Tumkur accident Police officer death | ತುಮಕೂರು: ಅಪಘಾತದಲ್ಲಿ ಗಾಯಗೊಂಡಿದ್ದ ಎಎಸ್ಐ ಗಿರೀಶ್ ಚಿಕಿತ್ಸೆ ಫಲಕಾರಿಯಾಗದೇ ದುರ್ಮರಣ | Asi Girish Dies After To Injuries In Tumkur Accident Rav

Tumkur accident Police officer death | ತುಮಕೂರು: ಅಪಘಾತದಲ್ಲಿ ಗಾಯಗೊಂಡಿದ್ದ ಎಎಸ್ಐ ಗಿರೀಶ್ ಚಿಕಿತ್ಸೆ ಫಲಕಾರಿಯಾಗದೇ ದುರ್ಮರಣ | Asi Girish Dies After To Injuries In Tumkur Accident Rav



ತುಮಕೂರಿನ ಎಸ್ಪಿ ಕಚೇರಿಯ ಎಎಸ್ಐ ಗಿರೀಶ್ ಅವರು ಬೈಕ್ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ರಸ್ತೆಗೆ ಅಡ್ಡಬಂದ ಹಸುವಿನಿಂದಾಗಿ ಬಿದ್ದು ತಲೆಗೆ ಪೆಟ್ಟಾಗಿತ್ತು.

ತುಮಕೂರು (ಜುಲೈ.21): ತುಮಕೂರಿನ ಎಸ್‌ಪಿ ಕಚೇರಿಯಲ್ಲಿ ರೈಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್ಐ ಗಿರೀಶ್ (57) ಅವರು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆಗೆ ಸ್ಪಂದಿಸದೇ ಇಂದು (ಜುಲೈ 21, 2025) ದುರ್ಮರಣ ಹೊಂದಿದ್ದಾರೆ.

ಕಳೆದ ಶನಿವಾರ ಸಂಜೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ತುಮಕೂರು ನಗರದ ಎಸ್‌ಐಟಿ ಕಾಲೇಜಿನ ಮುಂಭಾಗದಲ್ಲಿ ರಸ್ತೆಗೆ ಅಡ್ಡಬಂದ ಹಸುವಿನಿಂದಾಗಿ ಗಿರೀಶ್ ಅವರು ಬೈಕ್‌ನಿಂದ ಕೆಳಗೆ ಬಿದ್ದು ತಲೆಗೆ ತೀವ್ರ ಪೆಟ್ಟಾಗಿತ್ತು. ತಕ್ಷಣವೇ ಅವರನ್ನು ತುಮಕೂರಿನ ಶ್ರೀದೇವಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಗಿರೀಶ್ ಅವರು ಇಂದು ಸಾವನ್ನಪ್ಪಿದ್ದಾರೆ.

ಗಿರೀಶ್ ಅವರ ಅಕಾಲಿಕ ನಿಧನಕ್ಕೆ ಪೊಲೀಸ್ ಇಲಾಖೆಯಲ್ಲಿ ಶೋಕದ ಛಾಯೆ ಆವರಿಸಿದ್ದು, ಕುಟುಂಬಕ್ಕೆ ಸಾಂತ್ವನ ಸೂಚಿಸಲಾಗಿದೆ.

 



Source link

Leave a Reply

Your email address will not be published. Required fields are marked *