ಪ್ರತಿಷ್ಠಿತ ಟಿಎನ್ಐಟಿ ಸಂಸ್ಥೆ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರೋ ಪತ್ರಕರ್ತರನ್ನು ಗುರುತಿಸಿ ಪ್ರಶಸ್ತಿ ನೀಡುವ ಮೂಲಕ ಕಳೆದ ಎಂಟು ವರ್ಷಗಳಿಂದ ಮಾಧ್ಯಮದ ಜವಾಬ್ದಾರಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತಿದೆ. ಈ ಬಾರಿ ಟಿಎನ್ಐಟಿ ಸಂಸ್ಥೆದಕ್ಷಿಣ ಭಾರತದ ಮಾಧ್ಯಮಗಳಲ್ಲಿರುವ ಪತ್ರಕರ್ತರಿಗೂ ಪ್ರಶಸ್ತಿ ನೀಡಿ ಗೌರವಿಸಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಸ್ಥೆಯಲ್ಲಿನ ಐವರಿಗೆ TNIT ಪ್ರಶಸ್ತಿ ನೀಡಿ ಗೌರವಿಸಿದೆ. ಬೆಸ್ಟ್ ಆಲ್ ರೌಂಡರ್ ಇನ್ ಆ್ಯಂಕರ್ಸ್ ವಿಭಾಗದಿಂದ ಸುವರ್ಣ ನ್ಯೂಸ್ ಆ್ಯಂಕರ್ ಚೀಫ್ ಭಾವನ ನಾಗಯ್ಯ, ಬೆಸ್ಟ್ ಬ್ಯೂರೋ ಹೆಡ್ ವಿಭಾಗದಿಂದ ಮೆಟ್ರೋ ಬ್ಯೂರೋ ಚೀಫ್ ರಜನಿ ರಾವ್ಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.ಬೆಸ್ಟ್ ವಾಯ್ಸ್ ಓವರ್ ಮೇಲ್ ವಿಭಾಗದಲ್ಲಿ ಸೀನಿಯರ್ ಬುಲೆಟಿನ್ ಪ್ರೋಡ್ಯೂಸರ್ ಶಿವರಾಮ್ ಗೌಡ, ಬೆಸ್ಟ್ ವಾಯ್ಸ್ ಓವರ್ ಫೀಮೇಲ್ ಕ್ಯಾಟಗರಿಯಲ್ಲಿ ಗೌತಮಿ, ಹಾಗೂ ಬೆಸ್ಟ್ ಆ್ಯಂಕರ್ ವಿಭಾಗದಲ್ಲಿ ನಯನಾ ಪೂಜಾರಿ, ಪ್ರಶಸ್ತಿಗೆ ಭಾಜನರಾಗಿದ್ದಾರೆ.