Headlines

ಮೆಟ್ರೋ ಟಿಕೆಟ್ ಬಗ್ಗೆ ಚಿಂತೆ ಬಿಡಿ; ರಾಪಿಡೋ, ನಮ್ಮ ಯಾತ್ರಿ ಸೇರಿ 9 ಆಪ್‌ಗಳಲ್ಲಿ ಬುಕ್ ಮಾಡಿ! | Bengaluru Bmrcl Qr Ticketing Ondc 9 Popular Apps Nammd Metro Easy Ticketing Sat

ಮೆಟ್ರೋ ಟಿಕೆಟ್ ಬಗ್ಗೆ ಚಿಂತೆ ಬಿಡಿ; ರಾಪಿಡೋ, ನಮ್ಮ ಯಾತ್ರಿ ಸೇರಿ 9 ಆಪ್‌ಗಳಲ್ಲಿ ಬುಕ್ ಮಾಡಿ! | Bengaluru Bmrcl Qr Ticketing Ondc 9 Popular Apps Nammd Metro Easy Ticketing Sat



ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ಓಎನ್‌ಡಿಸಿ) ಮೂಲಕ ಕ್ಯೂಆರ್ ಟಿಕೆಟ್ ಸೇವೆಗಳನ್ನು ಪ್ರಾರಂಭಿಸಿದೆ. ರಾಪಿಡೋ, ನಮ್ಮ ಯಾತ್ರಿ ಸೇರಿದಂತೆ 9 ಆಪ್‌ಗಳ ಮೂಲಕ ಪ್ರಯಾಣಿಕರು ಈಗ ಮೆಟ್ರೋ ಟಿಕೆಟ್‌ಗಳನ್ನು ಬುಕ್ ಮಾಡಬಹುದು.

ಬೆಂಗಳೂರು (ಜು.08): ನಮ್ಮ ಮೆಟ್ರೋ ಪ್ರಯಾಣಿಕರ ಸೇವೆಗೆ ಡಿಜಿಟಲ್ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ದೃಷ್ಟಿಯಿಂದ, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ತನ್ನ ಸೇವೆಗಳಲ್ಲಿ ಮಹತ್ವಪೂರ್ಣ ಬದಲಾವಣೆ ಮಾಡಿದೆ. ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ಓಎನ್‌ಡಿಸಿ) ಮೂಲಕ ಕ್ಯೂಆರ್ ಟಿಕೆಟ್ ಸೇವೆ ನೀಡಲು ಚಾಲನೆ ನೀಡಿದೆ. ರಾಪಿಡೋ, ನಮ್ಮ ಯಾತ್ರಿ ಸೇರಿದಂತೆ 9 ಆಪ್ ಮೂಲಕ ನಮ್ಮ ಮೆಟ್ರೋ ಪ್ರಯಾಣಕ್ಕೆ ಕ್ಯೂಆರ್ ಟಿಕೆಟ್ ಬುಕಿಂಗ್ ಮಾಡಿ ಪ್ರಯಾಣ ಮಾಡಬಹುದು.

ಈ ಹೊಸ ಸೌಲಭ್ಯದಿಂದ, ಪ್ರಯಾಣಿಕರು ಈಗಿನಿಂದ ಈಜ್ ಮೈ ಟ್ರಿಪ್ (EaseMyTrip), ಹೈವೇ ಡಿಲೈಟ್ (Highway Delite), ಮೈಲ್ಸ್ ಅಂಡ್ ಕಿಲೋಮೀಟರ್ಸ್ (Miles & Kilometres via Telegram), ನಮ್ಮ ಯಾತ್ರಿ (Namma Yatri), ವನ್ ಟಿಕೆಟ್ (OneTicket), ರಾಪಿಡೋ (Rapido), ರೆಡ್ಬಸ್ (Redbus), ಟಮ್ಮಾಕ್ (Tummoc) ಮತ್ತು ಯಾತ್ರಿ – ಸಿಟಿ ಟ್ರಾವೆಲ್ ಗೈಡ್ (Yatri – City Travel Guide) ಎನ್ನುವ ಒಂಬತ್ತು ಜನಪ್ರಿಯ ಅಪ್ಲಿಕೇಶನ್‌ಗಳ ಮೂಲಕ ಬಿಎಂಆರ್‌ಸಿಎಲ್ ಕ್ಯೂಆರ್ ಟಿಕೆಟ್‌ಗಳನ್ನು ಖರೀದಿಸಬಹುದಾಗಿದೆ.

ಈ ಹೊಸ ಆಯ್ಕೆಗಳು ಈಗಾಗಲೇ ಲಭ್ಯವಿರುವ ಟಿಕೆಟ್ ಬುಕ್ಕಿಂಗ್ ಆಯ್ದ ಮಾರ್ಗಗಳಾದ ನಮ್ಮ ಮೆಟ್ರೋ ಮೊಬೈಲ್ ಆಪ್, ಬಿಎಂಆರ್‌ಸಿಎಲ್ ವಾಟ್ಸಾಪ್ ಚಾಟ್‌ಬಾಟ್ (8105556677), ಮತ್ತು ಪೇಟಿಎಂ (Paytm) ಆಪ್‌ಗೆ ಪೂರಕವಾಗಿ ಸೇರುತ್ತಿದ್ದು, ಡಿಜಿಟಲ್ ಬಳಕೆದಾರರಿಗೆ ಇನ್ನಷ್ಟು ಸುಲಭ, ಲಭ್ಯವಿರುವ ಮತ್ತು ಸಹಜ ಟಿಕೆಟ್ ಬುಕ್ಕಿಂಗ್ ಅನುಭವವನ್ನು ಒದಗಿಸುತ್ತವೆ.

ಈ ಕುರಿತು ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕರಾದ ಎಂ. ಮಹೇಶ್ವರ ರಾವ್, ಭಾ.ಆ.ಸೇ, ಅವರು ಮಾತನಾಡಿ, “ಡಿಜಿಟಲ್ ಟಿಕೆಟ್ ವ್ಯವಸ್ಥೆಯ ಈ ವಿಸ್ತರಣೆಯು ಮೊದಲ ಹಂತದಿಂದ ಕೊನೆಯ ಹಂತದ ಸಂಪರ್ಕವರೆಗೆ (ಫಸ್ಟ್, ಮಿಡ್ ಮತ್ತು ಲಾಸ್ಟ್ ಮೈಲ್ ಕನೆಕ್ಟಿವಿಟಿ) ಏಕೀಕೃತಗೊಳಿಸುವ ನಮ್ಮ ದೀರ್ಘಕಾಲಿಕ ಪ್ರಯತ್ನದ ಭಾಗವಾಗಿದೆ. ಈಗಾಗಲೇ 2023ರಿಂದ ಓಎನ್‌ಡಿಸಿ ನೆಟ್‌ವರ್ಕ್‌ನಲ್ಲಿ ಆಟೋ ಮತ್ತು ಟ್ಯಾಕ್ಸಿ ಸೇವೆಗಳು ಲಭ್ಯವಿರುವ ಹಿನ್ನೆಲೆಯಲ್ಲಿ, ಮೆಟ್ರೋ ಟಿಕೆಟ್‌ಗಳ ಸೇರ್ಪಡೆ ಬಹುಮಾದ್ಯಮ ಸಂಚಾರ ವ್ಯವಸ್ಥೆಯ ಪ್ರಮುಖ ಅಂಗವಾಗುತ್ತಿದೆ. ಪ್ರಯಾಣಿಕರು ಇದೀಗ ಒಂದೇ ಅಪ್ಲಿಕೇಶನ್‌ನಿಂದ ತಮ್ಮ ಮನೆಯಿಂದ ಗಮ್ಯಸ್ಥಳದವರೆಗೆ ತಮ್ಮ ಸಂಪೂರ್ಣ ಪ್ರಯಾಣವನ್ನು ಸುಲಭವಾಗಿ ಯೋಜಿಸಬಹುದಾಗಿದ್ದು, ಇದು ಸಮಯ ಮತ್ತು ಶ್ರಮವನ್ನು ದ್ವಿಗುಣವಾಗಿ ಉಳಿಸುತ್ತದೆ.

ಬಿಎಂಆರ್‌ಸಿಎಲ್ ಈ ಮೂಲಕ ಒಂದು ಮುಕ್ತ, ಒಳಗೊಳ್ಳುವಿಕೆಯಿಂದ ಕೂಡಿದ, ತಂತ್ರಜ್ಞಾನಾಧಾರಿತ ಭವಿಷ್ಯದ ನಗದುರಹಿತ ನಗರ ಸಂಚಾರ ವ್ಯವಸ್ಥೆ ಕಡೆಗೆ ನಿರ್ಣಾಯಕ ಹೆಜ್ಜೆ ಇಡುತ್ತಿದೆ.” ಎಂದು ಹೇಳಿದರು.

ವಾರದ ದಿನಗಳ್ಲಲಿ ಪ್ರತಿ ದಿನ 8.5 ಲಕ್ಷಕ್ಕಿಂತ ಹೆಚ್ಚು ಪ್ರಯಾಣಿಕರು ನಮ್ಮ ಮೆಟ್ರೋ ಸೇವೆ ಬಳಸುತ್ತಿರುವ ಸಂದರ್ಭದಲ್ಲಿ, ಬೆಂಗಳೂರು ನಗರದಲ್ಲಿ ಸುಗಮ, ಏಕೀಕೃತ ಹಾಗೂ ಆಪ್ ಆಧಾರಿತ ಸಾರಿಗೆ ಅನುಭವದತ್ತ ಮಹತ್ವದ ಮುಂದಿನ ಹೆಜ್ಜೆಯಾಗಿದೆ.

ಸಾರ್ವಜನಿಕರು ಮತ್ತು ಮೆಟ್ರೋ ಪ್ರಯಾಣಿಕರ ಮಾಹಿತಿಗಾಗಿ ನಿಮ್ಮ ಮಾಧ್ಯಮದ ಮೂಲಕ ವ್ಯಾಪಕ ಪ್ರಚಾರವನ್ನು ನೀಡಲು ಪತ್ರಿಕಾ ಮತ್ತು ಮಾಧ್ಯಮವನ್ನು ವಿನಂತಿಸಲಾಗಿದೆ.



Source link

Leave a Reply

Your email address will not be published. Required fields are marked *