ಅಹಮದಾಬಾದ್‌ನ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ 275 ಮಂದಿ ಸಾವು; ಸರ್ಕಾರದಿಂದ ಅಧಿಕೃತ ಘೋಷಣೆ
ನವದೆಹಲಿ, ಜೂನ್ 24: ಜೂನ್ 12ರಂದು ಗುಜರಾತ್ನ ಅಹಮದಾಬಾದ್‌ನಲ್ಲಿ (Ahmedabad Plane Crash) ಸಂಭವಿಸಿದ ಏರ್ ಇಂಡಿಯಾ (Air India) ವಿಮಾನ ಅಪಘಾತದಲ್ಲಿ 275 ಜನರು ಸಾವನ್ನಪ್ಪಿದ್ದಾರೆ ಎಂದು ಗುಜರಾತ್ ಆರೋಗ್ಯ ಇಲಾಖೆ ಇಂದು ದೃಢಪಡಿಸಿದೆ. ಈ ಘಟನೆಯ ನಂತರ ಬಿಡುಗಡೆಯಾದ ಮೊದಲ ಅಧಿಕೃತ ಸಾವಿನ ಸಂಖ್ಯೆ ಇದು. ಅಧಿಕಾರಿಗಳ ಪ್ರಕಾರ, ಮೃತರಲ್ಲಿ 241 ಮಂದಿ ಬೋಯಿಂಗ್ 787-8 ಡ್ರೀಮ್‌ಲೈನರ್‌ನಲ್ಲಿದ್ದರೆ, ಈ ವಿಮಾನವು ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ…