಷಧಿಗಳ ವೆಚ್ಚಗಳನ್ನು ಪಾಲಿಸಿಯಲ್ಲಿ ತಿಳಿಸಿರುವ ಅವಧಿಯವರೆಗೆ ಇನ್ಶೂರೆನ್ಸ್ ಭರಿಸುತ್ತದೆ.

ಇದನ್ನೂ ಓದಿ: Heart Attacks: ಬೆಳಗ್ಗೆ 6 ರಿಂದ ಮಧ್ಯಾಹ್ನ 12ರ ನಡುವೆ ಹೃದಯಾಘಾತ ಹೆಚ್ಚು! ಹೃದ್ರೋಗ ತಜ್ಞರಿಂದ ಶಾಕಿಂಗ್ ವಿಷ್ಯ ಬಯಲು!

ಇತರ ಪ್ರಮುಖ ಪ್ರಯೋಜನಗಳು: ಆಂಬ್ಯುಲೆನ್ಸ್ ಕವರ್, ಸಮ್ ಇನ್ಶೂರ್ಡ್ ರೀಫಿಲ್, ಡೈಲಿ ಆಸ್ಪತ್ರೆ ನಗದು, ಗಂಭೀರ ಕಾಯಿಲೆ ಪ್ರಯೋಜನ ಕವರ್.

ಕೆಲವು ಇನ್ಶೂರೆನ್ಸ್ ಕಂಪನಿಗಳು ವೆಲ್‌ನೆಸ್ ಪ್ರಯೋಜನಗಳು ಮತ್ತು ಉಚಿತ ಆರೋಗ್ಯ ತಪಾಸಣೆಗಳನ್ನು ನೀಡುತ್ತವೆ. ಇದು ರೋಗವನ್ನು ಮೊದಲೇ ಪತ್ತೆ ಹಚ್ಚಲು ಮತ್ತು ತಡೆಯಲು ಸಹಾಯ ಮಾಡುತ್ತದೆ. ಹೃದಯ ಸಂಬಂಧಿ ಸಮಸ್ಯೆಗಳು ಮತ್ತು ಅವುಗಳಿಗೆ ಸಂಬಂಧಿಸಿದ ದೊಡ್ಡ ವೆಚ್ಚಗಳನ್ನು ತಪ್ಪಿಸಲು ಇದು ಸಹಾಯ ಮಾಡುತ್ತದೆ.

ಜಿಮ್‌ಗೆ ಹೋಗುವುದು ಮತ್ತು ಆರೋಗ್ಯಕರ ಆಹಾರ ಸೇವಿಸುವುದು ಹೃದಯದ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಆದರೆ, ಅನಿರೀಕ್ಷಿತ ಚಿಕಿತ್ಸಾ ವೆಚ್ಚಗಳನ್ನು ನಿಭಾಯಿಸಲು ಉತ್ತಮ ಆರೋಗ್ಯ ಇನ್ಶೂರೆನ್ಸ್ ಅತ್ಯಗತ್ಯ. ನಿಮ್ಮ ಹೃದಯ ಮತ್ತು ಜೇಬನ್ನು ರಕ್ಷಿಸಲು ಸರಿಯಾದ ಇನ್ಶೂರೆನ್ಸ್ ಪಾಲಿಸಿ ಆಯ್ಕೆ ಮಾಡಿಕೊಳ್ಳುವುದು ಮುಖ್ಯ.



Source link

Leave a Reply

Your email address will not be published. Required fields are marked *