ಮುಂಬೈ: ಕ್ಯಾನ್ಸರ್ಪೀಡಿತ ಅಜ್ಜಿಯನ್ನು ಕಸದ ರಾಶಿಯಲ್ಲಿ ಎಸೆದು ಹೋದ ಮೊಮ್ಮಗ
ಮುಂಬೈ, ಜೂನ್ 24: ಮಾನವೀಯತೆ ಎಲ್ಲಿದೆ? ಇನ್ನೆಂಥಾ ಕ್ರೂರಿ ಇರಬೇಕು ಆತ. ತನ್ನನ್ನು ಸಾಕಿ ಬೆಳೆಸಿದ್ದ ಅಜ್ಜಿಗೆ ಕ್ಯಾನ್ಸರ್(Cancer) ಬಂದಿದೆ ಎಂದು ಮರುಗುವ ಬದಲು ಮೊಮ್ಮಗನೊಬ್ಬ ಕಸದ ತೊಟ್ಟಿಯಲ್ಲಿ ಎಸೆದು ಹೋಗಿರುವ ಹೃದಯ ವಿದ್ರಾವಕ ಘಟನೆ ಮುಂಬೈನಲ್ಲಿ ನಡೆದಿದೆ. 60 ವರ್ಷದ ಯಶೋಧಾ ಗಾಯಕ್ವಾಡ್ ಅವರನ್ನು ಸ್ವಂತ ಮೊಮ್ಮಗನೇ ಕಸದ ರಾಶಿಯಲ್ಲಿ ಎಸೆದಿದ್ದಾನೆ. ಯಶೋಧಾ ಚರ್ಮದ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಶನಿವಾರ ಬೆಳಗ್ಗೆ ಆರ್ ಕಾಲೋನಿಯ ರಸ್ತೆಬದಿಯ ಕಸದ ರಾಶಿಯ ಮೇಲೆ ಮಹಿಳೆಯೊಬ್ಬರು ದುರ್ಬಲ ಸ್ಥಿತಿಯಲ್ಲಿ…