ಮುಜರಾಯಿ ಇಲಾಖೆಗೆ ಲಕ್ಷ ಲಕ್ಷ ಆದಾಯ ತಂದ ದೇಗುಲ, ಸಮುದಾಯ ಭವನಗಳಲ್ಲಿನ ಶೂಟಿಂಗ್!
ಬೆಂಗಳೂರು, ಏಪ್ರಿಲ್ 13: ದೇವಾಲಯಗಳು ಮತ್ತು ಸಮುದಾಯ ಭವನಗಳು ಚಲನಚಿತ್ರ ಹಾಗೂ ಧಾರಾವಾಹಿ ಚಿತ್ರಕ್ಕಾಗಿ ಬಾಡಿಗೆಗೆ ನೀಡುವ ಮೂಲಕ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಇಲಾಖೆ ಕಳೆದ ಮೂರು ವರ್ಷಗಳಲ್ಲಿ 71 ಲಕ್ಷ ಆದಾಯ ಗಳಿಸಿದೆ. 2023–24ರಿಂದ 2025–26ರವರೆಗೆ ಚಿತ್ರ ಚಿತ್ರದಿಂದ 53.91 ಲಕ್ಷ ರೂ. , ಧಾರಾವಾಹಿಗಳಿಂದ 16.86 ಲಕ್ಷ ರೂ. ಬಂದಿದೆ. ಡಾಕ್ಯುಮೆಂಟರಿ, ನ್ಯೂಸ್ ಫೀಚರ್ ಹಾಗೂ ಜಾಹೀರಾತುಗಳಿಂದ ಹೆಚ್ಚುವರಿಯಾಗಿ 42 ಸಾವಿರ ಹಣವನ್ನು ಇಲಾಖೆ ಗಳಿಸಿದೆ. ಮೈಸೂರಿನ ನಂಜರಾಜ ಬಹದೂರು…