ರೋಚಕ ಹಂತ ತಲುಪಿದ ಹೆಡಿಂಗ್ಲಿ ಟೆಸ್ಟ್; ಕ್ಲೈಮ್ಯಾಕ್ಸ್ ಕದನ ಗೆಲ್ಲೋರು ಯಾರು?
<p>ಲೀಡ್ಸ್: 2025-27ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅನ್ನು ಗೆಲುವಿನೊಂದಿಗೆ ಆರಂಭಿಸಬೇಕು ಎನ್ನುವ ಭಾರತದ ನಿರೀಕ್ಷೆ ಈಡೇರಬಹುದು. ಇಂಗ್ಲೆಂಡ್ ವಿರುದ್ಧ ಇಲ್ಲಿನ ಹೆಡಿಂಗ್ಲಿ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನ 2ನೇ ಇನ್ನಿಂಗ್ಸ್ ನಲ್ಲೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿರುವ ಭಾರತ, 364 ರನ್ ಕಲೆಹಾಕಿ ಆತಿಥೇಯ ತಂಡದ ಗೆಲುವಿಗೆ 371 ರನ್ ಗುರಿ ನೀಡಿದೆ.</p><p>ಸಾಮಾನ್ಯವಾಗಿ ಪಂದ್ಯದಲ್ಲಿ ಒಂದು ದಿನ ಬಾಕಿ ಇರುವಾಗ ಈ ಮೊತ್ತ ದೊಡ್ಡದೆನಿಸಬಹುದು. ಆದರೆ, ಇಂಗ್ಲೆಂಡ್ ತನ್ನ ‘ಬಾಜ್ ಬಾಲ್’ ಶೈಲಿಯ ಆಟದಿಂದ ಯಾವುದೇ…