ಕೊಡಗು: 3000 ಎಕರೆ ಕಾಫಿ ಎಸ್ಟೇಟ್ ಹರಾಜಿಗೆ ಮುಂದಾದ ಬ್ಯಾಂಕ್ಗಳು; ಆತಂಕದಲ್ಲಿ ಮಾಲೀಕರು, ಆಗಿದ್ದೇನು?
ಕೊಡಗು, ಏಪ್ರಿಲ್ 13: ಒಂದು ಕಾಲದಲ್ಲಿ ಸಾವಿರಾರು ಕಾಫಿ ತೋಟದ (ಕಾಫಿ ಎಸ್ಟೇಟ್‌ಗಳು) ಒಡೆಯರಾಗಿ, ಕಾರು-ಬಂಗಲೆಯೊಂದಿಗೆ ರಾಜವೈಭೋಗದ ಜೀವನ ನಡೆಸುತ್ತಿದ್ದ ಕೊಡಗಿನ ಬೆಳೆಗಾರರು ಇಂದು ಅಕ್ಷರಶಃ ಬೀದಿಗೆ ಬೀಳುವ ಆತಂಕ ಎದುರಿಸುತ್ತಿದ್ದಾರೆ. ಸರಿಸುಮಾರು 3000 ಗೂ ಅಧಿಕ ಅಧಿಕ ವಿಸ್ತೀರ್ಣದ ಕಾಫಿ ಎಸ್ಟೇಟ್ಗಳು ಕೈತಪ್ಪಿ ಹೋಗುವ ಹಂತಕ್ಕೆ ತಲುಪಿವೆ. ಕಮರ್ಷಿಯಲ್ ಬ್ಯಾಂಕ್‌ಗಳಲ್ಲಿ ತೋಟವನ್ನು ಅಡವಿಟ್ಟು ಪಡೆದ ಸಾಲ (ಸಾಲ) ಇದೀಗ ಬೆಳೆಗಾರರ ಪಾಲಿಗೆ ಉರುಳಾಗಿ ಪರಿಣಮಿಸಿದೆ. ಸಾವಿರಾರು ರೈತರಿಂದ 500 ಕೋಟಿ ರೂ ಕೊಡಗು, ಹಾಸನ, ಚಿಕ್ಕಮಗಳೂರು…