Headlines

6ನೇ ಕ್ಲಾಸ್‌ನ 53% ಮಕ್ಕಳಿಗೆ ಮಾತ್ರ 10ರ ತನಕ ಮಗ್ಗಿ ಬರೋದು : ಕೇಂದ್ರ ಶಿಕ್ಷಣ ಸಚಿವಾಲಯ ನಡೆಸಿದ ಸಮೀಕ್ಷೆ | Ministry Survey Finds Only 53 Percent Of Class 6 Students Know Tables Up To 10

6ನೇ ಕ್ಲಾಸ್‌ನ 53% ಮಕ್ಕಳಿಗೆ ಮಾತ್ರ 10ರ ತನಕ ಮಗ್ಗಿ ಬರೋದು : ಕೇಂದ್ರ ಶಿಕ್ಷಣ ಸಚಿವಾಲಯ ನಡೆಸಿದ ಸಮೀಕ್ಷೆ | Ministry Survey Finds Only 53 Percent Of Class 6 Students Know Tables Up To 10



 ಮಕ್ಕಳು ಎಷ್ಟೇ ಚುರುಕಾದರೂ, ಗಣಿತಕ್ಕೆ ‘ಕಬ್ಬಿಣದ ಕಡಲೆ’ ಎಂಬ ಹಣೆಪಟ್ಟಿ ತಪ್ಪದು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕೇಂದ್ರ ಶಿಕ್ಷಣ ಸಚಿವಾಲಯ ನಡೆಸಿದ ಸಮೀಕ್ಷೆಯೊಂದರಲ್ಲಿ, 6ನೇ ತರಗತಿಯ ವಿದ್ಯಾರ್ಥಿಗಳಲ್ಲಿ ಕೇವಲ ಶೇ.53ರಷ್ಟು ಮಕ್ಕಳಿಗೆ 10ರ ವರೆಗಿನ ಮಗ್ಗಿ ಬರುತ್ತದೆ ಎಂದು ತಿಳಿದುಬಂದಿದೆ.

ನವದೆಹಲಿ: ಜಗತ್ತು ಎಷ್ಟೇ ಮುಂದುವರೆದು, ಮಕ್ಕಳು ಎಷ್ಟೇ ಚುರುಕಾದರೂ, ಗಣಿತಕ್ಕೆ ‘ಕಬ್ಬಿಣದ ಕಡಲೆ’ ಎಂಬ ಹಣೆಪಟ್ಟಿ ತಪ್ಪದು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕೇಂದ್ರ ಶಿಕ್ಷಣ ಸಚಿವಾಲಯ ನಡೆಸಿದ ಸಮೀಕ್ಷೆಯೊಂದರಲ್ಲಿ, 6ನೇ ತರಗತಿಯ ವಿದ್ಯಾರ್ಥಿಗಳಲ್ಲಿ ಕೇವಲ ಶೇ.53ರಷ್ಟು ಮಕ್ಕಳಿಗೆ 10ರ ವರೆಗಿನ ಮಗ್ಗಿ ಬರುತ್ತದೆ ಎಂದು ತಿಳಿದುಬಂದಿದೆ.

ಎನ್‌ಸಿಇಆರ್‌ಟಿಯ ಘಟಕವಾಗಿರುವ ಪರಾಖ್‌ ರಾಷ್ಟ್ರೀಯ ಸರ್ವೇಕ್ಷಣವನ್ನು ಕಳೆದ ವರ್ಷ ಡಿ.4ರಂದು ನಡೆಸಲಾಗಿತ್ತು. ದೇಶದ 36 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 781 ಜಿಲ್ಲೆಗಳ 74,229 ಶಾಲೆಗಳಲ್ಲಿ 3, 6 ಮತ್ತು 9 ನೇ ತರಗತಿಗಳ ಸರ್ಕಾರಿ ಮತ್ತು ಖಾಸಗಿ ಶಾಲೆಗಳ 21,15,022 ವಿದ್ಯಾರ್ಥಿಗಳು ಮತ್ತು ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.

ವರದಿಯಲ್ಲೇನಿದೆ?:

3ನೇ ತರಗತಿಯ ಶೇ.55ರಷ್ಟು ಮಕ್ಕಳು 99ರ ವರೆಗೆ ಸಂಖ್ಯೆಗಳನ್ನು ಏರುಗತಿಯಲ್ಲಿ(1ರಿಂದ 99) ಅಥವಾ ಅದರ ಉಲ್ಟಾ(99ರಿಂದ 1) ಬರೆಯಲು ಸಕ್ಷಮರಾಗಿದ್ದಾರೆ. ಶೇ.58ರಷ್ಟು ಮಕ್ಕಳು ಎರಡಂಕಿ ಸಂಖ್ಯೆಗಳನ್ನು ಕೂಡಿಸಿ ಕಳೆಯಬಲ್ಲರು.

6ನೇ ತರಗತಿಯ ಶೇ.53ರಷ್ಟು ವಿದ್ಯಾರ್ಥಿಗಳು 10ರ ತನಕ ಮಗ್ಗಿಯನ್ನು ಕಲಿತಿದ್ದು, ದಿನನಿತ್ಯ ಬೇಕಾಗುವ ಗಣಿತವನ್ನು ಕರಗತಗೊಳಿಸಿಕೊಂಡಿದ್ದಾರೆ. ಅನ್ಯ ವಿಷಯಗಳಿಗೆ ಹೋಲಿಸಿದರೆ ಗಣಿತದಲ್ಲೇ ಅತಿ ಕಡಿಮೆ ಅಂಕಗಳನ್ನು ಪಡೆದಿದ್ದಾರೆ.

9ನೇ ತರಗತಿಯಲ್ಲಿ, ಅಚ್ಚರಿಯೆಂಬಂತೆ ಕೇಂದ್ರ ಸರ್ಕಾರಿ ಶಾಲೆಗಳ ಮಕ್ಕಳು ಗಣಿತದಲ್ಲಿ ಒಳ್ಳೆ ಅಂಕ ಪಡೆದಿದ್ದಾರೆ. ಆದರೆ ಖಾಸಗಿ ಶಾಲೆಗಳಲ್ಲಿ ಕಳಪೆ ಗಣಿತ ಪ್ರದರ್ಶನ ಮುಂದುವರೆದಿದೆ.



Source link

Leave a Reply

Your email address will not be published. Required fields are marked *