ಮದ್ಯದಂಗಡಿ ಮಾಲೀಕರಿಗೆ ಸಿಹಿ ಸುದ್ದಿ: ನವೀಕರಣ ಶುಲ್ಕ ಇಳಿಕೆ
ಬೆಂಗಳೂರು, ಜೂನ್ 24: ಖಚಾನೆಗೆ ಅತಿ ಹೆಚ್ಚು ವರಮಾನ ತರುವ ಅಬಕಾರಿ ಇಲಾಖೆಯಿಂದ (Excise Department) ಇನ್ನೂ ಹೆಚ್ಚಿನ ರಾಜಸ್ವ ಸಂಗ್ರಹಕ್ಕೆ ಸರ್ಕಾರ ಮುಂದಾಗಿದ್ದು, ಅಬಕಾರಿ ಸನ್ನದುಗಳ ನವೀಕರಣ ಶುಲ್ಕವನ್ನು (Excise Certificate Renewal Fee) ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿತ್ತು. ಈ ತೀರ್ಮಾನದಿಂದ ಹೈರಾಣಾಗಿರುವ ಮದ್ಯದಂಗಡಿ ಮಾಲೀಕರು ನವೀಲಕರಣ ಶುಲ್ಕವನ್ನು ಕಡಿಮೆ ಮಾಡುವಂತೆ ಒತ್ತಡ ಹೇರುತ್ತಿದ್ದರು. ಅಲ್ಲದೆ, ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲು ಮುಂದಾಗಿದ್ದರು. ಇದೀಗ, ಮದ್ಯದಂಗಡಿ ಮಾಲೀಕರ ಒತ್ತಡಕ್ಕೆ ಮಣಿದ ಸರ್ಕಾರ ಲೈಸೆನ್ಸ್ ನವೀಕರಣ…