ಮೂರು ಪಕ್ಷದ ಫ್ಲ್ಯಾಗ್ Image Credit source: Moneycontrol.com
ನವದೆಹಲಿ, ಜೂನ್ 23: ಭಾರತದ ನಾಲ್ಕು ರಾಜ್ಯಗಳ 5 ವಿಧಾನಸಭಾ ಸ್ಥಾನಗಳಿಗೆ ಜೂನ್ 19ರಂದು ನಡೆದ ಉಪಚುನಾವಣೆ(Assembly By-Eelection)ಯ ಫಲಿತಾಂಶ ಇಂದು ಪ್ರಕಟಗೊಳ್ಳಲಿದೆ. ಗುಜರಾತ್, ಕೇರಳ, ಪಶ್ಚಿಮ ಬಂಗಾಳ ಮತ್ತು ಪಂಜಾಬ್‌ನ ಐದು ವಿಧಾನಸಭಾ ಸ್ಥಾನಗಳಿಗೆ ಉಪ ಚುನಾವಣೆ ನಡೆದಿತ್ತು. ಕೇರಳದ ನೀಲಾಂಬೂರ್‌ನಲ್ಲಿ ಸ್ವತಂತ್ರ ಶಾಸಕ ಪಿ.ವಿ.ಅನ್ವರ್ ಹಾಗೂ ಗುಜರಾತ್‌ನ ವಿಸಾವದರ್‌ನಲ್ಲಿ ಆಪ್ ಶಾಸಕ ಭೂಪೇಂದ್ರಭಾಯಿ ರಾಜೀನಾಮೆಯಿಂದ ಉಪಚುನಾವಣೆ ನಡೆದಿತ್ತು.
ಗುಜರಾತ್‌ನ ಕಡಿ , ಪಶ್ಚಿಮ ಬಂಗಾಳದ ಕಾಳಿಗಂಜ್ ಹಾಗೂ ಪಂಜಾಬ್‌ನ ಲುಧಿಯಾನ ಪಶ್ಚಿಮ ಕ್ಷೇತ್ರಗಳಲ್ಲಿ ಶಾಸಕರ ನಿಧನದಿಂದಾಗಿ ತೆರವಾದ ಸ್ಥಾನಗಳಿಗೆ ಉಪಚುನಾವಣೆ ನಡೆದಿತ್ತು. ಫಲಿತಾಂಶ ಜೂ.23ರಂದು ಪ್ರಕಟವಾಗಲಿದೆ.
ಗುಜರಾತ್‌ನ ಕಡಿ ಮತ್ತು ವಿಸಾವದರ್ ವಿಧಾನಸಭೆ ಸ್ಥಾನಗಳು, ಕೇರಳದ ನೀಲಂಬೂರ್, ಪಶ್ಚಿಮ ಬಂಗಾಳದ ಕಾಳಿಗಂಜ್ ಮತ್ತು ಪಂಜಾಬ್‌ನ ಲುಧಿಯಾನ ವಿಧಾನಸಭಾ ಸ್ಥಾನಗಳಿಗೆ ಉಪ ಚುನಾವಣೆ ನಡೆದಿದೆ.ಈ ಕ್ಷೇತ್ರಗಳ ಸದಸ್ಯರ ಅಕಾಲಿಕ ಮರಣ ಮತ್ತು ರಾಜೀನಾಮೆಯಿಂದಾಗಿ ಸ್ಥಾನಗಳು ಖಾಲಿ ಇದ್ದವು. ಎಲ್ಲಾ ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ಮಾಡಲಾಗಿತ್ತು.
ವೆಬ್‌ಕಾಸ್ಟಿಂಗ್ ಎಂದರೇನು?: ವೆಬ್‌ಕಾಸ್ಟಿಂಗ್ ಎಂದರೆ ನಿರ್ದಿಷ್ಠ ವಿಷಯವನ್ನು ನೇರಪ್ರಸಾರ ಮಾಡುವುದು. ಅಂದರೆ, ಅಂತರ್ಜಾಲದ ನೆರವಿನಿಂದ ಆಡಿಯೋ ಅಥವಾ ವಿಡಿಯೋ ಮಾಡಿ ಅದನ್ನು ವೀಕ್ಷಕರಿಗೆ ನೇರವಾಗಿ ಪ್ರಸಾರ ಮಾಡುವ ಪ್ರಕ್ರಿಯೆಯಾಗಿದೆ. ಮತಗಟ್ಟೆಗಳಲ್ಲಿ ನಡೆಯುವ ಮತ್ತು ಮತ ಎಣಿಕೆ ಪಾರದರ್ಶಕತೆಯನ್ನು ಕಾಪಾಡಲು ಚುನಾವಣಾ ಆಯೋಗವು ಅದನ್ನು ನೇರಪ್ರಸಾರ ಮಾಡಲು ವೆಬ್‌ಕಾಸ್ಟಿಂಗ್ ಪದ್ಧತಿಯನ್ನು ಅಳವಡಿಸುತ್ತಿದೆ.
ಮತ್ತಷ್ಟು ಓದಿ:ಮತಗಟ್ಟೆಗಳ ವಿಡಿಯೋ ನೀಡುವುದರಿಂದ ಮತದಾರರ ಖಾಸಗಿತನಕ್ಕೆ ಧಕ್ಕೆ; ಕಾಂಗ್ರೆಸ್ ಆರೋಪಕ್ಕೆ ಚುನಾವಣಾ ಆಯೋಗ ಸಮರ್ಥನೆ
ನಾಮಪತ್ರ ಸಲ್ಲಿಸಲು ಜೂನ್ 2 ಕೊನೆಯ ದಿನಾಂಕವಾಗಿತ್ತು, ಉಮೇದುವಾರಿಕೆ ಹಿಂಪಡೆಯಲು ಜೂನ್ 5 ಅಂತಿಮ ದಿನವಾಗಿತ್ತು. ಜೂನ್ 19ರಂದು ಚುನಾವಣೆ ನಡೆದಿದ್ದು ಇಂದು ಫಲಿತಾಂಶ ಹೊರಬರಲಿದೆ. ಗುಜರಾತ್ನಲ್ಲಿ 2007 ರಿಂದ ಪಕ್ಷ ಗೆದ್ದಿಲ್ಲದ ವಿಸಾವದರ್ ವಿಧಾನಸಭಾ ಸ್ಥಾನವನ್ನು ಬಿಜೆಪಿ ಮರಳಿ ಪಡೆಯಲು ನೋಡುತ್ತಿದೆ.
ಆಗಿನ ಎಎಪಿ ಶಾಸಕ ಭೂಪೇಂದ್ರ ಭಯಾನಿ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ ನಂತರ 2023 ರಿಂದ ಈ ಸ್ಥಾನ ಖಾಲಿಯಾಗಿದೆ. ಕೇರಳದ ನಿಲಂಬೂರ್ ಕ್ಷೇತ್ರವನ್ನು ಕಾಂಗ್ರೆಸ್ ನ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಪ್ರತಿಷ್ಠೆಯ ಹೋರಾಟವೆಂದು ಪರಿಗಣಿಸಲಾಗಿದೆ. ಈ ಸ್ಥಾನ ಅವರ ವಯನಾಡ್ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ ಮತ್ತು ಜೂನ್ 19 ರಂದು ನಡೆದ ಉಪಚುನಾವಣೆಗೆ ಮುಂಚಿತವಾಗಿ ಅವರು ಈ ಪ್ರದೇಶದಲ್ಲಿ ರೋಡ್ ಶೋ ನಡೆಸಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ