
ಎಜ್‌ಬಾಸ್ಟನ್‌ನಲ್ಲಿ ಗಿಲ್ ಆರ್ಭಟ; ಹಲವು ದಾಖಲೆ ಪುಡಿಗಟ್ಟಿದ ಶುಭ್‌ಮನ್! | Shubman Gill Historic 269 Powers India To 587 In 2nd Test Vs England Kvn
ಶುಭ್‌ಮನ್ ಗಿಲ್ ಅವರ ಚೊಚ್ಚಲ ದ್ವಿಶತಕದ ನೆರವಿನಿಂದ ಭಾರತ ತಂಡವು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮೊತ್ತವನ್ನು ಗಳಿಸಿದೆ. ಇಂಗ್ಲೆಂಡ್ ತಂಡವು ಭಾರತದ ಬೃಹತ್ ಮೊತ್ತದ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದೆ. ಗಿಲ್ ಅವರ ದಾಖಲೆಯ ದ್ವಿಶತಕ ಭಾರತಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟಿದೆ. ಬರ್ಮಿಂಗ್‌ಹ್ಯಾಮ್: ಆರಂಭಿಕ ಟೆಸ್ಟ್‌ನಲ್ಲಿ ತನ್ನ ಎಡವಟ್ಟುಗಳಿಂದಲೇ ಸೋತಿದ್ದ ಭಾರತ ತಂಡ ಬರ್ಮಿಂಗ್‌ಹ್ಯಾಮ್‌ನಲ್ಲಿ ಅಕ್ಷರಶಃ ಅಬ್ಬರಿಸುತ್ತಿದೆ. ಭವಿಷ್ಯದ ಸೂಪರ್‌ಸ್ಟಾರ್ ಎಂದೇ ಕರೆಸಿಕೊಳ್ಳುವ ಹೊಸ ನಾಯಕ ಶುಭ್‌ಮನ್ ಗಿಲ್‌ರ ಅಮೋಘ, ಚೊಚ್ಚಲ ದ್ವಿಶತಕ ಟೀಂ ಇಂಡಿಯಾ…