RBI ಹೊಸ ನಿಯಮ: ಹೋಮ್‌ ಲೋನ್‌, ಉದ್ದಿಮೆ ಸಾಲ ಹೊಂದಿರುವವರಿಗೆ ಬಿಗ್‌ ನ್ಯೂಸ್‌! | No Prepayment Charges On Floating Rate Home Mse Loans From 2026 January 1 San

RBI ಹೊಸ ನಿಯಮ: ಹೋಮ್‌ ಲೋನ್‌, ಉದ್ದಿಮೆ ಸಾಲ ಹೊಂದಿರುವವರಿಗೆ ಬಿಗ್‌ ನ್ಯೂಸ್‌! | No Prepayment Charges On Floating Rate Home Mse Loans From 2026 January 1 San



Reserve Bank of India (Pre-payment Charges on Loans) Directions, 2025: ಪೂರ್ವಪಾವತಿ ಶುಲ್ಕಗಳಿಗೆ ಸಂಬಂಧಿಸಿದಂತೆ ಬ್ಯಾಂಕ್‌ಗಳು ವಿಭಿನ್ನ ಅಭ್ಯಾಸಗಳನ್ನು ಬಳಸುತ್ತಿರುವುದನ್ನು ಗಮನಿಸಿದ ನಂತರ, RBI, ಫೋರ್‌ಕ್ಲೋಸರ್ ಶುಲ್ಕಗಳ ವಿಧಿಸುವಿಕೆಯನ್ನು ತೆಗೆದುಹಾಕಲು ನಿರ್ಧರಿಸಿದೆ. 

ನವದೆಹಲಿ (ಜು.3): ಫ್ಲೋಟಿಂಗ್ ರೇಟ್‌ನಲ್ಲಿ (floating rate ) ಸಾಲ ಪಡೆದವರು, ಫ್ಲೋಟಿಂಗ್ ರೇಟ್‌ನ ಸಾಲಗಳು ಹೊಂದಿರುವ ಇತರ ಸಾಲಗಾರರು (loan borrower) ಮುಂದಿನ ವರ್ಷದಿಂದ ಯಾವುದೇ ಪೂರ್ವಪಾವತಿ ಶುಲ್ಕವನ್ನು (Pre-payment Charges ) ಪಾವತಿಸಬೇಕಾಗಿಲ್ಲ ಎಂದು ಆರ್‌ಬಿಐ (RBI) ತಿಳಿಸಿದೆ. ಹೊಸ ನಿಯಮವು 2026ರ ಜನವರಿ 1 ರಂದು ಅಥವಾ ನಂತರ ಮಂಜೂರು ಮಾಡಲಾದ ಅಥವಾ ರಿನೀವ್‌ ಮಾಡಿದ ಎಲ್ಲಾ ಫ್ಲೋಟಿಂಗ್-ರೇಟ್ ಸಾಲಗಳಿಗೆ ಮಾತ್ರ ಅನ್ವಯಿಸುತ್ತದೆ.

ಎಲ್ಲಾ ಫ್ಲೋಟಿಂಗ್ ದರ ಸಾಲಗಳ ಮೇಲೆ ಪೂರ್ವಪಾವತಿ ಶುಲ್ಕಗಳನ್ನು ವಿಧಿಸುವ ಕುರಿತು ಈ ಕೆಳಗಿನ ನಿರ್ದೇಶನಗಳನ್ನು ಪಾಲಿಸುವಂತೆ ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳಂತಹ ಎಲ್ಲಾ ನಿಯಂತ್ರಿತ ಘಟಕಗಳಿಗೆ (ಆರ್‌ಐ) ಆರ್‌ಬಿಐ ಸೂಚನೆ ನೀಡಿದೆ.

ವೈಯಕ್ತಿಕ ಸಾಲಗಾರರು ಮತ್ತು ಮಧ್ಯಮ ಮತ್ತು ಸಣ್ಣ ಉದ್ಯಮಗಳಿಗೆ ಪರಿಹಾರವಾಗಿ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಬುಧವಾರ ಮಾರ್ಗಸೂಚಿಗಳನ್ನು ಹೊರಡಿಸಿದೆ. ನಿಯಂತ್ರಿತ ಸಂಸ್ಥೆಗಳು ನೀಡಿದ ಸಾಲಗಳ ಮೇಲೆ ಪೂರ್ವಪಾವತಿ ಶುಲ್ಕವನ್ನು ವಿಧಿಸುವಂತಿಲ್ಲ ಎಂದು ತಿಳಿಸಿದೆ. ಈ ಮಾರ್ಗಸೂಚಿಗಳು ಜನವರಿ 1, 2026 ರಂದು ಮಂಜೂರು ಮಾಡಲಾದ ಅಥವಾ ರಿನೀವ್‌ ಮಾಡಿದ ಎಲ್ಲಾ ಸಾಲಗಳಿಗೆ ಅನ್ವಯಿಸುತ್ತವೆ.

ಮಾರ್ಗಸೂಚಿಗಳ ಪ್ರಕಾರ, ವ್ಯವಹಾರವನ್ನು ಹೊರತುಪಡಿಸಿ ಇತರ ಉದ್ದೇಶಗಳಿಗಾಗಿ ಸಾಲವನ್ನು ನೀಡಿದ್ದರೆ, ನಿಯಂತ್ರಿತ ಸಂಸ್ಥೆಗಳು ಸಾಲಗಳ ಮೇಲೆ ಯಾವುದೇ ಪೂರ್ವಪಾವತಿ ಶುಲ್ಕವನ್ನು ವಿಧಿಸುವಂತಿಲ್ಲ. ಆದರೆ, ಅದು ವ್ಯಾಪಾರ ಸಾಲವಾಗಿದ್ದರೆ, ಸಣ್ಣ ಹಣಕಾಸು ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಮಧ್ಯಮ ಹಂತದ NBFCಗಳು ಮತ್ತು ಶ್ರೇಣಿ-4 ನಗರ ಸಹಕಾರಿ ಬ್ಯಾಂಕುಗಳು ₹50 ಲಕ್ಷದವರೆಗಿನ ಸಾಲಗಳ ಮೇಲೆ ಯಾವುದೇ ಪೂರ್ವಪಾವತಿ ಶುಲ್ಕವನ್ನು ವಿಧಿಸುವಂತಿಲ್ಲ.

MSE ಗಳಿಗೆ ಮಂಜೂರು ಮಾಡಿದ ಸಾಲಗಳ ಸಂದರ್ಭದಲ್ಲಿ ಗ್ರಾಹಕರ ಕುಂದುಕೊರತೆಗಳು ಮತ್ತು ವಿವಾದಗಳಿಗೆ ಕಾರಣವಾದ ಪೂರ್ವಪಾವತಿ ಶುಲ್ಕಗಳನ್ನು ವಿಧಿಸುವ ವಿಷಯದಲ್ಲಿ ನಿಯಂತ್ರಿತ ಸಂಸ್ಥೆಗಳಲ್ಲಿ “ವಿಭಿನ್ನ ಅಭ್ಯಾಸಗಳು” ಇರುವುದನ್ನು RBI ಕಂಡುಕೊಂಡ ಕಾರಣ ಈ ಮಾನದಂಡಗಳನ್ನು ಹೊರಡಿಸಿದೆ. ಸಾಲಗಾರರು ಇತರ ಸಾಲದಾತರಿಗೆ ತಮ್ಮಸಾಲವನ್ನು ವರ್ಗಾವಣೆ ಮಾಡೋದನ್ನು ತಡೆಯಲು ಒಪ್ಪಂದಗಳಲ್ಲಿ ನಿರ್ಬಂಧಿತ ಷರತ್ತುಗಳಿವೆ ಎಂದು ಸಹ ಆರ್‌ಬಿಐ ಗಮನಿಸಿದೆ.

ಅದರಂತೆ, ಅಕ್ಟೋಬರ್ 9, 2024 ರ ಅಭಿವೃದ್ಧಿ ಮತ್ತು ನಿಯಂತ್ರಕ ನೀತಿಗಳ ಹೇಳಿಕೆಯಲ್ಲಿ ಘೋಷಿಸಿದಂತೆ, ಈ ನಿಟ್ಟಿನಲ್ಲಿ ಕರಡು ಸುತ್ತೋಲೆಯನ್ನು ಸಾರ್ವಜನಿಕ ಸಮಾಲೋಚನೆಗಾಗಿ ಫೆಬ್ರವರಿ 21 ರಂದು ಹೊರಡಿಸಲಾಗಿತ್ತು.

ಯಾರಿಗೆಲ್ಲಾ ಲಾಭ?

ಆರ್‌ಬಿಐ ನಿರ್ಧಾರವು ಫ್ಲೋಟಿಂಗ್‌ ರೇಟ್‌ ಗೃಹ ಮತ್ತು ಇತರ ಸಾಲ ಸಾಲಗಾರರಿಗೆ ಪ್ರಯೋಜನವನ್ನು ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಗೃಹ ಸಾಲಗಳು ಫ್ಲೋಟಿಂಗ್‌ ರೇಟ್‌ ಸಾಲಗಳಾಗಿವೆ. ಈ ನಿರ್ಧಾರವು ಎಂಎಸ್‌ಇ ಸಾಲಗಾರರು ಸೇರಿದಂತೆ ಎಲ್ಲಾ ಫ್ಲೋಟಿಂಗ್‌ ರೇಟ್‌ ಸಾಲಗಳ ಸಾಲಗಾರರಿಗೂ ಪ್ರಯೋಜನವನ್ನು ನೀಡುತ್ತದೆ. ಸಾಲಗಳ ಪೂರ್ವಪಾವತಿಗೆ ಬಳಸುವ ನಿಧಿಯ ಮೂಲವನ್ನು ಲೆಕ್ಕಿಸದೆ, ಭಾಗಶಃ ಅಥವಾ ಪೂರ್ಣವಾಗಿ ಮತ್ತು ಯಾವುದೇ ಕನಿಷ್ಠ ಲಾಕ್-ಇನ್ ಅವಧಿಯಿಲ್ಲದೆ ಮೇಲಿನ ನಿರ್ದೇಶನಗಳು ಅನ್ವಯವಾಗುತ್ತವೆ ಎಂದು ಕೇಂದ್ರ ಬ್ಯಾಂಕ್ ಹೇಳಿದೆ.

ಸ್ಥಿರ-ಅವಧಿಯ ಸಾಲಗಳ ಕಥೆಯೇನು: ಆರ್‌ಬಿಐ ಸ್ಥಿರ-ಅವಧಿಯ ಸಾಲಗಳ ಪೂರ್ವಪಾವತಿ ಶುಲ್ಕಗಳ ಬಗ್ಗೆಯೂ ಕೆಲವು ನಿರ್ಬಂಧಗಳನ್ನು ವಿಧಿಸಿದೆ.”ಸ್ಥಿರ ಅವಧಿ ಸಾಲಗಳ ಸಂದರ್ಭದಲ್ಲಿ, ಆರ್‌ಇಯಿಂದ ಪೂರ್ವಪಾವತಿ ಶುಲ್ಕಗಳು ವಿಧಿಸಲ್ಪಟ್ಟರೆ, ಪೂರ್ವಪಾವತಿ ಮಾಡಲಾದ ಮೊತ್ತವನ್ನು ಆಧರಿಸಿರುತ್ತದೆ. ನಗದು ಕ್ರೆಡಿಟ್/ಓವರ್‌ಡ್ರಾಫ್ಟ್ ಸೌಲಭ್ಯಗಳ ಸಂದರ್ಭದಲ್ಲಿ, ನಿಗದಿತ ದಿನಾಂಕದ ಮೊದಲು ಸೌಲಭ್ಯವನ್ನು ಮುಚ್ಚಿದಾಗ ಪೂರ್ವಪಾವತಿ ಶುಲ್ಕಗಳನ್ನು ಮಂಜೂರು ಮಾಡಿದ ಮಿತಿಯನ್ನು ಮೀರದ ಮೊತ್ತಕ್ಕೆ ವಿಧಿಸಲಾಗುತ್ತದೆ” ಎಂದು ಆರ್‌ಬಿಐ ಹೇಳಿದೆ.

 



Source link

Leave a Reply

Your email address will not be published. Required fields are marked *